spot_img
spot_img

DHARAVI REDEVELOPMENT PROJECT : ಧಾರಾವಿ ಮೊದಲ ಮಹಡಿ ನಿವಾಸಿಗಳಿಗೂ ಸಿಗಲಿದೆ ಮನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai News:

ಸಾಂಪ್ರದಾಯಿಕವಾಗಿ, ಕೊಳಗೇರಿಗಳಲ್ಲಿ ಮೇಲ್ಮಹಡಿ ಬಾಡಿಗೆದಾರರನ್ನು ಅಕ್ರಮ ಎಂದು ಗುರುತಿಸಿ, ಅವರನ್ನು ಕೊಳಗೇರಿ ಪುನರ್ವಸತಿ ಯೋಜನೆಯಿಂದ ಹೊರಗೆ ಇಡಲಾಗುವುದು. ಇವರಿಗೆ ಯಾವುದೇ ಪರ್ಯಾಯ ಇಲ್ಲದಿರುವುದರಿಂದ ಇದು ಅನೇಕ ನಿವಾಸಿಗಳ ಸ್ಥಳಾಂತರದ ಆಕ್ರೋಶಕ್ಕೆ ಗುರಿಯಾಗುತ್ತದೆ.

ಕೊಳಗೇರಿ ಪುನರ್ವಸತಿ ಪ್ರಾಧಿಕಾರ (ಎಸ್​ಆರ್​ಎ) ಉಪಕ್ರಮದಲ್ಲಿ ಧಾರಾವಿ ಪುನಾರಾಭಿವೃದ್ಧಿ ಯೋಜನೆಯಲ್ಲಿ ಹೊಸ ರೀತಿಯ ವಿಶಿಷ್ಟ ನೀತಿಯೊಂದನ್ನು ಪರಿಚಯಿಸಿದೆ. ಅದರ ಅನುಸಾರ, ಕೊಳಗೇರಿಯಲ್ಲಿನ ಮೊದಲ ಮಹಡಿಯಲ್ಲಿ ವಾಸಿಸುತ್ತಿರುವ ಬಾಡಿಗೆದಾರರನ್ನು ಪುನರ್ವಸತಿ ಯೋಜನೆಗೆ ಸೇರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೇಲ್ಮಹಡಿಯ ಬಾಡಿಗೆದಾರರು ಮತ್ತೊಂದು ಕೊಳಗೇರಿಗೆ ಸ್ಥಳಾಂತರವಾಗುವುದರ ಜೊತೆಗೆ ಮತ್ತೊಂದು ಹೊಸ ಸಮಸ್ಯೆಗೆ ಕಾರಣವಾಗುತ್ತಾರೆ.2024ರ ಅಕ್ಟೋಬರ್​ 4ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ, 2022ರ ನವೆಂಬರ್ 15ರವರೆಗೆ ಧಾರಾವಿಯಲ್ಲಿನ ಎಲ್ಲಾ ಮೇಲಿನ ಮಹಡಿಯ ಬಾಡಿಗೆದಾರರು ಬಾಡಿಗೆ ಖರೀದಿ ಯೋಜನೆಯಲ್ಲಿ ಪುನರ್ವಸತಿಗೆ ಅರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ಈ ವಿಷಯವನ್ನು ಗುರಿಯಾಗಿಸಿಕೊಂಡು ಕೊಳಗೇರಿ ಮುಕ್ತ ಮುಂಬೈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಈ ಯೋಜನಾಬದ್ದ ತಂತ್ರಗಾರಿಕೆ ರೂಪಿಸಿದ್ದು, ಮೊದಲ ಮಹಡಿ ನಿವಾಸಿಗಳಿಗೂ ಕೂಡ ಮನೆ ಭರವಸೆ ನೀಡಿದೆ.

Rules :

ಈ ಯೋಜನೆ ಅಡಿ ಬಾಡಿಗೆದಾರರು ಮುಂಬೈನಲ್ಲಿ 300 ಚ.ಮೀ ಮನೆಯನ್ನು ಧಾರಾವಿ ಹೊರವಲಯದಲ್ಲಿ 25 ವರ್ಷಗಳ ನಾಮಮಾತ್ರ ಬಾಡಿಗೆ ಪಡೆಯುತ್ತಾರೆ. ಇದಾದ ಬಳಿಕ ಅವರು ಮಾಲೀಕತ್ವ ಹೊಂದುತ್ತಾರೆ. ಈ ಯೋಜನೆಯು ಸರಳೀಕೃತ ಮತ್ತು ಮಾಲೀಕತ್ವವನ್ನು ಪಡೆಯಲೂ 25 ವರ್ಷಗಳೊಳಗೆ ಹಣವನ್ನು ಪಾವತಿ ಮಾಡಲು ಸಹಾಯ ಮಾಡುತ್ತದೆ. ಇವರು ವಾಸಿಸುವ ಮನೆಯ ಬಾಡಿಗೆ ಮತ್ತು ಮಾಲೀಕತ್ವದ ಹಣವನ್ನು ಡಿಆರ್​ಪಿ ಅಥವಾ ರಾಜ್ಯ ಸರ್ಕಾರ ಸಂಗ್ರಹಿಸಲಿದೆ.

The scheme can be availed by providing all these documents:

ಮೇಲ್ಮಹಡಿಯ ನಿವಾಸಿಗಳು ವಿದ್ಯುತ್ ಬಿಲ್‌ಗಳು, ನೋಂದಾಯಿತ ಮಾರಾಟ ಅಥವಾ ಬಾಡಿಗೆ ಒಪ್ಪಂದ , ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ ಅಥವಾ ಅರ್ಹ ನೆಲಮಹಡಿ ನಿವಾಸಿಗಳು ಪ್ರಮಾಣೀಕರಿಸಿದ ಅಫಿಡವಿಟ್‌ನಂತಹ ದಾಖಲೆಗಳನ್ನು ಒದಗಿಸಿದಲ್ಲಿ ಮಾತ್ರ ಅವರು ಯೋಜನೆಗೆ ಅರ್ಹರಾಗುತ್ತಾರೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Measures to protect the dignity of residents:

ಉನ್ನತ ಖರೀದಿ ಯೋಜನೆಯಲ್ಲಿ ಧಾರಾವಿ ನಿವಾಸಿಗಳು ಪ್ರತ್ಯೇಕ ಶೌಚಾಲಯ ಮತ್ತು ಅಡುಗೆ ಕೋಣೆಯಂತಹ ಅಗತ್ಯ ಸೌಲಭ್ಯವುಳ್ಳ ಆಧುನಿಕ ಮನೆಗೆ ತೆರಳಲಿದ್ದು, ಇದು ಅವರ ಘನತೆ, ಖಾಸಗಿತನ ಮತ್ತು ಉತ್ತಮ ಜೀವನವನ್ನು ಖಾತ್ರಿಪಡಿಸುತ್ತದೆ ಎಂದು ಡಿಪಿಆರ್ ​ – ಎಸ್ಆರ್​ಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಟ್ಟಡಗಳನ್ನು ಡೆವಲಪರ್​ಗಳು ಪುನರ್ವಸತಿ ನಂತರದ ನಿರ್ವಹಣೆ ಮಾಡಲಿದ್ದು, ಇದು ನಿವಾಸಿಗಳ ಮೇಲೆ ಆರ್ಥಿಕ ಹೊರೆಯನ್ನು ಕೆಳಗಿಳಿಸಲಿದೆ. ಅಲ್ಲದೇ, ಕಟ್ಟಡ ಶೇ 10ರಷ್ಟು ಪ್ರದೇಶವನ್ನು ವಾಣಿಜ್ಯ ಅಭಿವೃದ್ಧಿ ನಡೆಸುವುದರಿಂದ ಇದು ಹೌಸಿಂಗ್​ ಸೊಸೈಟಿಗೆ ಶಾಶ್ವತ ಆದಾಯ ನೀಡುತ್ತದೆ.

ಆಧುನಿಕ ನಗರ ನಿರ್ಮಾಣದಲ್ಲಿ ಅಗಲವಾದ ರಸ್ತೆ, ಗಿಡ – ಮರಕ್ಕೆ ಜಾಗ, ಆರೋಗ್ಯ ಸೇವೆ, ಶಿಕ್ಷಣ ಸಂಸ್ಥೆ ಮತ್ತು ಕ್ರೀಡೆಗಳಿಗಾಗಿ ಇಲ್ಲಿ ಜಾಗ ಬಿಡಲಾಗಿದೆ. ಈ ಉಪಕ್ರಮವೂ ಜೀವನ ಮಟ್ಟ ಸುಧಾರಣೆ ಮಾತ್ರವಲ್ಲದೇ, ನಿವಾಸಿಗಳಿಗೆ ಮಾಲೀಕತ್ವ ಮತ್ತು ಹೆಮ್ಮೆಯನ್ನು ನೀಡಲಿದ್ದು, ಕೊಳಗೇರಿ ಪುನರ್ವಸತಿ ಕಡೆಗೆ ಮುಂಬೈನ ಪ್ರಯತ್ನಗಳಲ್ಲಿ ಹೊಸ ಅಧ್ಯಾಯವಾಗಲಿದೆ.

ಈ ಯೋಜನೆ ಮೂಲಕ ಸಾವಿರಾರು ಕುಟುಂಬಗಳು ದೃಢ, ಕೈಗೆಟುಕುವ ದರದ ಮನೆ ಜೊತೆಗೆ ಘನತೆಯ ಭವಿಷ್ಯವನ್ನು ಪಡೆಯಲಿದ್ದಾರೆ ಎಂದು ಡಿಪಿಆರ್​​-ಎಸ್​ಆರ್​ಎ ಅಧಿಕಾರಿಗಳು ತಿಳಿಸಿದ್ದಾರೆ. (ಐಎಎನ್​ಎಸ್​)

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...