spot_img
spot_img

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

spot_img
spot_img

Share post:

INDIA FOREST NEWS :

ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ಸಂಪತ್ತು ದೊಡ್ಡಮಟ್ಟದಲ್ಲಿ ನಾಶವಾಗಿರುವುದು ಆತಂಕ ಹುಟ್ಟಿಸುತ್ತಿದೆ.

ಭಾರತದ ಅರಣ್ಯ ಸ್ಥಿತಿಗತಿ ವರದಿ (ಐಎಸ್‌ಎಫ್‌ಆರ್) 2023 ಅನ್ನು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ಈ ವರದಿಯ ಪ್ರಕಾರ, ದೇಶದ ಒಟ್ಟಾರೆ ಅರಣ್ಯ ಪ್ರದೇಶವು (Total Forest Cover) 2021ರಲ್ಲಿದ್ದ 7,13,789 ಚ.ಕಿ.ಮೀನಿಂದ 2023ರಲ್ಲಿ 7,15,343 ಚ.ಕಿ.ಮೀ ತಲುಪಿದೆ. ಇದರೊಂದಿಗೆ ದೇಶದ ಒಟ್ಟು ಭೌಗೋಳಿಕ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ 21.76 ತಲುಪಿದೆ.

ದೇಶದ ಒಟ್ಟಾರೆ ಅರಣ್ಯ ಮತ್ತು ಮರಗಳ ಹೊದಿಕೆಯ ಪ್ರಮಾಣವು 2021ರಿಂದ 1,445 ಚದರ ಕಿ.ಮೀ ಹೆಚ್ಚಳವಾಗಿದ್ದು, 2023ರಲ್ಲಿ ಒಟ್ಟು ಭೌಗೋಳಿಕ ಪ್ರದೇಶದ ಶೇ 25.17ರಷ್ಟಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.ಮರಗಳ ಹೊದಿಕೆಯ (Tree Cover) ಪ್ರಮಾಣವು 1,289 ಚ.ಕಿ.ಮೀ ಏರಿಕೆಯಾಗಿದ್ದು, ಇದೀಗ ಒಟ್ಟಾರೆ ಭೌಗೋಳಿಕ ಪ್ರದೇಶದ ಶೇ 3.41ರಷ್ಟಿದೆ ಎಂದು ವರದಿ ತಿಳಿಸಿದೆ.

ಫಾರೆಸ್ಟ್ ಸರ್ವೇ ಆಫ್ ಇಂಡಿಯಾ (ಎಫ್‌ಎಸ್‌ಐ) ಪ್ರಕಾರ, ಅರಣ್ಯ ಹೊದಿಕೆಯು ಎಲ್ಲ ಭೂ ಪ್ರದೇಶದ ಪೈಕಿ ಶೇ 10ಕ್ಕಿಂತ ಹೆಚ್ಚು ಮರಗಳ ಸಾಂದ್ರತೆ ಹೊಂದಿರುವ ಮತ್ತು ಅದು ಒಂದು ಹೆಕ್ಟೇರ್/ಅದಕ್ಕಿಂತ ಹೆಚ್ಚಿನ ಪ್ರದೇಶದ ಮಾಲೀಕತ್ವ/ಕಾನೂನು ಸ್ಥಿತಿಯನ್ನು ಲೆಕ್ಕಿಸದೆ ಹರಡಿರುವ ಎಲ್ಲಾ ಭೂ ಪ್ರದೇಶ. ಇದರ ವ್ಯಾಪ್ತಿಯಲ್ಲಿ ನೈಸರ್ಗಿಕ ಅರಣ್ಯ ಪ್ರದೇಶಗಳು, ಮಾನವ ನಿರ್ಮಿತ ಪ್ಲಾಂಟೇಶನ್‌ಗಳು, ಹಣ್ಣಿನ ತೋಟಗಳು, ಮೇಲಿನ ಮಾನದಂಡದಂತೆ ಗಾತ್ರ ಮತ್ತು ಮರಗಳ ಪ್ರಮಾಣವಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಇತರೆ ಗಿಡ ಮರಗಳಿರುವ ಭೂ ಪ್ರದೇಶಗಳು ಸೇರಿವೆ.

ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆ ಪ್ರಮಾಣ ಎರಡೂ ಸೇರಿ ಒಟ್ಟು ಭೌಗೋಳಿಕ ವ್ಯಾಪ್ತಿಯ 8,27,357 ಚ.ಕಿ.ಮೀ ಅಥವಾ ಶೇ 25.17ರಷ್ಟಾಗುತ್ತದೆ. ಇದು 2021ರಲ್ಲಿದ್ದ ಪ್ರಮಾಣಕ್ಕಿಂತ 1,445 ಚ.ಕಿ.ಮೀ ಹೆಚ್ಚು ಮತ್ತು ಅರಣ್ಯ ಪ್ರದೇಶ ಒಂದೇ 156 ಚ.ಕಿ.ಮೀ ಹೆಚ್ಚಾಗಿರುವುದು ಗಮನಾರ್ಹ ಎಂದು ವರದಿ ಹೇಳಿದೆ.

 

Heaviest Forest in Madhya Pradesh:

ಛತ್ತೀಸ್‌ಗಢ, ಉತ್ತರ ಪ್ರದೇಶ, ಒಡಿಶಾ ಮತ್ತು ರಾಜಸ್ತಾನ ರಾಜ್ಯಗಳು ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆ ಎರಡರ ಪ್ರಮಾಣದಲ್ಲೂ ಭಾರೀ ಬೆಳವಣಿಗೆ ಕಂಡಿವೆ. ಮಿಜೋರಾಂ, ಗುಜರಾತ್ ಮತ್ತು ಒಡಿಶಾ ರಾಜ್ಯಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಭಾರೀ ಪ್ರಗತಿ ಕಂಡಿವೆ.ಅರಣ್ಯ ಪ್ರದೇಶ ಮತ್ತು ಮರಗಳ ಹೊದಿಕೆಯ ವಿಚಾರದಲ್ಲಿ ಮಧ್ಯ ಪ್ರದೇಶ ಮತ್ತೆ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನಗಳಲ್ಲಿ ಅರುಣಾಚಲ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿವೆ ಎಂದು ವರದಿ ತಿಳಿಸಿದೆ.

 

Deforestation in Western Ghats:

ನೀಲಗಿರಿ ವಲಯದಲ್ಲಿ ಬಹುವೇಗವಾಗಿ 123 ಚ.ಕಿ.ಮೀ ಅರಣ್ಯ ನಷ್ಟವಾಗಿರುವುದು ಗಮನಾರ್ಹ. ಈ ಪರ್ವತ ಶ್ರೇಣಿಯು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಹರಡಿದ್ದು, ಪ್ರವಾಸಿತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ರಾಷ್ಟ್ರೀಯ ಅರಣ್ಯ ನೀತಿ-1988ರ ಪ್ರಕಾರ, ಭಾರತದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ 33ರಷ್ಟು ಅರಣ್ಯ ಮತ್ತು ಮರಗಳ ಹೊದಿಕೆ ಇರಬೇಕು.ಕಳೆದೊಂದು ದಶಕದ ಅವಧಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಒಟ್ಟಾರೆ 58.22 ಚ.ಕಿ.ಮೀ ಅರಣ್ಯ ಪ್ರದೇಶ ನಷ್ಟವಾಗಿದೆ ಎಫ್‌ಎಸ್‌ಐ ವಿಶ್ಲೇಷಿಸಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...