spot_img
spot_img

CM SIDDARAMAIAH CONDOLES : ಮನಮೋಹನ ಸಿಂಗ್ ಬದುಕು ಒಂದು ರೀತಿ ಪವಾಡ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

MANMOHAN SINGH :

ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ, ರಾಜ್ಯ ನಾಯಕರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಇವತ್ತಿನ‌ ಪಾಕಿಸ್ತಾನ ದೇಶದ ಕುಗ್ರಾಮವೊಂದರಲ್ಲಿ ಜನಿಸಿದ್ದರು. ಅಲ್ಲಿಂದ ದೇಶ ಅಷ್ಟೇ ಅಲ್ಲದೇ ಜಗತ್ತಿನ ಓರ್ವ ಪ್ರಸಿದ್ದ ಆರ್ಥಿಕ ತಜ್ಞರಾಗಿ ಖ್ಯಾತರಾಗಿದ್ದರು. ಪಿ.ವಿ. ನರಸಿಂಹರಾಯರ ಆಡಳಿತದಲ್ಲಿ ಐದು ವರ್ಷ ಆರ್ಥಿಕ ಮಂತ್ರಿಯಾಗಿ ಕೆಲಸ ಮಾಡಿದ್ದರು.

ಆ ಕಾಲದಲ್ಲಿ ಸುಧಾರೀಕರಣ, ಖಾಸಗೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತಂದು ಕೊಟ್ಟರು. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ದೇಶ ಮುಕ್ತವಾಯಿತು ಎಂಬುದನ್ನು ನಾವು ಸ್ಮರಿಸಬೇಕಾಗುತ್ತದೆ” ಎಂದರು.  “ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ಅವರ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಒಂದು ರೀತಿ ಅವರದ್ದು ಪವಾಡದ ಬದುಕಾಗಿತ್ತು. ದೇಶವನ್ನು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿಗಳಲ್ಲಿ ಇವರು ಒಬ್ಬರಾಗಿದ್ದರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣುವುದು ಕಷ್ಟ.‌ ಆದರೆ, ಇವರು ಹತ್ತು ವರ್ಷಗಳ ಕಾಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ” ಎಂದು ಸಿದ್ದರಾಮಯ್ಯ ಶ್ಲಾಘಿಸಿದರು. “ಅದಾದ ಮೇಲೆ 2004ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದ ವೇಳೆ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗಲು ನಿರಾಕರಿಸಿದರು. ಬಳಿಕ ಮನಮೋಹನ ಸಿಂಗ್​ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರು‌. 10 ವರ್ಷಗಳ ಕಾಲ ಅವರು ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆ ಎತ್ತುವ ಮಹತ್ತರ ಕಾರ್ಯ ಮಾಡಿದ್ದರು” ಎಂದು ಮೆಲುಕು ಹಾಕಿದರು.

Minister M.B. Patil mourns:

“ಮನಮೋಹನ್ ಸಿಂಗ್​ ನವಭಾರತದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು. ಭಾರತ ಇಂದು ಜಗತ್ತಿನ ಮುಂಚೂಣಿ ಆರ್ಥಿಕ ಶಕ್ತಿಗಳ ಪೈಕಿ ಒಂದಾಗಿರುವುದರ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇದರ ಜತೆಗೆ ಸಾರ್ವಜನಿಕ ಬದುಕಿನಲ್ಲಿ ಅವರು ಮೆಲುಮಾತಿನ ಸಜ್ಜನಿಕೆಗೆ ಹೆಸರಾಗಿದ್ದರು” ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ಮಾಜಿ ಪ್ರಧಾನಮಂತ್ರಿ, ಕಾಂಗ್ರೆಸ್​ನ ಹಿರಿಯ ಮುತ್ಸದ್ದಿ ಮತ್ತು ಆರ್ಥಿಕ ಉದಾರೀಕರಣದ ಪಿತಾಮಹ ಮನಮೋಹನ್​ ಸಿಂಗ್​​​ ಅವರ ನಿಧನಕ್ಕೆ ಬೃಹತ್​​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್​ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

“ಪರಮಾಣು ಒಪ್ಪಂದದ ಮೂಲಕ ಅಮೆರಿಕದ ಜೊತೆ ದೇಶದ ಸಖ್ಯ ಸಾಧಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಇದಕ್ಕಾಗಿ ಅವರು ಸವಾಲನ್ನು ಕೂಡ ಮೇಮೇಲೆ ಎಳೆದುಕೊಂಡರು. ಬಡವರು, ಬುಡಕಟ್ಟು ಸಮುದಾಯ, ಅಲ್ಪಸಂಖ್ಯಾತರು ಮುಂತಾದವರ ಏಳಿಗೆಗಾಗಿ ಅವರು ಸದಾ ತುಡಿಯುತ್ತಿದ್ದರು” ಎಂದು ಅವರು ಬಣ್ಣಿಸಿದ್ದಾರೆ. “ಅರ್ಥಶಾಸ್ತ್ರದಲ್ಲಿ ಅಪಾರ ವಿದ್ವತ್ತನ್ನು ಹೊಂದಿದ್ದ ಮನಮೋಹನ್ ಸಿಂಗ್ ಅವರು ಅದರ ಬಲದಿಂದ ಭಾರತವನ್ನು ಬಲಾಢ್ಯ ಆರ್ಥಿಕತೆಯಾಗಿ ಬೆಳೆಸಲು ಬುನಾದಿ ಹಾಕಿದರು.

ದೇಶದ ಅರ್ಥಿಕ ವ್ಯವಸ್ಥೆಗೆ ಜೀವ ಚೈತನ್ಯ ತುಂಬಿ, ಅದನ್ನು ಪುನರುತ್ಥಾನಗೊಳಿಸಿದ ಹಿರಿಮೆ ಅವರದಾಗಿತ್ತು. ಅವರ ನಿಧನದಿಂದ ದೇಶವು ಮೇಧಾವಿಯೊಬ್ಬರನ್ನು ಕಳೆದುಕೊಂಡಿದೆ” ಎಂದು ಅವರು ಕಂಬನಿ ಮಿಡಿದಿದ್ದಾರೆ. “ಮನಮೋಹನ್ ಸಿಂಗ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಎಲ್ಲರಿಗೂ ಕೊಡಲಿ ಮತ್ತು ಮೃತ ನಾಯಕರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪಾಟೀಲ್​ ಪ್ರಾರ್ಥಿಸಿದ್ದಾರೆ.

Chairman U.T. Condolence of Khader:

“ನವಭಾರತಕ್ಕೆ ಆರ್ಥಶಾಸ್ತ್ರ ಬರೆದ ಶ್ರೇಷ್ಠ ಆರ್ಥಿಕತಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಭಾರತದ ಮಾತ್ರವಲ್ಲ, ಜಗತ್ತಿನ ಆರ್ಥಿಕತೆಗೂ ತುಂಬಲಾರದ ನಷ್ಟವಾಗಿದೆ” ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಸಂತಾಪ ಸೂಚಿಸಿದ್ದಾರೆ. “ಇಡೀ ವಿಶ್ವ ಆರ್ಥಿಕತೆಯಿಂದ ಕಂಗಾಲಾದಾಗ ಭಾರತದ ಆರ್ಥಿಕತೆ ದೃಢವಾಗಿತ್ತು ಮತ್ತು ಭಾರತದ ಪ್ರತಿ ಮನೆ ಬಾಗಿಲಲ್ಲೂ ಇಂದು ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಕಂಡು ಬಂದಿದ್ದರೆ ಅದು ಅವರ ಕೊಡುಗೆ ಎಂಬುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರ ಪ್ರಗತಿಪರ ದೃಷ್ಠಿಕೋನ ಮತ್ತು ಅವಿಸ್ಮರಣೀಯ ಕೊಡುಗೆಗಳು ದೇಶದ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಯು.ಟಿ. ಖಾದರ್ ಪ್ರಾರ್ಥಿಸಿದರು.

“1991ರ ಆರ್ಥಿಕ ಬಿಕ್ಕಟ್ಟಿನ ತೀವ್ರ ಸಂಕಷ್ಟದಲ್ಲಿ ಭಾರತವು ಸ್ಥಗಿತಗೊಂಡಿದ್ದ ಸಮಯದಲ್ಲಿ, ಅಧಿಕಾರ ಚುಕ್ಕಾಣಿ ಹಿಡಿದ ಡಾ. ಮನಮೋಹನ್ ಸಿಂಗ್​ ಅವರ ದೂರದರ್ಶಿತ್ವವು ದೇಶವನ್ನು ಆರ್ಥಿಕ ಪುನಶ್ಚೇತನದ ಮಾರ್ಗದಲ್ಲಿ ನಡೆಸಿತು. ಅವರು ವಿದೇಶದಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡುಗಡೆ ಮಾಡಿದ್ದು ಮಾತ್ರವಲ್ಲದೇ, ಅವರ ನೇತೃತ್ವದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದ ನೀತಿಗಳು, ಭಾರತದ ಪಾಲಿಗೆ ಆರ್ಥಿಕ ಸ್ವಾವಲಂಬನೆ, ಸಮೃದ್ಧಿಯ ಹೊಸ ಅಧ್ಯಾಯವನ್ನೇ ತೆರೆಯಿತು”.

Condolences of Municipal Administration and Haj Minister Rahim Khan:

“ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಮಂತ್ರಿಗಳಾಗಿದ್ದಾಗ, ಈ ದೇಶಕ್ಕೆ ಕೊಟ್ಟ ಯೋಜನೆಗಳು ಈಗಲೂ ಅವಿಸ್ಮರಣೀಯ. ಸಂಸತ್ತಿನಲ್ಲಿ ಅವರ ಕೊನೆಯ ಮಾತುಗಳು ನೋಟು ಅಮಾನ್ಯೀಕರಣದ ವಿರುದ್ಧ ಬಲವಾದ ಟೀಕೆಯಾಗಿತ್ತು, ಇದನ್ನು “ಅನುಮೋದಿತ ಮತ್ತು ಕಾನೂನುಬದ್ಧ ದಾಳಿ” ಎಂದು ಅವರು ವಿವರಿಸಿದ್ದು ಎಂದು ಮರೆಯಲಾಗದು. ದೇಶದ ಅರ್ಥ ವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಮಹಾನ್ ಚೇತನಕ್ಕೆ ಭಾವಪೂರ್ಣ ನಮನಗಳನ್ನು ಸಲ್ಲಿಸುವುದಾಗಿ” ತಿಳಿಸಿದ್ದಾರೆ.

“ದೇಶ ಕಂಡ ಅಪ್ರತಿಮ ಆರ್ಥಿಕ ತಜ್ಞರು, ಉದಾರೀಕರಣ & ಜಾಗತೀಕರಣದ ಮೂಲಕ ರಾಷ್ಟ್ರದ ಅರ್ಥವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟ” ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.

Higher Education Minister Dr. M.C. Sudhakar Company:

“ಪ್ರಧಾನಿ ಆಗುವ ಮುನ್ನ ವಿಶ್ವದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ. ಮನಮೋಹನ್​ ಸಿಂಗ್​ ಭಾರತೀಯ ರಿಸರ್ವ್​ ಬ್ಯಾಂಕ್​ನ ಗವರ್ನರ್ ಆಗಿ, ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿ, ಪ್ರಧಾನಿ ಮಂತ್ರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದವರು” ಎಂದು ಹೇಳಿದ್ದಾರೆ. “90ರ ದಶಕದಲ್ಲಿ ಉದಾರೀಕರಣ ಮತ್ತು ಜಾಗತೀಕರಣದ ವ್ಯಾಪ್ತಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸ ದಿಕ್ಕಿಗೆ ತಂದಂತಹ ಅಪ್ರತಿಮ ಮೇಧಾವಿ. ಸರಳ ಸಜ್ಜನಿಕೆಯ ಪ್ರತೀಕವಾಗಿದ್ದ ಡಾಕ್ಟರ್​ ಮನಮೋಹನ್​ ಸಿಂಗ್​ ಅವರ ನಿಧನದಿಂದ ದುಃಖ ತಪ್ತರಾಗಿರುವ ಅವರ ಕುಟುಂಬಕ್ಕೆ ಭಗವಂತನು ಶಾಂತಿ, ನೆಮ್ಮದಿ ಹಾಗೂ ದುಃಖವನ್ನು ಸಂತೈಸುವ ಶಕ್ತಿ ನೀಡಲೆಂದು” ಪ್ರಾರ್ಥಿಸಿದ್ದಾರೆ.

“ಭಾರತದ ಸದೃಢ ಆರ್ಥಿಕತೆಯ ಹರಿಕಾರ ಮಾಜಿ ಪ್ರಧಾನಿ ಡಾ. ಮನಮೋಹನ್​ ಸಿಂಗ್​ ಅವರ ನಿಧನದಿಂದ ದೇಶ ಒಬ್ಬ ಅಪ್ರತಿಮ ಅರ್ಥಶಾಸ್ತ್ರಜ್ಞ ಹಾಗೂ ಆಡಳಿತಗಾರರನ್ನು ಕಳೆದುಕೊಂಡಂತಾಗಿದೆ” ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್​​ ಕಂಬನಿ ಮಿಡಿದಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...