Shivamogga News :
ಶಿವಮೊಗ್ಗದ ಜನತೆ 2025 ಹೊಸ ವರ್ಷವನ್ನ ಸ್ವಾಗತಿಸಲು ಸಜ್ಜಾಗಿದ್ದಾರೆ. ಹೀಗಾಗಿ, ಜಿಲ್ಲೆಯ ಜನತೆಯನ್ನ ರಂಜಿಸಲು ಮ್ಯೂಸಿಕಲ್ ನೈಟ್ ತಂಡ ಸಿದ್ಧವಾಗಿದೆ. ಜಿಲ್ಲೆಯ ವಿದ್ಯಾನಗರ ಕಂಟ್ರಿ ಕ್ಲಬ್ನಲ್ಲಿ ದೊಡ್ಡ ಮ್ಯೂಸಿಕಲ್ ನೈಟ್ ಆಯೋಜನೆ ಮಾಡಲಾಗಿದೆ. ಇಲ್ಲಿ ಡಿಜೆ ಇದೆ. ಡಿಜೆಯಲ್ಲಿ ರಾಜ್ಯದ ಪ್ರಸಿದ್ಧ ಡಿಜೆಯಾದ ಎಂಸಿರವರು ಬರಲಿದ್ದಾರೆ.
ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಬರುವ ಶಿವಮೊಗ್ಗ ಜನತೆಗೆ ಈ ತಂಡ ಸಂಗೀತದ ರಸದೌತಣವನ್ನು ನೀಡಲು ಸಜ್ಜಾಗಿದೆ. ಇದಕ್ಕಾಗಿ ತಂಡ ಎಂಟ್ರಿ ಫೀ ಸಹ ನಿಗದಿಪಡಿಸಿದೆ. ಶಿವಮೊಗ್ಗ ನಗರದಲ್ಲಿ ಕಂಟ್ರಿ ಕ್ಲಬ್ ನಲ್ಲಿ ಮಾತ್ರ ಹೊಸ ವರ್ಷದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ಸಾಗರ ಪಟ್ಟಣದ ಹೊರ ವಲಯ ತ್ಯಾಗರ್ತಿ ಕ್ರಾಸ್ನಲ್ಲಿ ಹಾಗೂ ಸಾಗರದ ಗ್ರೀನ್ ಅಂಬಾಸಿ ಹೋಟೆಲ್ನಲ್ಲೂ ಸಹ ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವವರಿಗೆ ಸಂಗೀತದ ರಸದೌತಣದ ಜೊತೆಗೆ ವೆಜ್ ಹಾಗೂ ನಾನ್ ವೆಜ್ ಊಟವನ್ನು ಸಹ ನೀಡಲಾಗುತ್ತಿದೆ. ಅಲ್ಲದೆ ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಕಾರ್ಯಕ್ರಮದ ಆಯೋಜಕರಾದ ನಿವೇದಿತಾ ಮಾತನಾಡಿ, ‘ಶಿವಮೊಗ್ಗದ ಕಂಟ್ರಿ ಕ್ಲಬ್ನಲ್ಲಿ ಮ್ಯಾಡ್ ಮ್ಯೂಸಿಕ್ ವತಿಯಿಂದ ‘ಒನ್ನೈಟ್ ಇನ್ ಟುಮಾರೊಲ್ಯಾಂಡ್’ ಎಂಬ ಹೊಸ ವಿಷಯವನ್ನು ನಾವು ಪ್ರಾರಂಭಿಸುತ್ತಿದ್ದೇವೆ.
ಇಲ್ಲಿ ಇಂದು ಸಂಜೆ 7:30 ರಿಂದ ರಾತ್ರಿ 12:30ರ ತನಕ ಮ್ಯೂಸಿಕ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಗೇಮ್ ಆಡಿಸಲಾಗುತ್ತಿದೆ. ಬ್ಯಾಂಡ್ ಫಾರ್ಮಸಿಸ್ ಬೆಂಗಳೂರು ಟೀಂ ಬರುತ್ತಿದೆ. ಅಲ್ಲದೆ ಎಲ್ಲರನ್ನು ರಂಜಿಸಲು ಎಂಸಿ ಬರ್ತಾ ಇದ್ದಾರೆ. ಚಂಡೆ ಸಹ ಇರಲಿದೆ. ಚಂಡೆ ಹಾಗೂ ಡಿಜೆ ಜನರನ್ನು ರಂಜಿಸಲಿದ್ದಾರೆ. ಡಿಜೆಯಲ್ಲಿ ಫಿಮೆಲ್ ಟ್ರಾನ್ಸ್ ಕೂಡಾ ಪ್ಲೇ ಮಾಡ್ತಾ ಇದ್ದಾರೆ. ಇಂದು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದ್ದಾರೆ.