spot_img
spot_img

KODAGU FALLS : ಕೊಡಗಿನ ಜಲಪಾತಗಳತ್ತ ತೆರಳುವ ಮುನ್ನ ಎಚ್ಚರಿಕೆ ಇರಲಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Madikeri News:

ಜಲಪಾತಗಳ ಚೆಲುವಿಗೆ ಮನಸೋತು ಮೇಲಿಂದ ಬೀಳುವ ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡುವ ಅಥವಾ ನೀರಿನಲ್ಲಿ ಆಟ ಆಡುವ ಪ್ರಯತ್ನ ಮಾಡುತ್ತಾರೆ. ಆದರೆ ಹೀಗೆ ಮಾಡುವ ಮುನ್ನ ಎಚ್ಚರ. ಕೊಡಗಿನ ನಾಲ್ಕು ಜಲಪಾತಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ. ಈ ನಾಲ್ಕು ಜಲಪಾತಗಳು ಹಲವು ಪ್ರವಾಸಿಗರನ್ನು ಬಲಿತೆಗೆದುಕೊಂಡಿದೆ. ಅದರಲ್ಲೂ ಅತಿ ಹೆಚ್ಚು ಜನರು ಮಡಿಕೇರಿಯ ಅಬ್ಬಿಜಲಪಾತ, ಸೋಮವಾರಪೇಟೆಯ ಮಲ್ಲಳ್ಳಿ ಮತ್ತು ನಾಪೋಕ್ಲು ಬಳಿಯ ಚೇಲಾವರ ಜಲಪಾತದಲ್ಲಿ ಮೃತಪಟ್ಟಿದ್ದಾರೆ.

ಮುಂಗಾರಿನಲ್ಲಿದ್ದಷ್ಟು ಆರ್ಭಟ ಇಲ್ಲದಿದ್ದರೂ ನೋಡುಗರ ಕಣ್ಣು ತಣಿಯುವಷ್ಟು ಚೆಲುವನ್ನು ಜಲಪಾತಗಳು ಪ್ರದರ್ಶಿಸುತ್ತಿವೆ. ಹೀಗಾಗಿ ಬೆಟ್ಟಗುಡ್ಡ, ಹತ್ತಿ, ಒಂದಷ್ಟು ದೂರ ನಡೆದು ಜಲಪಾತಗಳ ಬಳಿಗೆ ಹೋಗುವವರಿಗೆ ನಿರಾಸೆಯಾಗಲಾರದು. ಕಳೆದ ಆರೇಳು ತಿಂಗಳಿನಿಂದ ಮಳೆ ಸುರಿಯುತ್ತಲೇ ಇರುವುದರಿಂದ ಈ ವರ್ಷ KODAGU FALLS ಜೀವಕಳೆ ಕುಂದಿಲ್ಲ.ಆದರೆ ನೀರು ಕಡಿಮೆಯಿದೆ ಎಂಬ ಕಾರಣಕ್ಕೆ ಇಲ್ಲಿನ ಜಲಪಾತಗಳ ಬಳಿಗೆ ಹೋಗಿ ನೀರಿಗಿಳಿದು ಹುಚ್ಚಾಟ ಆಡುವುದು ಮಾತ್ರ ಅಪಾಯಕಾರಿ. ದೂರದಿಂದಲೇ ನೋಡಿ ಬಂದರೆ ಸುರಕ್ಷಿತ.

Do you know why?

ಸಾಮಾನ್ಯವಾಗಿ ಯಾವುದೇ ಜಲಪಾತಗಳ ಬಳಿಗೆ ಹೋದರೂ ಪ್ರವಾಸಿಗರು ಮೈಮರೆತು ಬಿಡುತ್ತಾರೆ. ಅದರ ಚೆಲುವಿಗೆ ಮನಸೋತು ಮೇಲಿಂದ ಬೀಳುವ ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡುವ ಅಥವಾ ನೀರಿನಲ್ಲಿ ಆಟ ಆಡುವ ಪ್ರಯತ್ನ ಮಾಡುತ್ತಾರೆ. ಅಪಾಯಕಾರಿಯಲ್ಲದ ಸಣ್ಣ ಪುಟ್ಟ ಜಲಪಾತಗಳಲ್ಲಿ ಹೀಗೆ ಮಾಡಬಹುದು. ಆದರೆ ಕೆಲವು ಜಲಪಾತಗಳು ಮೇಲ್ನೋಟಕ್ಕೆ ಅಪಾಯಕಾರಿಯಂತೆ ಕಾಣಿಸದಿದ್ದರೂ ಒಳ ಮರ್ಮ ಭಯಂಕರವಾಗಿರುತ್ತದೆ.

ಜಿಲ್ಲೆಗೆ ಬರುವ ಪ್ರತಿಯೊಬ್ಬ ಪ್ರವಾಸಿಗರೂ ತಮ್ಮ ಪ್ರವಾಸವನ್ನು ಸುಖಮಯವಾಗಿಸಿಕೊಂಡು ಹಿಂತಿರುಗಬೇಕೆಂದು ಬಯಸುವಾಗ ಪ್ರವಾಸಿಗರು ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಕೊಡಗಿನಲ್ಲಿ ಜಲಪಾತಗಳ ಬಳಿಗೆ ಹೋಗಬೇಡಿ ಎಂಬ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರೂ ಅದನ್ನು ಮೀರಿ ಪ್ರವಾಸಿಗರು ಜಲಪಾತದತ್ತ ಹೋಗಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುತ್ತಾರೆ. ಈ ವೇಳೆ ಕೆಲವರು ಅಪಾಯಕಾರಿ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ.

ಇದು ಪ್ರತಿವರ್ಷವೂ ನಡೆಯುತ್ತಿದ್ದರೂ ಪ್ರವಾಸಿಗರು ಮಾತ್ರ ಎಚ್ಚೆತ್ತುಕೊಳ್ಳದೆ ಹುಚ್ಚಾಟ ಆಡಿ ಪ್ರಾಣ ಕಳೆದುಕೊಳ್ಳುತ್ತಾರೆ.ಇನ್ನು ಚೇಲಾವರ ಜಲಪಾತದಲ್ಲಿ ಪ್ರತಿವರ್ಷವೂ ಯಾರಾದರೊಬ್ಬರು ಬಲಿಯಾಗುತ್ತಲೇ ಇರುತ್ತಾರೆ. ಹೀಗೆ ಬಲಿಯಾಗುವವರ ಪೈಕಿ ಹೆಚ್ಚಿನವರು ಜಲಪಾತವನ್ನು ನೋಡಿಕೊಂಡು ಹಿಂತಿರುಗದೆ ಅಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಆ ನಂತರ ಯಾರ ಮಾತನ್ನೂ ಕೇಳದೆ ಜಲಪಾತದ ಬಳಿಯಲ್ಲಿ ಈಜಲು ಹೋಗುತ್ತಾರೆ. ಈ ಸಂದರ್ಭ ಅಲ್ಲಿರುವ ನೀರಿನ ಸುಳಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಜತೆಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಆದರೂ ದೂರದಿಂದ ಬರುವ ಪ್ರವಾಸಿಗರು ಅದ್ಯಾವುದನ್ನು ಕಿವಿಗೆ ಹಾಕಿಕೊಳ್ಳದೆ ದುರಂತವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಪೈಕಿ ಅಬ್ಬಿಜಲಪಾತ ಮತ್ತು ಮಲ್ಲಳ್ಳಿ ಜಲಪಾತದಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಂಡಿರುವ ಕಾರಣದಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಅಂತಹ ಯಾವುದೇ ಅನಾಹುತ ಸಂಭವಿಸಿಲ್ಲ. ಹಾಗೆಯೇ ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ಜಲಪಾತದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ದುರಂತದ ಬಳಿಕ ಅಂತಹ ಘಟನೆ ನಡೆದಿಲ್ಲ.

ಕೊಡಗಿನಲ್ಲಿ ನಾಲ್ಕು ಜಲಪಾತಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ. ಈ ನಾಲ್ಕು ಜಲಪಾತಗಳು ಹಲವು ಪ್ರವಾಸಿಗರನ್ನು ಬಲಿತೆಗೆದುಕೊಂಡಿದೆ. ಅದರಲ್ಲೂ ಅತಿ ಹೆಚ್ಚು ಜನರು ಮಡಿಕೇರಿಯ ಅಬ್ಬಿಜಲಪಾತ, ಸೋಮವಾರಪೇಟೆಯ ಮಲ್ಲಳ್ಳಿ ಮತ್ತು ನಾಪೋಕ್ಲು ಬಳಿಯ ಚೇಲಾವರ ಜಲಪಾತದಲ್ಲಿ ಮೃತಪಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ಜಲಪಾತದಲ್ಲಿ ಮುಳುಗಿ ಸಾಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೇಸಿಗೆ ದಿನಗಳಲ್ಲಿ ಜಲಪಾತದ ಬಳಿಯ ಕೊಳದ ಆಳವನ್ನು ಅರಿಯುವ ಸಲುವಾಗಿ ಹದಿನೈದು ಮಂದಿ ಮೋಟಾರ್ ಮೂಲಕ ನೀರನ್ನು ಹೊರತೆಗೆದು ಆಳ ನೋಡುವ ಪ್ರಯತ್ನ ಮಾಡಿದ್ದರು. ಆದರೆ ಸುಮಾರು ಇಪ್ಪತ್ತು ಅಡಿ ನೀರನ್ನಷ್ಟೆ ಖಾಲಿ ಮಾಡಲು ಸಾಧ್ಯವಾಯಿತು. ಕೆಳಭಾಗದ ಆಳ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿ ನೀರು ಧುಮುಕುವಾಗ ಸುಳಿ ಸೃಷ್ಟಿಯಾಗಿ ಎಳೆದು ಬಿಡುತ್ತದೆ.

ಆ ಸುಳಿಗೆ ಸಿಕ್ಕವರು ಹೊರ ಬರುವುದು ಕಷ್ಟವೇ. ಒಂದು ಮೂಲದ ಪ್ರಕಾರ ಈ ಜಲಪಾತದಲ್ಲಿ ಬಲಿಯಾದವರ ಸಂಖ್ಯೆ ಸುಮಾರು ಹದಿಮೂರು ದಾಟಿದೆ. ಇವರ ಪೈಕಿ ಬಹಳಷ್ಟು ಜನ ಮೋಜು ಮಸ್ತಿ ಮಾಡಿಯೇ ಪ್ರಾಣ ಕಳೆದುಕೊಂಡವರಾಗಿದ್ದಾರೆ. ಇದುವರೆಗೆ ಕೊಡಗಿನ ಜಲಪಾತಗಳಲ್ಲಿ ಎಷ್ಟು ಮಂದಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದನ್ನು ನೋಡಿದ್ದೇ ಆದರೆ ಅಬ್ಬಿ ಜಲಪಾತದಲ್ಲಿ 52 ಮಂದಿ, ಚೇಲಾವರದಲ್ಲಿ 13ಕ್ಕೂ ಹೆಚ್ಚು, ಮಲ್ಲಳ್ಳಿಯಲ್ಲಿ 15ಕ್ಕೂ ಹೆಚ್ಚು ಮಂದಿ, ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿ ಜಲಪಾತದಲ್ಲಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅದು ಏನೇ ಇರಲಿ ಕೊಡಗಿಗೆ ಬರುವ ಪ್ರವಾಸಿಗರು ಜಲಪಾತಗಳತ್ತ ತೆರಳುವ ಮುನ್ನ ಅವುಗಳ ಮರ್ಮ ಅರಿತು ದೂರದಿಂದಲೇ ನೋಡಿ ಹಿಂತಿರುಗಿದರೆ ಕ್ಷೇಮ. ಚೇಲಾವರ ಜಲಪಾತದಲ್ಲಿಯೇ ಜಾಸ್ತಿ ದುರಂತಗಳು ಏಕೆ ಸಂಭವಿಸುತ್ತವೆ? ಎಂಬುದನ್ನು ನೋಡಿದ್ದೇ ಆದರೆ ಈ ಜಲಪಾತ ಬೆಟ್ಟಗುಡ್ಡ, ಕಾಫಿ ತೋಟಗಳ ನಡುವೆಯಿದೆ. ಹಾಗೆಯೇ ಇಲ್ಲಿ ಪ್ರವಾಸಿಗರ ಸಂಖ್ಯೆಯೂ ವಿರಳವಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ವಿಶಾಲ ಬಂಡೆಯ ಮೇಲಿಂದ ಧುಮ್ಮಿಕ್ಕುವ ಜಲರಾಶಿಗೆ ತಲೆಕೊಡುವ ಸಾಹಸಕ್ಕೆ ಮುಂದಾಗುತ್ತಾರೆ. ಆದರೆ ಮೇಲ್ನೋಟಕ್ಕೆ ನೀರು ಧುಮ್ಮಿಕ್ಕುವ ಸ್ಥಳ ಪುಟ್ಟ ಕೊಳದಂತೆ ಕಾಣಿಸುತ್ತದೆ. ಹೀಗಾಗಿ ಆಳವಿಲ್ಲವೆಂದುಕೊಳ್ಳುತ್ತಾರೆ.

ಇದನ್ನು ಓದಿರಿ : ANDHRA PRADESH DELEGATION VISIT: ಆಂಧ್ರದಲ್ಲಿ ‘ಶಕ್ತಿ ಯೋಜನೆ’

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ELECTORAL BOND CASE : ಕಟೀಲ್ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

New Delhi News: ELECTORAL BOND CASE ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಜನಾಧಿಕಾರ ಸಂಘರ್ಷ ಪರಿಷತ್​ನ...

PRABHAS : ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್

Prabhas News : ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ PRABHAS ​ ಅವರ ಮೊದಲ ನೋಟ ಅನಾವರಣಗೊಂಡಿದೆ.'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು,...

UNION BUDGET SESSION : ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ

New Delhi News: UNION BUDGET SESSION ನಾಲ್ಕನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡಲಿದ್ದಾರೆ....

PRAYAGRAJ MAHA KUMBH LIGHTING : ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ

Lucknow, Uttar Pradesh News: PRAYAGRAJ MAHA KUMBH LIGHTING ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ...