spot_img
spot_img

Hunter Movie: Big Breaking ಯುವತಿಗೆ ದೊಡ್ಡ ಮೋಸ?

spot_img
spot_img

Share post:

Big Breaking

ಹಂಟರ್ ಮೂವಿನಲ್ಲಿ ಛಾನ್ಸ್ ಬೇಕಾ ಹಾಗಾದರೆ ನೀವು ಲಕ್ಷ ಲಕ್ಷ ರೂಪಾಯಿ ಕೊಡಿ! ಎಂದು ಯುವತಿಗೆ ಮೋಸ ಮಾಡಿದವರು ಯಾರು ಏನು ಸುದ್ದಿ ಎಂದು ನೀವೇ ಓದಿ!

(Hunter Movie)ಸಿನಿಮಾದಲ್ಲಿ ಚಾನ್ಸ್ ಗಾಗಿ ಏನು ಮಾಡಬೇಕು?

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ. ಆನ್ ಲೈನ್ ಆ್ಯಡ್ ನೋಡಿ ಮೋಸ ಹೋದ ಯುವತಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದಾರೆ.
ಸಿನಿಮಾದಲ್ಲಿ ನಟಿಸಬೇಕು. ನಟಿಯಾಗಿ ಮಿಂಚಬೇಕು, ಸಂಪಾದಿಸಬೇಕು ಎಂದು ಬಹಳಷ್ಟು ಜನರು ಆಸೆ ಪಡುತ್ತಾರೆ. ಒಮ್ಮೆಯಾದಾರೂ ಸರಿ ಒಂದು ಸಿನಿಮಾದಲ್ಲಿ ನಟಿಸಲೇ ಬೇಕು ಎಂದು ಸಾಕಷ್ಟು ಸರ್ಕಸ್ ಮಾಡುವ ಮಂದಿ ನಮ್ಮ ಮಧ್ಯೆ ಇದ್ದಾರೆ. ತಮಿಳಿನ ಹಂಟರ್ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ವಂಚಿಸಲಾಗಿದ್ದು ಸುರೇಶ್ ಕುಮಾರ್ ಎಂಬಾತನಿಂದ ಯುವತಿಗೆ ವಂಚಿಸಲಾಗಿದೆ. ಮಾಡೆಲ್ ನಂದಿನಿ ಶೆಟ್ಟಿ ಎಂಬಾಕೆಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

Big Breaking
Big Breaking

ಯಾರನ್ನ ಗುರಿಯಾಗಿಸುತ್ತಾರೆ?

ದುಡ್ಡು ಕೊಟ್ಟು ನಟನೆ ಮಾಡ್ಬೇಕು ಎಂದು ಅರ್ಥೈಸಿ ಕೊಂಡವರನ್ನೇ, ಗುರಿಯಾಗಿಸಿ ಬಹಳಷ್ಟು ವಂಚನೆ ಪ್ರಕರಣಗಳೂ ನಡೆಯುತ್ತವೆ. ಇವರ ಕನಸುಗಳನ್ನೇ ಬಂಡವಾಳ ಮಾಡಿ ಲಕ್ಷ ಲಕ್ಷ ರೂಪಾಯಿ ದೋಚಿ ಹೋಗುವವರು ಬಹಳಷ್ಟು ಜನ ಇದ್ದಾರೆ. ಇಂಥದ್ದೇ ಘಟನೆಯೊಂದು ಈಗ ನಡೆದಿದೆ.

ವಂಚನೆ ಕುರಿತು ಏನು ಹೇಳಿದ್ದಾಳೆ ಯುವತಿ?

ತನಗೆ ಆದ ವಂಚನೆ ಬಗ್ಗೆ ಯುವತಿ ದೂರು ನೀಡಿದ್ದಾರೆ. ಇನ್ಸ್ಟ್ರಾಗ್ರಾಂನಲ್ಲಿ ಹಂಟರ್ ಸಿನಿಮಾದ ಆ್ಯಡ್ ನೋಡಿದ್ದ ಯುವತಿ ಅದರಲ್ಲಿ ನಟಿಸುವ ಕನಸು ಕಂಡಿದ್ದಾರೆ. ನಂತರ ಅಲ್ಲಿದ್ದ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡಿದ್ದಾರೆ.

ಎಷ್ಟು ಹಣ ಕಳುಹಿಸಿದ್ದಾರೆ?

ಚಿತ್ರದಲ್ಲಿ ಚಾನ್ಸ್ ಸಿಗುತ್ತೆ ಅದಕ್ಕೆ ಆರ್ಟಿಸ್ಟ್ ಕಾರ್ಡ್ ಮಾಡಿಸಬೇಕು ಎಂದು ಸುರೇಶ್ ಎನ್ನುವ ವ್ಯಕ್ತಿ ಹೇಳಿದ್ದರು. ಅದಕ್ಕಾಗಿ 12,500 ಹಣ ಕಳುಹಿಸಿದ್ದ ಯುವತಿ ಆ ನಂತರ ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ ಅಂತಾ 35 ಸಾವಿರ ಕಳುಹಿಸಿದ್ದಾರೆ. ಶೂಟಿಂಗ್ ಗೆ ಮಲೇಷಿಯಾಗೆ ಹೋಗಬೇಕು. ನಿಮ್ಮ ತಂದೆಯ ಪಾಸ್ ಪೋರ್ಟ್ ಹಾಗು ನಿಮ್ಮ ಪಾಸ್ ಪೋರ್ಟ್ ವಿಮಾನ ಟಿಕೆಟ್ ಅಂತಾ 90 ಸಾವಿರ ಹಣ ಕಟ್ಟಿಸಿಕೊಂಡಿದ್ದ ಸುರೇಶ್ ಒಟ್ಟು ಸುಮಾರು 1.71 ಲಕ್ಷ ಹಣ ಪಡೆದು ವಂಚಿಸಿದ್ದಾರೆ.

ಈ ಫ್ರಾಡ್ ಮಾಡಿದ್ದು ಯಾರು?

ಸುರೇಶ್ ಕುಮಾರ್ ಎಂಬಾತ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಯುವತಿ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಇನ್ನಷ್ಟು ಓದಿರಿ:

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...