Lahore (Pakistan) News :
ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು (30) ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದವ. ಈತ ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಗೆ (ಲಾಹೋರ್‌ನಿಂದ ಸುಮಾರು 240 ಕಿಮೀ) ಅಕ್ರಮವಾಗಿ ಗಡಿ ದಾಟಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯನ್ನು ವರಿಸಲು ಪಾಕಿಸ್ತಾನಕ್ಕೆ ತೆರಳಿದ INDIAN ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಗಡಿ ದಾಟಿ ಬಂದಿದ್ದಕ್ಕೆ ಆತನ ವಿರುದ್ಧ ಕ್ರಮ ಜರುಗಿಸಲಾಗಿದೆ.
All for Facebook Girlfriend: ಸನಾಳನ್ನು ಪ್ರೀತಿಸುತ್ತಿದ್ದ ಬಾಬು ಆಕೆಯನ್ನು ವಿವಾಹವಾಗಲು ಬಯಸಿದ್ದ. ಹೀಗಾಗಿ, ಯಾವುದೇ ಅಧಿಕೃತ ದಾಖಲೆಗಳನ್ನ ಪಡೆದುಕೊಳ್ಳದೇ, ಬಾಬು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿದ್ದಾನೆ.
ಪಾಕಿಸ್ತಾನದ ಬಹೌದ್ದೀನ್ ಜಿಲ್ಲೆಯ ಸನಾ ರಾಣಿಯನ್ನು (21) ಬಾದಲ್ ಬಾಬು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಎರಡೂವರೆ ವರ್ಷಗಳಿಂದ ಅವರು ಸಂಪರ್ಕದಲ್ಲಿದ್ದರು.
Girlfriend Who Struck Up: ಈ ವೇಳೆ ಆತ ತನ್ನ ಗೆಳತಿಯನ್ನು ವಿವಾಹವಾಗಲು ಬಂದಿದ್ದಾಗಿ ತಿಳಿಸಿದ್ದಾನೆ. ಪೊಲೀಸರು, ಫೇಸ್‌ಬುಕ್ ಸ್ನೇಹಿತೆ ಸನಾ ರಾಣಿಯನ್ನು ಈ ಬಗ್ಗೆ ವಿಚಾರಿಸಿದಾಗ, ತಾವಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿದ್ದು ನಿಜ. ಆದರೆ, ವಿವಾಹವಾಗಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾಳೆ.
ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಭಾರತದ ಬಾಬುವನ್ನು ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಯುವತಿ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ಬಾಬುನನ್ನು ಬಂಧಿಸಿ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಮುಂದಿನ ವಿಚಾರಣೆ ಜನವರಿ 10 ರಂದು ನಿಗದಿ ಮಾಡಿದೆ.
ಅಕ್ರಮವಾಗಿ ಗಡಿ ದಾಟಿ ಬಂದ INDIAN ವ್ಯಕ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿ ನಾಸಿರ್ ಶಾ ಹೇಳಿದ್ದಾರೆ.ಬಾಬು ಮತ್ತು ಸನಾ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿದ್ದಾರೆ. ಆದರೆ, ಆತನ ಜೊತೆ ವಿವಾಹ ಬಂಧನಕ್ಕೆ ಆಕೆ ಸಿದ್ಧಳಿಲ್ಲ.
Love stories across borders: ಈ ಹಿಂದೆ ಅಂಜು ಎಂಬ INDIAN ಮಹಿಳೆ ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಆಕೆ ಇಸ್ಲಾಂಗೆ ಮತಾಂತರಗೊಂಡು, ನಸ್ರುಲ್ಲಾ ಎಂಬಾತನನ್ನು ಮದುವೆಯಾಗಿದ್ದಳು.
ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು INDIANದಿಂದ ಪಾಕಿಸ್ತಾನಕ್ಕೆ ಬಂದ ಹಲವು ಉದಾಹರಣೆಗಳಿವೆ.ಕಳೆದ ವರ್ಷ, ಪಾಕಿಸ್ತಾನದ ಸೀಮಾ ಹೈದರ್ ಎಂಬಾಕೆ PUBG ಗೇಮ್ ಮೂಲಕ ಭಾರತೀಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು.
ಆಕೆಗೆ ನಾಲ್ವರು ಮಕ್ಕಳಿದ್ದರೂ, ಪ್ರಿಯತಮನಿಗಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಆತನನ್ನು ವರಿಸಿದ್ದಾಳೆ.ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಗೆಳತಿಯನ್ನು ವರಿಸಲು ಅಕ್ರಮವಾಗಿ ಗಡಿ ದಾಟಿ ಹೋದ INDIAN ವ್ಯಕ್ತಿಯನ್ನು ಪಾಕಿಸ್ತಾನದ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಓದಿರಿ : SHEDEGALI HORTICULTURE FARM : ಖಾನಾಪುರದಲ್ಲಿದೆ ರಾಜ್ಯದಲ್ಲೇ ಮಾದರಿ ತೋಟಗಾರಿಕಾ ಕ್ಷೇತ್ರ: