spot_img
spot_img

ICC CHAMPIONS TROPHY : ಶಾಕಿಂಗ್ ನ್ಯೂಸ್! ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತಕ್ಕೆ ಆಘಾತ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

ICC CHAMPIONS TROPHY ಮೊದಲೇ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ವೇಗದ ಬೌಲರ್​ ಈ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.ಪಾಕಿಸ್ತಾನ ಇದರ ಆತಿಥ್ಯ ವಹಿಸಿಕೊಂಡಿದೆ. ಭಾರತ ಹೊರತು ಪಡಿಸಿ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿದೆ. ಫೆಬ್ರವರಿ 19ರಿಂದ ಪ್ರತಿಷ್ಠಿ ICC CHAMPIONS TROPHY​ ಪ್ರಾರಂಭವಾಗಲಿದೆ.

ಒಟ್ಟು 15 ದಿನಗಳ ಕಾಲ ನಡೆಯಲಿರುವ ಈ ಸರಣಿಯಲ್ಲಿ ಭಾರತ ಸೇರಿ 8 ತಂಡಗಳು ಭಾಗವಹಿಸುತ್ತಿವೆ.ಆದ್ರೆ ICC CHAMPIONS TROPHY ಆರಂಭಕ್ಕೂ ಮುನ್ನವೇ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಭಾರತದ ಸ್ಟಾರ್​ ಬೌಲರ್​ ಆಗಿರುವ ಜಸ್ಪ್ರೀತ್​ ಬುಮ್ರಾ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.ಈ ಸರಣಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆ.20 ರಂದು ಆಡಲಿದೆ. ನಂತರ ಫೆ.23ಕ್ಕೆ ಪಾಕಿಸ್ತಾನ, ಮಾರ್ಚ್​ 2ಕ್ಕೆ ನ್ಯೂಜಿಲೆಂಡ್​ ವಿರುದ್ಧ ಆಡಲಿದೆ.ಆದ್ರೆ ಭದ್ರತಾ ದೃಷ್ಟಿಯಿಂದಾಗಿ ಭಾರತ ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದು ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಅಂದರ ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ಫೈನಲ್​ ತಲುಪುವಲ್ಲಿ ವಿಫಲವಾದ್ರೆ ಅಂತಿಮ ಪಂದ್ಯವನ್ನು ಪಾಕಿಸ್ತಾನದಲ್ಲೇ ಆಡಲಾಗುತ್ತದೆ.ಇದೇ ಕಾರಣಕ್ಕಾಗಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಯಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಸಧ್ಯ ಅವರ ಬೆನ್ನು ನೋವಿನ ಸಮಸ್ಯೆ ಗ್ರೇಡ್​1 ಹಂತದಲ್ಲಿದೆ.

ಸಧ್ಯ ಅವರು ಇದರಿಂದ ಚೇತರಿಸಿಕೊಳ್ಳಲು 3 ವಾರಗಳ ಸಮಯ ಬೇಕಾಗುತ್ತದೆ ಎಂದು ವರದಿ ಆಗಿದೆ.ಹೌದು, ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಬುಮ್ರಾ ಕೊನೆಯ ಪಂದ್ಯದಲ್ಲಿ ಬೆನ್ನಿನ ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದ ಅರ್ಧದಲ್ಲೇ ಮೈದಾನವನ್ನು ತೊರೆದಿದ್ದರು.ಒಂದು ವೇಳೆ ಬುಮ್ರಾ ಅವರ ಸಮಸ್ಯೆ ಗ್ರೇಡ್​ 2 ಎಂದಾದರೇ ಕನಿಷ್ಠ 6 ವಾರಗಳ ಕಾಲ ಕ್ರಿಕೆಟ್​ನಿಂದ ಹೊರ ಉಳಿಯಲಿದ್ದಾರೆ.

ICC CHAMPIONS TROPHY ಆರಂಭಕ್ಕೂ ಮೊದಲು ಬುಮ್ರಾಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸಂಪೂರ್ಣವಾಗಿ ಚೇತರಿಸಿಕೊಂಡು ಫಿಟ್ನೆಸ್​ ಹೊಂದಿದ್ದರೆ ಮಾತ್ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾಗಿಯಾಗಲಿದ್ದಾರೆ.

England series : ICC CHAMPIONS TROPHYಗೂ ಮೊದಲು ಭಾರತ ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಇದರಲ್ಲಿ ಉಭಯ ತಂಡಗಳ ನಡುವೆ 5 ಏಕದಿನ ಪಂದ್ಯ ಮತ್ತು 3 ಟಿ20 ಪಂದ್ಯಗಳು ನಡೆಯಲಿ. ಈ ಸರಣಿಯು ಜನವರಿ 22 ರಿಂದ ಶುರವಾಗಲಿದೆ.

ಇದನ್ನು ಓದಿರಿ : LPG CONNECTIONS : ಗೃಹಬಳಕೆ ಎಲ್ಪಿಜಿ ಸಂಪರ್ಕಗಳ ಸಂಖ್ಯೆ ದಶಕದಲ್ಲಿ ದ್ವಿಗುಣ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TIGRESS ANJANI NO MORE : ಹುಲಿ- ಸಿಂಹಾಧಾಮದ ಅಂಜನಿ ವಯೋಸಹಜ ದಿಂದ ನಿಧನ

ShimogaNews: ಶಿವಮೊಗ್ಗದ TIGRESS ಮತ್ತು ಸಿಂಹಧಾಮದಲ್ಲಿ ವಯೋಸಹಜದಿಂದ TIGRESSಯೊಂದು ಅಸುನೀಗಿದೆ. ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ 5ಕ್ಕೆ ಇಳಿಕೆಯಾಗಿದೆ.ಹೊರವಲಯದ TIGRESS ಮತ್ತು ಸಿಂಹಧಾಮದ 17...

US AIRSTRIKES YEMEN : ಯೆಮೆನ್ನ ಮೂರು ಹೌತಿ ನೆಲೆಗಳ ಮೇಲೆ ಅಮೆರಿಕ ನೌಕಾಪಡೆ ದಾಳಿ

sana News: YEMEN​ನ ಹೌತಿ ನೆಲೆಗಳ ಮೇಲೆ ಅಮೆರಿಕ ಹೊಸದಾಗಿ ದಾಳಿ ನಡೆಸಿದೆ.ಹೌತಿ ಉಗ್ರರ ಮಿಲಿಟರಿ ತಾಣಗಳ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಸ್ಥಳೀಯರು...

WALNUTS HEALTH BENEFITS : ಪ್ರತಿದಿನ ವಾಲ್ನಟ್ಸ್ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಉತ್ತಮ

Health Benefits of Walnuts News: ಹೃದ್ರೋಗದ ಅಪಾಯ ಕಡಿಮೆಯಾಗಬೇಕಾದರೆ, ಪ್ರತಿದಿನ ನಿಯಮಿತವಾಗಿ ವಾಲ್‌ನಟ್ಸ್ ಸೇವಿಸುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ.ಹಠಾತ್ ಹೃದ್ರೋಗಕ್ಕೆ ತುತ್ತಾಗಿ ಹಲವು...

SLEEPING WITH SOCKS IN WINTER : ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?

Health Benefits of Sleeping With Socks at Night News: ರಾತ್ರಿ ಮಲಗುವಾಗ ಸಾಕ್ಸ್ ಹಾಕಿಕೊಂಡು ನಿದ್ರೆ ಮಾಡುವ ಅಭ್ಯಾಸ ನಿಮಗಿದೆಯೇ? ನೀವು ಈ...