spot_img
spot_img

ACTRESS ISHIKA TOOK GURU DIKSHA : ಶಂಕಾರಾಚಾರ್ಯರಿಂದ ಗುರು ದೀಕ್ಷೆ ಸ್ವೀಕಾರ

spot_img
spot_img

Share post:

Jabalpur (Central Pradesh) News:

ನಟಿ ISHIKA ತನೇಜಾ ಅವರು 2017ರಲ್ಲಿ ಮಿಸ್‌ ವಲ್ಡ್‌ ಟೂರಿಸಂ, ಬ್ಯುಸಿನೆಸ್​ ವುಮೆನ್​ ಆಫ್​ ದಿ ವರ್ಲ್ಡ್​ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಗ್ಲಾಮರಸ್​ ಜಗತ್ತು ತೊರೆದು ಸಾದ್ವಿಯಾಗಿದ್ದಾರೆ.ಸಿನಿಮಾ ಹಾಗೂ ಗ್ಲಾಮರಸ್​ ಜಗತ್ತಿನಿಂದ ವಿಮುಖರಾಗಿರುವ ಅವರು ಅಲೌಖಿಕ ದಾರಿಯಲ್ಲಿ ಸಾಗುವ ಗಟ್ಟಿ ನಿರ್ಧಾರ ತಳೆದಿದ್ದಾರೆ. ಜಬಲ್​ಪುರದ ಶಂಕರಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್​ ಅವರಿಂದ ಇಶಿಕಾ ಸನ್ಯಾಸ ದೀಕ್ಷೆ ಪಡೆದಿದ್ದಾರೆ.

ಸಿನಿಮಾ ನಟಿ ಹಾಗೂ ಮಿಸ್‌ ವಲ್ಡ್‌ ಟೂರಿಸಂ ಬ್ಯುಸಿನೆಸ್​ ವುಮೆನ್​ ಆಫ್​ ದಿ ವರ್ಲ್ಡ್ ಪ್ರಶಸ್ತಿ ಗೆದ್ದ ISHIKA ತನೇಜಾ ಐಹಿಕ ಸುಖಭೋಗಗಳನ್ನು ತೊರೆದು ಸಾಧ್ವಿಯಾಗಿದ್ದಾರೆ.ದೀಕ್ಷೆ ಪಡೆದ ಬಳಿಕ ಮಾತನಾಡಿರುವ ISHIKA, “ಇಂದಿನ ಶಿಕ್ಷಿತ ಯುವಜನತೆ ಧರ್ಮದೊಂದಿಗೆ ಸಂಪರ್ಕ ಬೆಳೆಸಬೇಕು. ನಾನು ಬಾಲ್ಯದಿಂದಲೇ ಧಾರ್ಮಿಕತೆ ಹೊಂದಿದ್ದು ಇದೀಗ ಸಿನಿಮಾ, ಸೌಂದರ್ಯ ಎಲ್ಲವನ್ನೂ ತೊರೆದು ನನ್ನ ಜೀವನವನ್ನೇ ಅದಕ್ಕಾಗಿ ಮುಡುಪಾಗಿಡಲು ಮುಂದಾಗಿದ್ದೇನೆ” ಎಂದರು.

Ishika who was Miss World Tourism in 2017: ಮಂಗಳವಾರ ದೀಕ್ಷೆ ಪಡೆದ ISHIKA ತನೇಜಾ, ಸಂಪೂರ್ಣವಾಗಿ ಸಾದ್ವಿ ದಿರಿಸಿನಲ್ಲಿ ಕಾಣಿಸಿಕೊಂಡರು. ಬಳಿಕ ಜ್ಯೋತಿಷ್ ಪೀಠ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರಿಂದ ಆಶೀರ್ವಾದ ಪಡೆದರು.

ISHIKA ತನೇಜಾ 2017ರಲ್ಲಿ ಮಿಸ್​ ವರ್ಲ್ಡ್​ ಟೂರಿಸಂ (ಇಂಡಿಯಾ) ಕಿರೀಟ ಮುಡಿಗೇರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಬ್ಯುಸಿನೆಸ್​ ವುಮೆನ್​ ಆಫ್​ ದಿ ವರ್ಲ್ಡ್​​ ಪ್ರಶಸ್ತಿಯನ್ನೂ ಪಡೆದಿದ್ದರು. ಭಾರತದ 100 ಮಹಿಳಾ ಸಾಧಕರಲ್ಲಿ ಒಬ್ಬರಾಗಿರುವ ಇವರು ರಾಷ್ಟ್ರಪತಿಗಳಿಂದಲೂ ಪ್ರಶಸ್ತಿ ಪಡೆದಿದ್ದರು.

Interest in religious matters since childhood:  ಇದು ನಾನು ಧಾರ್ಮಿಕತೆಯೊಂದಿಗೆ ಬೆಸೆಯುವ ಸಮಯ. ನನಗೆ ಅನ್ನಿಸಿದ ಮಟ್ಟಿಗೆ ಯುವಜನತೆ ತಮ್ಮ ಶಕ್ತಿ ಮತ್ತು ಸಮಯವನ್ನು ಧಾರ್ಮಿಕತೆಯಲ್ಲಿ ವಿನಿಯೋಗಿಸಬೇಕು ಎಂದು ನನಗನಿಸುತ್ತಿದೆ” ಎಂದರು.

“ನಾನು ಬಾಲ್ಯದಿಂದಲೂ ಧಾರ್ಮಿಕತೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಶ್ರೀ ರವಿಶಂಕರ್ ಮತ್ತು ಇಸ್ಕಾನ್​ನಲ್ಲಿ ಧ್ಯಾನ ಕಲಿತೆ. ಈ ಮೊದಲೇ ಈ ಎಲ್ಲಾ ವಿಷಯಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ಇದೀಗ ನನ್ನ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕತೆಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ.

Reason for Guru initiation in Jabalpur?: ಶಂಕರಾಚಾರ್ಯ ಸದಾನಂದ ಸರಸ್ವತಿ ಮಹಾರಾಜರು ಮಾತನಾಡಿ, “ಆಧ್ಯಾತ್ಮಿಕ ಶಕ್ತಿಗಾಗಿ ಗುರು ದೀಕ್ಷೆ ನೀಡಲಾಗುತ್ತದೆ. ದೀಕ್ಷೆ ತೆಗೆದುಕೊಂಡು ಪೂಜೆ ಮಾಡುವುದರಿಂದ ಶಕ್ತಿ ಸಂಚಯವಾಗುತ್ತದೆ. ಯಾವಾಗ ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮೂಡುತ್ತದೋ ಆಗ ಅವರು ಗುರುವಿನ ಆಶ್ರಯಕ್ಕೆ ಬರುತ್ತಾರೆ” ಎಂದು ಹೇಳಿದರು.

“ಶಂಕರಾಚಾರ್ಯರು ಜಬಲ್ಪುರದಲ್ಲಿದ್ದಾರೆ ಎಂದು ತಿಳಿದು ಗುರುದೀಕ್ಷೆ ತೆಗೆದುಕೊಳ್ಳಲು ಬಂದೆ. ಅವರ ಆದೇಶದ ಮೇರೆಗೆ ನಾನು ಜಬಲ್ಪುರಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆದು ಗುರು ಮಂತ್ರವನ್ನು ಸ್ವೀಕರಿಸಿದೆ. ಈಗ ಅವರ ಆದೇಶದಂತೆಯೇ ಧರ್ಮ ಮಾರ್ಗದಲ್ಲಿ ಮುನ್ನಡೆಯುತ್ತೇನೆ” ಎಂದು ತಿಳಿಸಿದರು.

 ಮಧುರ್​ ಬಂಡಾರ್​ಕರ್​ ಅವರ ‘ಹಿಂದು ಸರ್ಕಾರ್’​​ ಸಿನಿಮಾ ಹಾಗೂ ‘ಹದ್’​ ವೆಬ್​ ಸಿರೀಸ್​ನಲ್ಲೂ ISHIKA ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಅನೇಕ ಕ್ರೀಡಾ ಕಾರ್ಯಕ್ರಮಗಳು ಮತ್ತು ಜಾಹೀರಾತಿನಲ್ಲೂ ಮಿಂಚಿದ್ದಾರೆ.

ಇದನ್ನು ಓದಿರಿ : ASSAM COAL MINE RESCUE OPERATION : ಅಸ್ಸಾಂ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ 9 ಜನರಲ್ಲಿ ಒಬ್ಬ ಕಾರ್ಮಿಕನ ಮೃತದೇಹ ಮೇಲಕ್ಕೆ

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...