spot_img
spot_img

SLEEPING WITH SOCKS IN WINTER : ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?

spot_img
spot_img

Share post:

Health Benefits of Sleeping With Socks at Night News:

ರಾತ್ರಿ ಮಲಗುವಾಗ ಸಾಕ್ಸ್ ಹಾಕಿಕೊಂಡು ನಿದ್ರೆ ಮಾಡುವ ಅಭ್ಯಾಸ ನಿಮಗಿದೆಯೇ? ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಈ ಕುರಿತು ತಜ್ಞರು ಏನು ಹೇಳುತ್ತಾರೆ?ಮಲಗುವಾಗ ಸಾಕ್ಸ್ ಧರಿಸುವುದರಿಂದ WINTERದ ಪರಿಹಾರ ಲಭಿಸುತ್ತದೆ, ಬೆಚ್ಚಗಿರಲು ಹಾಗೂ ಆರಾಮವಾಗಿರಲು ಸಹಾಯ ಮಾಡುತ್ತದೆ. ಹಾಗಾದರೆ, ರಾತ್ರಿ ಸಾಕ್ಸ್ ಧರಿಸಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ತಿಳಿದುಕೊಳ್ಳೋಣ. ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಸಮಯದಲ್ಲಿ ಚಳಿಯನ್ನು ಸಹಿಸಲಾಗದೆ ಅನೇಕ ಜನರು ರಾತ್ರಿಯಲ್ಲಿ ಸ್ವೆಟರ್ ಮತ್ತು ಮಫ್ಲರ್ ಧರಿಸಿ ನಿದ್ರೆ ಮಾಡುತ್ತಾರೆ. ಮತ್ತಷ್ಟು ಕೆಲವರು ಮಲಗುವಾಗ ಸಾಕ್ಸ್‌ಗಳನ್ನು ಸಹ ಧರಿಸುತ್ತಾರೆ.ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ಶೀತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ನಿಮ್ಮ ಪಾದಗಳು ಬೆಚ್ಚಗಿರುತ್ತವೆ. ಅದು ದೇಹಕ್ಕೆ ಆರಾಮದಾಯಕವಾಗಿರುತ್ತದೆ. ಇದಲ್ಲದೆ, ನಿದ್ರಿಸುವಾಗ ಸಾಕ್ಸ್ ಧರಿಸುವುದರಿಂದ ಇತರ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

Get a good night’s sleep: ಇದು ನಿಮಗೆ ಬೇಗನೆ ನಿದ್ರಿಸಲು ತುಂಬಾ ಅನುಕೂಲವಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್​ನ ಸಂಶೋಧನಾ ತಂಡವು ರಾತ್ರಿಯಲ್ಲಿ ಸಾಕ್ಸ್ ಧರಿಸುವುದರಿಂದ ಪಾದದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಚಳಿಗಾಲದಲ್ಲಿ WINTERದಾಗಿ ಅನೇಕ ಜನರು ಸರಿಯಾಗಿ ನಿದ್ರೆ ಮಾಡುವುದಿಲ್ಲ.

ಅಂತಹವರು ಮಲಗುವ ಮುನ್ನ ಸಾಕ್ಸ್ ಧರಿಸಿ ಮಲಗುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ತಿಳಿಸುತ್ತಾರೆ. ವಿಶೇಷವಾಗಿ ಸಾಕ್ಸ್ ಧರಿಸುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಹಾಗೂ ನಿಮ್ಮ ಪಾದಗಳನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

Improves blood circulation: ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿದ್ದರೆ, ಎಲ್ಲಾ ಅಂಗಗಳಿಗೆ ರಕ್ತ ಹಾಗೂ ಆಮ್ಲಜನಕದ ಪೂರೈಕೆ ಸರಾಗವಾಗಿರುತ್ತದೆ. ಇದರ ಪರಿಣಾಮವಾಗಿ ಇದು ಹೃದಯ, ಶ್ವಾಸಕೋಶ ಮತ್ತು ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.ಚಳಿಗಾಲದ ರಾತ್ರಿಗಳಲ್ಲಿ WINTERದಾಗಿ ಪಾದಗಳು ತಣ್ಣಗಾಗುತ್ತವೆ.

ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಕಾರಣವಾಗಬಹುದು. ಇದರಿಂದಾಗಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹೀಗಾಗಿ ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.

Reduces cracking of feet: ಏಕೆಂದರೆ ಸಾಕ್ಸ್ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಇದು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಅದೇ ರೀತಿ ರಾತ್ರಿಯಲ್ಲಿ ಸಾಕ್ಸ್ ಧರಿಸಿ ಮಲಗುವುದರಿಂದ ಶಿಲೀಂಧ್ರಗಳ ಸೋಂಕಿನ ಅಪಾಯ ಬಹಳವಾಗಿ ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

WINTERದಲ್ಲಿ ಚಳಿ ಹಾಗೂ ಗಾಳಿಯಿಂದ ಅನೇಕರಿಗೆ ಒಣ ಚರ್ಮ ಮತ್ತು ಪಾದಗಳು ಬಿರುಕು ಬಿಡುತ್ತವೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು, ಅಂತಹ ಜನರು ರಾತ್ರಿಯಲ್ಲಿ ತಮ್ಮ ಪಾದಗಳಿಗೆ ಎಣ್ಣೆ, ಮಾಯಿಶ್ಚರೈಸರ್ ಹಚ್ಚಿಕೊಂಡು ಸಾಕ್ಸ್ ಧರಿಸಿ ಮಲಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

What are the precautions to be taken?: ತುಂಬಾ ಬಿಗಿಯಾಗಿರುವ ಸಾಕ್ಸ್‌ಗಳನ್ನು ಧರಿಸದೆ ಇರುವುದು ಉತ್ತಮ. ಏಕೆಂದರೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು.

ಆದ್ದರಿಂದ, ಸಾಧ್ಯವಾದಷ್ಟು ಸಡಿಲವಾದ, ಸ್ವಚ್ಛವಾದ ಸಾಕ್ಸ್ ಧರಿಸುವುದು ಉತ್ತಮ ಆಗಿರುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.ನೀವು ಧರಿಸುವ ಸಾಕ್ಸ್‌ಗಳು ಯಾವಾಗಲೂ ಸ್ವಚ್ಛವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ, ನೀವು ಕೊಳಕು ಸಾಕ್ಸ್ ಧರಿಸಿದರೆ ಸೋಂಕು ಬರುವ ಸಾಧ್ಯತೆ ಇರುತ್ತದೆ.

 

 

ಇದನ್ನು ಓದಿರಿ : DAVANGERE SMART CITY PROJECT : ದಾವಣಗೆರೆ ನಗರ ಕಾಯ್ತಿವೆ ಆಟೋಮ್ಯಾಟಿಕ್ ಹೈ ಡೆಫಿನಿಷನ್ ಕ್ಯಾಮೆರಾಗಳು

 

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...