New Delhi News:
ದೆಹಲಿ, ಎನ್ಸಿಆರ್ನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದು ವಾಯು ಗುಣಮಟ್ಟವನ್ನು ಅವಲೋಕಿಸಿ, 3ನೇ ಹಂತದ ಜಿಆರ್ಎಪಿ ನೀತಿಯನ್ನು ಮರು ಜಾರಿ ಮಾಡಲಾಗಿದೆ.ಇದರ ಪರಿಣಾಮವಾಗಿ, ವಿಮಾನ ಹಾಗೂ ರೈಲು ಸಂಚಾರ ಬಂದ್ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವೆಡೆ ಸಾಧಾರಣದಿಂದ DENSE FOG ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲಿ DENSE FOG ಮುಸುಕಿದ ವಾತಾವರಣ ಮುಂದುವರೆದಿದ್ದು, ಶುಕ್ರವಾರ ಶೂನ್ಯ ವೀಕ್ಷಣಾ ಸಾಮರ್ಥ್ಯ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲತಾಣದ ಪ್ರಕಾರ, ದೆಹಲಿಯಲ್ಲಿ ಇಂದು ಬೆಳಗ್ಗೆ 6ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 408 ದಾಖಲಾಗುವ ಮೂಲಕ ವಾಯುಮಾಲಿನ್ಯ ಕಳಪೆ ವರ್ಗದಲ್ಲಿದೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿDENSE FOG ಆವರಿಸಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ.ಕಳೆದ ವಾರವೂ ಕೂಡ ಉತ್ತರ ಭಾರತದಲ್ಲಿ DENSE FOGನ ವಾತಾವರಣಲಿತ್ತು. ಅನೇಕ ವಿಮಾನ ಮತ್ತು ರೈಲು ಸೇವೆಯಲ್ಲಿ ಅಸ್ತವ್ಯಸ್ತವಾಗಿತ್ತು.ಫ್ಲೈಟ್ರಾಡರ್24 ವಿಮಾನಯಾನ ವೆಬ್ಸೈಟ್ ಪ್ರಕಾರ, ವಿಮಾನಗಳು ಸರಿಸುಮಾರು 41 ನಿಮಿಷ ತಡವಾಗಿ ಕಾರ್ಯಾಚರಣೆ ಮಾಡಿವೆ.
Delhi Temperature: ದೆಹಲಿಯಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇದೆ. ವಾಯು ಗುಣಮಟ್ಟವನ್ನು ಅವಲೋಕಿಸಿ, 3ನೇ ಹಂತದ ಜಿಆರ್ಎಪಿ ನೀತಿಯನ್ನು ಮರು ಜಾರಿ ಮಾಡಿದೆ.
ಇದನ್ನು ಓದಿರಿ : CORRUPTED OFFICIALS : ಭ್ರಷ್ಟಾಚಾರ, ವಂಚನೆ, ಅಧಿಕಾರ ದುರ್ಬಳಕೆ ಆರೋಪ