spot_img
spot_img

POLIO CERTIFICATE : ‘ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Islamabad News:

ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ POLIO CERTIFICATEವನ್ನು ಕಡ್ಡಾಯಗೊಳಿಸಿದೆ.ಈ ನಿರ್ದೇಶನ ಉಲ್ಲಂಘಿಸುವವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (ಜಿಎಸಿಎ) ಹೇಳಿದೆ.ಸೌದಿ ಅರೇಬಿಯಾದೊಳಗೆ ಬರುವ ಪಾಕಿಸ್ತಾನಿ ಪ್ರಯಾಣಿಕರು ಪೋಲಿಯೊ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಿಸಿದೆ.

ನಿರಂತರವಾಗಿ ಹಿಂಸಾಚಾರ ಪೀಡಿತ ಪ್ರದೇಶಗಳಾದ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನಗಳಲ್ಲಿ ಪೋಲಿಯೊ ಲಸಿಕೆ ಅಭಿಯಾನವನ್ನು ಬಹಿಷ್ಕರಿಸಲಾಗುತ್ತಿದೆ. ಅಲ್ಲದೆ ಪೋಲಿಯೊ ಲಸಿಕೆ ಹಾಕಲು ಬರುವ ಆರೋಗ್ಯ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ.ವಿಶ್ವದಲ್ಲಿ ಸದ್ಯ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಈ ಎರಡೇ ದೇಶಗಳಲ್ಲಿ ಪೋಲಿಯೊ ಇನ್ನೂ ಉಳಿದುಕೊಂಡಿದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಪೋಲಿಯೊ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2024ರಲ್ಲಿ ಅಲ್ಲಿ 68 ಪೋಲಿಯೊ ಪ್ರಕರಣಗಳು ವರದಿಯಾಗಿವೆ.

ಅಪರಾಧ, ವಂಚನೆ ಮತ್ತು ಭಿಕ್ಷಾಟನೆಯಲ್ಲಿ ಭಾಗಿಯಾಗುತ್ತಿರುವ ಆರೋಪದ ಮೇಲೆ ಈಗಾಗಲೇ ಹಲವಾರು ಗಲ್ಫ್ ದೇಶಗಳು ಪಾಕಿಸ್ತಾನಿಗಳಿಗೆ ವೀಸಾ ನಿಷೇಧ ಹೇರಿವೆ. ಏತನ್ಮಧ್ಯೆ ಸೌದಿ ಅರೇಬಿಯಾ ಸರ್ಕಾರ ಕೂಡ ಈಗ ಪಾಕಿಸ್ತಾನಿಗಳಿಗೆ POLIO CERTIFICATE ಕಡ್ಡಾಯಗೊಳಿಸಿದೆ.ಅಸಮರ್ಪಕ ಪ್ರಯಾಣ ದಾಖಲೆ ಹಾಗೂ ಇನ್ನಿತರ ಕಾರಣಗಳಿಗಾಗಿ ಮಂಗಳವಾರ ರಾತ್ರಿ ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ವಿಮಾನಗಳಿಂದ 30 ಪಾಕಿಸ್ತಾನಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ವಲಸೆ ಇಲಾಖೆಯ ಅಧಿಕಾರಿಗಳು ಜಿಯೋ ನ್ಯೂಸ್​ಗೆ ತಿಳಿಸಿದ್ದಾರೆ.

ಏಳು ದೇಶಗಳಿಂದ ಗಡೀಪಾರು ಮಾಡಲಾದ 51 ಪಾಕಿಸ್ತಾನಿಗಳು ಬುಧವಾರ ಕರಾಚಿಗೆ ಬಂದಿಳಿದಿದ್ದಾರೆ.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ವೀಸಾಗಾಗಿ ಅರ್ಜಿ ಸಲ್ಲಿಸುವ ಪಾಕಿಸ್ತಾನಿಗಳು ಪೊಲೀಸರಿಂದ ಉತ್ತಮ ನಡತೆ ಪ್ರಮಾಣ ಪತ್ರ ಪಡೆದು ಸಲ್ಲಿಸುವಂತೆ ಈ ಹಿಂದೆ ಯುಎಇ ಕಡ್ಡಾಯಗೊಳಿಸಿತ್ತು.ಪಾಕಿಸ್ತಾನಿ ಪ್ರಜೆಗಳು ಭಿಕ್ಷಾಟನೆ, ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಇತರ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಈ ಕ್ರಮ ಕೈಗೊಂಡಿವೆ.

ಸೌದಿ ಅರೇಬಿಯಾ ಹೊರತುಪಡಿಸಿ, ಯುಎಇ ಮತ್ತು ಇತರ ಗಲ್ಫ್ ರಾಷ್ಟ್ರಗಳು ಪಾಕಿಸ್ತಾನದ ಕನಿಷ್ಠ 30 ವಿವಿಧ ನಗರಗಳ ಜನರಿಗೆ ವೀಸಾ ನೀಡುವುದನ್ನು ಅನಿರ್ದಿಷ್ಟ ಕಾಲದವರೆಗೆ ನಿರ್ಬಂಧಿಸಿವೆ. ಗಲ್ಫ್ ದೇಶಗಳು ಮತ್ತು ನಗರಗಳು, ವಿಶೇಷವಾಗಿ ದುಬೈ ಮತ್ತು ಅಬುಧಾಬಿ ಲಕ್ಷಾಂತರ ಪಾಕಿಸ್ತಾನಿ ಪ್ರಯಾಣಿಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚು ಆದ್ಯತೆಯ ತಾಣಗಳಾಗಿವೆ. ಆದರೆ ನಿಷೇಧ ಮತ್ತು ಹೆಚ್ಚುತ್ತಿರುವ ವೀಸಾ ತಿರಸ್ಕಾರದ ನಂತರ, ಸತತ ಮೂರನೇ ವರ್ಷ ವಿಶ್ವದ ನಾಲ್ಕನೇ ಕೆಟ್ಟ ಸ್ಥಾನದಲ್ಲಿರುವ ಪಾಕಿಸ್ತಾನಿ ಪಾಸ್​ಪೋರ್ಟ್​ ನ ಸ್ಥಾನ ಮತ್ತಷ್ಟು ಕುಸಿದಿದೆ.

ಇದನ್ನು ಓದಿರಿ : DENSE FOG BLANKETS DELHI : ದೆಹಲಿ-ಎನ್ಸಿಆರ್ ಆವರಿಸಿದ ದಟ್ಟ ಮಂಜು

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

YEDIYURAPPA POCSO CASE : ವಿಚಾರಣೆ ಮುಂದೂಡಿದ ಹೈಕೋರ್ಟ್

Bangalore News: YEDIYURAPPA POCSO CASE ರದ್ದು ಕೋರಿ ಮಾಜಿ ಸಿಎಂ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜ.15ಕ್ಕೆ ಮುಂದೂಡಿದೆ.  ಯಡಿಯೂರಪ್ಪ ಪರ ವಕೀಲರು...

POSTAGE STAMPS EXHIBITION : ಬೆಳಗಾವಿಯಲ್ಲಿ ಗಮನ ಸೆಳೆದ ಅಂಚೆ ಚೀಟಿಗಳ ಪ್ರದರ್ಶನ

Belgaum News: ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ POSTAGE STAMPS EXHIBITION ವನ್ನು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ಕಣ್ತುಂಬಿಕೊಂಡರು.  ಅಂಚೆ ಇಲಾಖೆ,...

GAURI LANKESH MURDER CASE : ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು

Bangalore News: GAURI LANKESH MURDER CASE ದಲ್ಲಿ ಇಂದು ಒಬ್ಬ ಆರೋಪಿಗೆ ಜಾಮೀನು ಸಿಕ್ಕಿದೆ. ಈ ಮೂಲಕ ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರಾದಂತಾಗಿದೆ....

LEOPARD SPOTTED IN INFOSYS CAMPUS : ಚಿರತೆ ಹಾವಳಿ: ಮೈಸೂರು ಇನ್ಫೋಸಿಸ್ ಟ್ರೈನಿ

Mysore News: ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಕಾಣಿಸಿಕೊಂಡ LEOPARD ಇನ್ನೂ ಸೆರೆಯಾಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಟ್ರೈನಿ ಉದ್ಯೋಗಿಗಳಿಗೆ ಜ.26ರವರೆಗೆ ರಜೆ ನೀಡಲಾಗಿದೆ.ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ...