New Delhi News:
ಬಳಕೆದಾರರ ಸಿರಿ ಡೇಟಾವನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು APPLE ಹೇಳಿಕೊಂಡಿದೆ.ಮಾರ್ಕೆಟಿಂಗ್ ಪ್ರೊಫೈಲ್ಗಳನ್ನು ನಿರ್ಮಿಸಲು ಸಿರಿ ಡೇಟಾ ಬಳಸಿಲ್ಲ, ಯಾವುದೇ ಜಾಹೀರಾತಿಗೂ ಅದನ್ನು ಉಪಯೋಗಿಸಿಲ್ಲ ಹಾಗೂ ಯಾವುದೇ ಉದ್ದೇಶಕ್ಕಾಗಿ ಆ ಡೇಟಾವನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು ಆ್ಯಪಲ್ ಗುರುವಾರ ಹೇಳಿದೆ.ಸಿರಿಯೊಂದಿಗೆ ತನ್ನ ಖಾಸಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ ಹಾಗೂ ಅವನ್ನು ಜಾಹೀರಾತುದಾರರಂಥ ಥರ್ಡ್ ಪಾರ್ಟಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಈ ಕ್ಲಾಸ್-ಆಕ್ಷನ್ ಮೊಕದ್ದಮೆ ಹೂಡಲಾಗಿತ್ತು.
ಕಳೆದ ವಾರ ಕ್ಲಾಸ್-ಆಕ್ಷನ್ ಮೊಕದ್ದಮೆಯೊಂದರಲ್ಲಿ APPLE 95 ಮಿಲಿಯನ್ ಡಾಲರ್ ಪರಿಹಾರ ಪಾವತಿಸಿದೆ.”ಸಿರಿಯನ್ನು ಇನ್ನಷ್ಟು ಖಾಸಗಿಯಾಗಿಸಲು ನಾವು ನಿರಂತರವಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ಈ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಬಳಕೆದಾರರ ಡೇಟಾವನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.”ಗೌಪ್ಯತೆಯ ರಕ್ಷಣೆಯು ನಮ್ಮ ವಿನ್ಯಾಸ ಪ್ರಕ್ರಿಯೆಯ ಅಡಿಪಾಯ ಭಾಗವಾಗಿದೆ.
ಇದು ಡೇಟಾ ಕನಿಷ್ಠಗೊಳಿಸುವಿಕೆ, ಆನ್-ಡಿವೈಸ್ ಇಂಟೆಲಿಜೆನ್ಸ್, ಪಾರದರ್ಶಕತೆ ಮತ್ತು ನಿಯಂತ್ರಣದಂಥ ಬಲವಾದ ಭದ್ರತಾ ರಕ್ಷಣೆಗಳನ್ನು ಒಳಗೊಂಡಿರುವ ತತ್ವಗಳಿಂದ ಪ್ರೇರಿತವಾಗಿದೆ” ಎಂದು ಕಂಪನಿ ಒತ್ತಿಹೇಳಿದೆ.ಹೀಗಾಗಿ ಬಳಕೆದಾರರ ಡೇಟಾ APPLE ಸರ್ವರ್ಗಳಿಗೆ ವರ್ಗಾವಣೆಯಾಗುವುದಿಲ್ಲ ಎಂದು ಕಂಪನಿ ಹೇಳಿದೆ. “ಬಳಕೆದಾರರು ಸಿರಿಯೊಂದಿಗೆ ಮಾತನಾಡುವಾಗ ಅಥವಾ ಟೈಪ್ ಮಾಡಿದಾಗ, ಸಾಧ್ಯವಾದಾಗಲೆಲ್ಲಾ ಅವರ ವಿನಂತಿಯನ್ನು ಸಾಧನದಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.” ಎಂದು ಆಪಲ್ ಹೇಳಿದೆ.ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಸಿರಿಯ ಡೇಟಾವನ್ನು ಬಳಕೆದಾರರ ಸಾಧನದಲ್ಲೇ ಸಾಧ್ಯವಾದಷ್ಟು ಸಂಸ್ಕರಣೆ ಮಾಡಲು ವಿನ್ಯಾಸಗೊಳಿಸಲಾಗಿದೆ.