Mysore News:
“ಸಾಮಾನ್ಯವಾಗಿ ಒಂದು ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಒಂದು ವರ್ಷಕ್ಕೆ ಜನರು ಮರೆತು ಬಿಡುತ್ತಾರೆ. ಆದರೆ ರಾಮಲಲ್ಲಾ ಮೂರ್ತಿ ಆ ರೀತಿಯಲ್ಲ. ನಾನು ಹೋದಲ್ಲೆಲ್ಲ ರಾಮಲಲ್ಲಾ ಮೂರ್ತಿಯ ಬಗ್ಗೆ ಜನ ಮಾತನಾಡುತ್ತಾರೆ. ನನ್ನನ್ನು ಗುರುತಿಸುತ್ತಾರೆ. ಅದು ಸಂತೋಷದ ಕ್ಷಣ” ಎಂದು SCULPTOR ARUN YOGIRAJ ಸಂತಸ ವ್ಯಕ್ತಪಡಿಸಿದರು. ಅಯೋಧ್ಯಾ ರಾಮಮಂದಿರದಲ್ಲಿ SCULPTOR ARUN YOGIRAJ ಕೆತ್ತಿದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಜ.22ಕ್ಕೆ ಒಂದು ವರ್ಷ ತುಂಬಲಿದೆ. ಈ ಕುರಿತು SCULPTOR ARUN YOGIRAJ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
My life feels worthwhile:
“ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಗೆ ಕುಟುಂಬ ಸಮೇತ ಹೋಗಿದ್ದೆ. ಬಾಲರಾಮನ ದರ್ಶನ ಪಡೆದು ಎರಡು ನಿಮಿಷಗಳ ಕಾಲ ದೇವರಿಗೆ ವಿರುದ್ಧವಾಗಿ ನಿಂತುಕೊಂಡೆ, ಆಗ ರಾಮಮೂರ್ತಿಯನ್ನು ನೋಡಿದ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕೇಳಿದಾಗ ನನಗೆ ಜೀವನ ಸಾರ್ಥಕವಾಯಿತು ಅನಿಸುತ್ತದೆ.
ಈಗ ಅಯೋಧ್ಯೆ ಭಾರತೀಯರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ” ಎಂದು ಹೇಳಿದರು. “ರಾಮಲಲ್ಲಾನ ಮೂರ್ತಿ ಕೆತ್ತನೆ ಕೆಲಸವನ್ನು ಆ ಭಗವಂತನೇ ನನ್ನ ಕೈಯಲ್ಲಿ ಮಾಡಿಸಿದ್ದಾನೆ. ಮೂರ್ತಿ ಕೆತ್ತನೆ ಕೆಲಸ ಕನಸಿನ ಲೋಕದಲ್ಲಿ ಆದಂತೆ ನಡೆದುಹೋಯಿತು. ಪ್ರತಿಷ್ಠಾಪನೆಯ ನಂತರ ಅಯೋಧ್ಯೆಗೆ ಜನರು ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿರುವುದು ನೋಡಿದರೆ ನನ್ನ ಜೀವನ ಸಾರ್ಥಕವಾಯಿತು ಅನಿಸುತ್ತದೆ.
ವಿಶೇಷವಾಗಿ ಬಾಲರಾಮನ ಕಣ್ಣುಗಳಿಗೆ ಅಂತಿಮ ರೂಪ ಕೊಡುವುದನ್ನು ಜನ ನೋಡಲು ಬಯಸುತ್ತಾರೆ ಎಂಬ ಕುತೂಹಲ ಹಾಗೂ ಭಯ ಇತ್ತು. ಆದರೆ, ಬಾಲರಾಮಮೂರ್ತಿಯ ಕಣ್ಣುಗಳನ್ನು ಇಷ್ಟಪಡುವ ಹಾಗೆ ಶ್ರೀರಾಮನೇ ಮಾಡಿಸಿದ್ದಾನೆ” ಎಂದರು.
Interested in doing more work in the field of sculpture:
ರಾಜಕೀಯ ಬರುವ ಬಗ್ಗೆ SCULPTOR ARUN YOGIRAJ ಪ್ರತಿಕ್ರಿಯಿಸಿ, “ಸದ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಆಸಕ್ತಿಯಿಲ್ಲ. ಶಿಲ್ಪಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ ಇದೆ” ಎಂದು ತಿಳಿಸಿದರು.
Exhibition of Carving Materials:
“ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ್ದ ನಮ್ಮ ತಾತಂದಿರು ಉಪಯೋಗಿಸಿದ್ದ ಸಾಮಗ್ರಿಗಳು, ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿ ಹಾಗೂ ಇತರ ವಸ್ತುಗಳನ್ನು ಮೂರು ದಿನಗಳ ಕಾಲ ತಮ್ಮ ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸಾರ್ವಜನಿಕರು ಉಚಿತವಾಗಿ ನೋಡಬಹುದು” ಎಂದು SCULPTOR ARUN YOGIRAJ ತಿಳಿಸಿದರು.
ಇದನ್ನು ಓದಿರಿ : CYBER CRIME : ನಕಲಿ ಕಾಲ್ ಸೆಂಟರ್ ಪತ್ತೆ, 11 ಜನರ ಬಂಧನ