spot_img
spot_img

HYDERABAD METRO SAFETY MEASURES : ಒಂದೇ ಹಳಿ ಮೇಲೆ ಎರಡು ಮೆಟ್ರೋ ರೈಲುಗಳ ಸಂಚಾರ;

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

30 ಮೀಟರ್​ವರೆಗಿನ ಹತ್ತಿರದ ಅಂತರದಲ್ಲೂ ರೈಲು ಕಾರ್ಯಾಚರಣೆಯನ್ನು ನಿಯಂತ್ರಿಸುವಲ್ಲಿ ಗಾರ್ಡ್ರೈಲ್ ಟೆಕ್ನಾಲಜಿ ಭಾರಿ ಪ್ರಯೋಜನಕಾರಿಯಾಗಿದೆ. ಅಷ್ಟಕ್ಕೂ ಏನಿದು CBTC ತಂತ್ರಜ್ಞಾನ.ಪ್ರಯಾಣಿಕರ ಸುರಕ್ಷತೆ ಬಗ್ಗೆ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದ್ದು, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಹೈದರಾಬಾದ್​​​ನಲ್ಲಿ ಎರಡು METRO ರೈಲುಗಳು ಒಂದೇ ಹಳಿಯ ಮೇಲೆ ಎದುರು ಬದರು ಸಮೀಸುತ್ತಿರುವ ಅಪಾಯಕಾರಿ ದೃಶ್ಯ ವೈರಲ್​ ಆಗಿದೆ. ಆದರೆ ಇತ್ತೀಚಿನ ಸಿಬಿಟಿಸಿ ತಂತ್ರಜ್ಞಾನ ಎಂದರೆ ಸಂವಹನ ಆಧಾರಿತ ರೈಲುಗಳ ನಿಯಂತ್ರಣ ವ್ಯವಸ್ಥೆ ಮೂಲಕ ಈ ಅವಘಡವನ್ನು ಯಶಸ್ವಿಯಾಗಿ ತಡೆಯಲಾಗಿದೆ.

What is CBTC Technology: ಈ ತಂತ್ರಜ್ಞಾನದ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಉಪ್ಪಲ್​ನಲ್ಲಿದೆ. ಇದು ಮೂರು ಕಾರ್ಯಾಚರಣೆ ಕಾರಿಡಾರ್​ನಲ್ಲಿ METRO ಟ್ರೈನ್​ ಗಳ ಚಲನ- ವಲನಗಳ ನಿರ್ವಹಣೆ ಮಾಡುತ್ತಿದೆ. ಭಾರತದಲ್ಲೇ ಮೊದಲ ಬಾರಿಗೆ ಹೈದರಾಬಾದ್​ METROದಲ್ಲಿ ಸುಧಾರಿತ ಸಂಪರ್ಕ ಆಧಾರಿತ ಟ್ರೈನ್​ ನಿಯಂತ್ರಣ (ಸಿಬಿಟಿಸಿ) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಇದು METRO ನಿರ್ವಹಣೆಯಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ.

ಈ ವ್ಯವಸ್ಥೆಯು 30 ಮೀಟರ್​ವರೆಗಿನ ಹತ್ತಿರದ ಅಂತರದಲ್ಲೂ ರೈಲು ಕಾರ್ಯಾಚರಣೆಯನ್ನು ನಿಯಂತ್ರಿಸುವಲ್ಲಿ ಇದು ಯಶಸ್ವಿಯಾಗಿದೆ. ಗಾರ್ಡೈಲ್​ ಟೆಕ್ನಾಲಜಿ ಮೂಲಕ ಈ ಅವಘಡಗಳನ್ನು ತಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ರೈಲುಗಳು ಎದುರು ಬದರು, ಅಥವಾ ಹಿಂದಿನಿಂದ ತೀರಾ ಹತ್ತಿರಕ್ಕೆ ಬಂದಾಗ ಕಣ್ಗಾವಲು ತಂತ್ರಜ್ಞಾನ ಎಂದು ಕರೆಯಿಸಿಕೊಳ್ಳುವ ಗಾರ್ಡ್ರೈಲ್ ಟೆಕ್ನಾಲಜಿ ತಕ್ಷಣಕ್ಕೆ ರೈಲನ್ನು ತಡೆದು ನಿಲ್ಲಿಸಿ, ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸುತ್ತದೆ.

ಸಿಬಿಟಿಸಿ ತಂತ್ರಜ್ಞಾನ ಒಸಿಸಿ ನೈಜ ಸಮಯದೊಂದಿಗೆ ಮೆಟ್ರೊ ರೈಲುಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಹಾಗೇ ಅದರ ಚಲನೆಗಳ ಮೇಲೆ ಕೂಡ ನಿಯಂತ್ರಣ ಹೊಂದಿದ್ದು, ಯಾವುದೇ ಅಪಾಯವನ್ನು ಯಶಸ್ವಿಯಾಗಿ ತಡೆಯುವ ಭರವಸೆ ನೀಡುತ್ತದೆ.

Promise from Metro Rail Officials: ಅದರಂತೆ ಇದೇ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಲಾಗಿದೆ. ಬಳಿಕ ಇದೇ ತಂತ್ರಜ್ಞಾನವೂ ದೇಶದೆಲ್ಲೆಡೆ ಬಳಕೆ ಮಾಡಲಾಗುತ್ತಿದೆ . ರೈಲ್ವೆಯಲ್ಲಿ ರೈಲುಗಳು ಮುಂದೆ ಇದ್ದಲ್ಲಿ, ಇದು ಕಿಲೋ ಮೀಟರ್​ ದೂರದಲ್ಲೇ ರೈಲನ್ನು ತಡೆದು ನಿಲ್ಲಿಸುತ್ತದೆ. METROದಲ್ಲಿ ಇದು 30 ಮೀಟರ್​ ಅಂತರವನ್ನು ಹೊಂದಿದೆ.

ಪೀಕ್​​​ ಅವರ್​ನಲ್ಲಿ ರೈಲುಗಳು ಒಂದಕ್ಕೊಂದು ಹತ್ತಿರ ಬಂದರೂ ಚಿಂತಿಸುವ ಅಗತ್ಯವಿಲ್ಲ ಎಂದರು.ಈ ಕುರಿತು ಮಾತನಾಡಿರುವ METRO ರೈಲಿನ​ ಎಂಡಿ ಎನ್​ವಿಎಸ್ ರೆಡ್ಡಿ, ಸಿಬಿಟಿಸಿ ತಂತ್ರಜ್ಞಾನವೂ ಹೆಚ್ಚು ನೈಜವಾಗಿದ್ದು, ಸಮರ್ಪಕವಾಗಿದೆ. ಮೊದಲ ಬಾರಿಗೆ ಯುರೋಪ್​ನಲ್ಲಿ ಈ ಸಿಬಿಟಿಸಿ ತಂತ್ರಜ್ಞಾನವನ್ನು ನೋಡಿದೆ. ಎಲ್​ ಅಂಡ್​ ಟಿ ಮೆಟ್ರೋ ರೈಲ್​ಗೆ ಈ ಸುಧಾರಿತ ತಂತ್ರಜ್ಞಾನವನ್ಜು ಭಾರತಕ್ಕೆ ತರುವ ಕುರಿತು ಮಾತುಕತೆ ನಡೆಸಲಾಗಿತ್ತು.

ಇದೇ ವೇಳೆ, ಒಸಿಸಿಯ ವೈಶಿಷ್ಟ್ಯತೆಯನ್ನು ತಿಳಿಸಿದ ಅವರು, ಇದು ರೈಲು ನಿರ್ವಹಣೆಯನ್ನು ಪ್ರತಿ ಕ್ಷಣವೂ ನಿರ್ವಹಣೆ ಮಾಡುತ್ತದೆ. ಇದು ಸರಾಗ ಮತ್ತು ಸುರಕ್ಷಿತ ಪ್ರಯಾಣವನ್ನು ಪ್ರಯಾಣಿಕರಿಗೆ ನೀಡುತ್ತದೆ ಎಂದು ಅವರು ವಿವರಿಸಿದರು.ಹೈದರಾಬಧ್​ನಲ್ಲಿನ METRO ಸೇವೆ ಸಾಮರ್ಥ್ಯ ಮತ್ತು ಸುರಕ್ಷತೆಯ ಭರವಸೆ ನೀಡುವಲ್ಲಿ ಸಿಬಿಟಿಸಿ ತಂತ್ರಜ್ಞಾನ ಮಹತ್ವದ ಹೆಜ್ಜೆಯಾಗಿದೆ. ಇದು ಹಲವು ರೈಲುಗಳನ್ನು ಒಂದೇ ಹಳಿಯ ಮೇಲೆ ಸುರಕ್ಷಿತವಾಗಿ ನಿರ್ವಹಣೆ ಮಾಡುತ್ತದೆ ಎಂದು ತಿಳಿಸಿದರು.

ಇದನ್ನು ಓದಿರಿ : DELHI TEMPERATURE : ದೆಹಲಿಯಲ್ಲಿ ಮತ್ತೆ ದಟ್ಟ ಮಂಜು ಮುಸುಕಿದ ವಾತಾವರಣ:

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...