spot_img
spot_img

HOW COLD IS MOON SURFACE : ದೂರವಿದ್ದರೂ ಹತ್ತಿರದಂತೆ ಕಾಣುವ ಆ ಚಂದಮಾಮನ ತಾಪಮಾನದ ಗುಟ್ಟೇನು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

How Cold Is Moon Surface?:

HOW COLD IS MOON SURFACE? ಅಲ್ಲಿ ತಾಪಮಾನ ಹೇಗಿರುತ್ತದೆ? ಇತರೆ ಪರಿಸ್ಥಿತಿಗಳು ಹೇಗಿವೆ ಎಂಬೆಲ್ಲ ಪ್ರಶ್ನೆಗಳಿಗೆ ವಿಜ್ಞಾನ ಮಾತ್ರ ಉತ್ತರ ನೀಡಬಲ್ಲದು.  ಚಂದಮಾಮ ನೋಡಲು ಬಲು ಚೆಂದ. ಹುಣ್ಣಿಮೆಯ ಚಂದ್ರನ ವರ್ಣನೆಗೆ ಪದಗಳೇ ಸಾಲವು. ಪಳಪಳನೆ ಹೊಳೆಯುವ ಚಂದ್ರನ ಕುರಿತು ನೂರಾರು ಕಥೆಗಳಿವೆ. ಅಂತ್ಯವಿಲ್ಲದ ರಹಸ್ಯಗಳಿವೆ. 21ನೇ ಶತಮಾನದಲ್ಲಿಯೂ ಅವನ ಒಡಲ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಇದಕ್ಕೆ ಕಾರಣ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನ.

Too cold, too hot :

ಚಂದ್ರನ ಮೇಲ್ಮೈ ತಾಪಮಾನ -100 ಡಿಗ್ರಿ ಸೆಲ್ಸಿಯಸ್‌ನಿಂದ +​100 ಡಿಗ್ರಿ ಸೆಲ್ಸಿಯಸ್​ವರೆಗೆ ಇರುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿ ಜಾನ್​ ಮೋನಿಯರ್​ ಹೇಳಿದ್ದಾರೆ. ನಾಸಾ(NASA)ದ ಪ್ರಕಾರ ಭೂಮಿಯ ಸರಾಸರಿ ಮೇಲ್ಮೈ ತಾಪಮಾನ 15 ಸೆಲ್ಸಿಯಸ್.

ವ್ಯಾಪ್ತಿಯ ವಿಷಯದಲ್ಲಿ ಇದು ಸರಿಸುಮಾರು -89 ಡಿಗ್ರಿ ಸೆಲ್ಸಿಯಸ್‌ನಿಂದ 57 ಡಿಗ್ರಿ ಸೆಲ್ಸಿಯಸ್​ವರೆಗೆ ಇರುತ್ತದೆ. ಚಂದ್ರನ ಮೇಲಿನ ತಾಪಮಾನ ಅತ್ಯಂತ ವೇಗವಾಗಿ ಬದಲಾಗುತ್ತಿರುತ್ತದೆ. ಅತಿಯಾದ ಚಳಿ, ಬಹುಬೇಗ ಬಿಸಿಯಾಗಿ ಬದಲಾಗುತ್ತದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಪ್ರಾಧ್ಯಾಪಕ ಜಾನ್ ಮೋನಿಯರ್ ಹೇಳಿದ್ದಾರೆ.

Why the difference between Moon and Earth?:

ಭೂಮಿಯ ಮೇಲೆ ಸಾಗರಗಳಿವೆ. ಅವು ಸೂರ್ಯನಿಂದ ಶಾಖವನ್ನು ಹೀರಿಕೊಳ್ಳುತ್ತವೆ. ರಾತ್ರಿ ಶಾಖ ಬಿಡುಗಡೆ ಮಾಡುತ್ತವೆ. ಆದರೆ ಚಂದ್ರನ ಮೇಲೆ ಹಾಗಲ್ಲ. ರಾತ್ರಿ ಚಂದ್ರನ ಮೇಲಿಂದ ಶಾಖವನ್ನು ಹೊರಸೂಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ರಾತ್ರಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗುತ್ತದೆ.

ಚಂದ್ರನ ಹಗಲು-ರಾತ್ರಿ ಚಕ್ರವು ಭೂಮಿಯ ಮೇಲಿನ ಒಂದು ತಿಂಗಳ ಚಕ್ರಕ್ಕೆ ಬಹುತೇಕ ಸಮ. ಅದಕ್ಕಾಗಿಯೇ ಚಂದ್ರನ ಮೇಲ್ಮೈಯಲ್ಲಿ ದೀರ್ಘಾವಧಿಯವರೆಗೆ ಬಿಸಿಲು ಮತ್ತು ಕತ್ತಲೆ ಮೂಡುತ್ತಲೇ ಇರುತ್ತದೆ. ಭೂಮಿ ಮತ್ತು ಚಂದ್ರ ಸೂರ್ಯನಿಂದ ಬಹುತೇಕ ಒಂದೇ ಸಮನಾದ ದೂರದಲ್ಲಿದೆ. (ಸುಮಾರು 150 ಮಿಲಿಯನ್ ಕಿಲೋಮೀಟರ್). ಆದರೆ ಇಬ್ಬರ ಮಧ್ಯೆ ತಾಪಮಾನದಲ್ಲಿ ವ್ಯತ್ಯಾಸ ಬಹಳ.

ಇದು ಹಲವಾರು ಅಂಶಗಳಿಂದ ಪ್ರಭಾವಿತವಾಗಿದೆ. ಭೂಮಿಯಲ್ಲಿ ಶಾಖವನ್ನು ಹೀರಿಕೊಂಡು ವಾಸಯೋಗ್ಯಕ್ಕೆ ಬೇಕಾಗುವ ತಾಪಮಾನ ಒದಗಿಸುತ್ತದೆ. ಆದರೆ ಚಂದ್ರನಿಗೆ ಭೂಮಿಯಂತಹ ವಾತಾವರಣವಿಲ್ಲ. ಇದು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನ ಮೇಲ್ಮೈ ಮೇಲೆ ಬೀಳುವಂತೆ ಅನುವು ಮಾಡಿಕೊಡುತ್ತದೆ ಎಂದು ಪ್ರೊಫೆಸರ್ ಜಾನ್ ಮೋನಿಯರ್ ಹೇಳುತ್ತಾರೆ.

Know Regolith?:

ಚಂದ್ರನ ಮೇಲಿನ ಮಣ್ಣನ್ನು ‘ರೆಗೋಲಿತ್’ ಎಂದು ಕರೆಯಲಾಗುತ್ತದೆ. ಇದು ತುಂಬಾ ಉತ್ತಮ ನಿರೋಧಕವಾಗಿದೆ. ಅದಕ್ಕಾಗಿಯೇ ಚಂದ್ರನ ಮೇಲ್ಮೈ ಹಗಲು ರಾತ್ರಿ ಶಾಖ ಮತ್ತು ಶೀತವನ್ನು ಉಳಿಸಿಕೊಳ್ಳುತ್ತದೆ. ಅಪೋಲೋ 15 ಮತ್ತು 17 ಕಾರ್ಯಾಚರಣೆಗಳ ಸಮಯದಲ್ಲಿ ಚಂದ್ರನ ಮೇಲ್ಮೈಗಿಂತ ಕೆಳಗೆ ತಾಪಮಾನ ಮಾಪನಗಳನ್ನು ತೆಗೆದುಕೊಳ್ಳಲಾಗಿದೆ.

ಮೇಲ್ಮೈಗಿಂತ 14 ಇಂಚುಗಳು (35 ಸೆಂಟಿಮೀಟರ್‌ಗಳು) ಕೆಳಗಿನ ಸರಾಸರಿ ತಾಪಮಾನ ಮೇಲ್ಮೈಗಿಂತ 40-45 ಕೆಲ್ವಿನ್‌ಗಳಷ್ಟು ಬೆಚ್ಚಗಿರುವುದು ಕಂಡುಬಂದಿದೆ. ನಾಸಾ ಪ್ರಕಾರ, ಚಂದ್ರನ ಸಮಭಾಜಕ ವೃತ್ತದಲ್ಲಿ ಹಗಲಿನ ತಾಪಮಾನ 121 ಡಿಗ್ರಿ ಸೆಲ್ಸಿಯಸ್. ರಾತ್ರಿಯ ತಾಪಮಾನ -133 ಡಿಗ್ರಿ ಸೆಲ್ಸಿಯಸ್‌. ಬುಧ ಗ್ರಹದ ನಂತರ ಚಂದ್ರನ ಮೇಲ್ಮೈ ಸೌರವ್ಯೂಹದಲ್ಲಿ ಅತ್ಯಂತ ತೀವ್ರವಾದ ಉಷ್ಣ ವಾತಾವರಣವನ್ನು ಹೊಂದಿದೆ.

ಚಂದ್ರನ ಧ್ರುವಗಳ ಮೇಲೆ ಸೂರ್ಯನ ಉದಯದ ಕಿರಣಗಳು ಬೀಳುವುದಿಲ್ಲ. ಹಾಗಾಗಿ, ಇಲ್ಲಿ ತಾಪಮಾನ ಯಾವಾಗಲೂ 1.5 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ. ಶಾಶ್ವತ ಕತ್ತಲೆಯಲ್ಲಿರುವ ಕೆಲವು ಕುಳಿಗಳು ಮಂಜುಗಡ್ಡೆಯ ಕಣಗಳನ್ನು ಹೊಂದಿರಬಹುದು. ಇದು ಚಂದ್ರನ ಮೇಲೆ ಮಾನವನ ಉಳಿವಿಗೆ ಪ್ರಮುಖವಾಗಬಹುದು ಎಂದು ಪ್ರೊಫೆಸರ್ ಮೋನಿಯರ್ ಅಭಿಪ್ರಾಯಪಟ್ಟಿದ್ದಾರೆ.

Is human life possible on the moon?:

ಕತ್ತಲಿನಲ್ಲಿರುವ ಕುಳಿಗಳು ಅತ್ಯಂತ ತಂಪಾದ ತಾಪಮಾನವನ್ನು ಹೊಂದಿರಬಹುದು ಎಂಬುದು ಸಂಶೋಧಕರ ನಂಬುಕೆ. ಆದರೆ ಸೂರ್ಯನ ಬೆಳಕು ಆ ಕುಳಿಗಳಿಗೆ ತಲುಪುವುದಿಲ್ಲ. ಇದಲ್ಲದೆ ಇತರ ಪ್ರದೇಶಗಳ ಮೇಲೆ ಬಿದ್ದು ಪ್ರತಿಫಲಿಸುವ ಬೆಳಕು ಕೂಡ ಆ ಕುಳಿಗಳನ್ನು ತಲುಪುವುದಿಲ್ಲ. ಈ ಕುಳಿಗಳಲ್ಲಿನ ತಾಪಮಾನವನ್ನು ಇನ್ನೂ ನೇರವಾಗಿ ಅಳೆಯಲಾಗಿಲ್ಲ.

ಆದರೆ ತಾಪಮಾನ ಮೈನಸ್ 248 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಜೂನ್ 2009ರಲ್ಲಿ ಉಡಾವಣೆಯಾದ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ (ಎಲ್​ಆರ್​ಒ) ಮೂಲಕ ನಾಸಾ ಚಂದ್ರನ ಮೇಲಿನ ತಾಪಮಾನವನ್ನು ಅಳೆಯಿತು. ಕೆಲವು ಕತ್ತಲೆಯ ಕುಳಿಗಳಂತಹ ಪ್ರದೇಶಗಳನ್ನು ಗುರುತಿಸಲು ಎಲ್​ಆರ್​ಒ ಆರ್ಬಿಟರ್ ತನ್ನ ಥರ್ಮಲ್ ಕ್ಯಾಮೆರಾ ಮತ್ತು ಡಿವೈನರ್ ಲೂನಾರ್ ರೇಡಿಯೋಮೀಟರ್ ಪ್ರಯೋಗವನ್ನು ಬಳಸಿತು.

ಇದರಲ್ಲಿ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಕಂಡುಬಂದಿದೆ. ಈ ಕುಳಿಗಳು ಮಾನವ ಆಶ್ರಯಕ್ಕೆ ಸೂಕ್ತವಾದ ಸ್ಥಳಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಸಂಶೋಧನೆ ಹೇಳುತ್ತದೆ. ಚಂದ್ರನ ತಾಪಮಾನವು ಹೇಗೆ ಏರಿಳಿತಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಭವಿಷ್ಯದ ಪರಿಶೋಧನೆಗೆ ಬಹಳ ಮುಖ್ಯ. ಆದರೆ ಮನುಷ್ಯ ಚಂದ್ರನ ಮೇಲೆ ದೀರ್ಘಕಾಲ ಇರಬೇಕಾದರೆ ಅಲ್ಲಿನ ತಾಪಮಾನದ ಏರಿಳಿತಗಳನ್ನು ತಡೆದುಕೊಳ್ಳುವ ಉಪಕರಣಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಪ್ರೊಫೆಸರ್ ಮೋನಿಯರ್ ಹೇಳುತ್ತಾರೆ.

ನಾವು ಚಂದ್ರನ ಮೇಲೆ ಶಾಶ್ವತ ನೆಲೆಯನ್ನು ಹೊಂದಬಯಸಿದರೆ ಅಥವಾ ವೈಜ್ಞಾನಿಕ ಉಪಕರಣಗಳೊಂದಿಗೆ ನೆಲೆ ಅಥವಾ ಪ್ರಯೋಗಾಲಯವನ್ನು ಸ್ಥಾಪಿಸಲು ಬಯಸಿದರೆ ಅಲ್ಲಿ ತಾಪಮಾನ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ನಾವು ಚಂದ್ರನ ಮೇಲೆ ಉಳಿಯುವ ವಸ್ತುಗಳನ್ನು ತಯಾರಿಸಬಹುದು ಎಂದು ಪ್ರೊಫೆಸರ್ ಮೋನಿಯರ್ ಹೇಳಿದರು.

ಇದರ ಜೊತೆಗೆ, ಇನ್ಸುಲೆಟಿಂಗ್​ ರೆಗೋಲಿತ್ ವಿವಿಧ ಸಾಧನಗಳೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯ. ಇದು ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ ಎಂದು ಮೋನಿಯರ್​ ಹೇಳಿದರು.

ಇದನ್ನು ಓದಿರಿ : CAMEL FESTIVAL IN BIKANER : ವರ್ಣರಂಜಿತ ಪಾರಂಪರಿಕ ನಡಿಗೆಯೊಂದಿಗೆ ಆರಂಭವಾದ ಹಬ್ಬ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...