spot_img
spot_img

QATAR TALKS ON GAZA TRUCE : ಗಾಜಾ ಕದನ ವಿರಾಮ ಮಾತುಕತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Jerusalem News:

ಗಾಜಾ ಕದನ ವಿರಾಮ ಮಾತುಕತೆಯಲ್ಲಿ ಉತ್ತಮ ಪ್ರಗತಿಯಾಗಿದೆ ಎಂದು ಇಸ್ರೇಲ್ ಹೇಳಿದೆ.ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆಗಾಗಿ QATAR​ನಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಮಾತುಕತೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯನ್ ಸಾರ್ ಸೋಮವಾರ ಹೇಳಿದ್ದಾರೆ.

“ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಲು ಇಸ್ರೇಲ್ ಬಯಸುತ್ತಿದ್ದು, ಒಪ್ಪಂದಕ್ಕೆ ತಲುಪಲು ಶ್ರಮಿಸುತ್ತಿದೆ” ಎಂದು ಸಾರ್ ಹೇಳಿದರು.”ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆಗಳಲ್ಲಿ ಪ್ರಗತಿ ಕಂಡು ಬಂದಿದೆ” ಎಂದು ಜೆರುಸಲೇಂ ಪ್ರವಾಸದಲ್ಲಿರುವ ಡ್ಯಾನಿಶ್ ವಿದೇಶಾಂಗ ಸಚಿವ ಲಾರ್ಸ್ ಲೋಕೆ ರಾಸ್ಮುಸ್ಸೆನ್ ಅವರೊಂದಿಗೆ ಜಂಟಿ ಹೇಳಿಕೆಯಲ್ಲಿ ಸಾರ್ ತಿಳಿಸಿದರು.

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ 15 ತಿಂಗಳಿಗೂ ಹೆಚ್ಚು ಕಾಲದ ಯುದ್ಧ ಕೊನೆಗೊಳಿಸಲು ಸದ್ಯ QATAR​ ರಾಜಧಾನಿ ದೋಹಾದಲ್ಲಿ ಮಾತುಕತೆಗಳು ಆರಂಭವಾಗಿವೆ.ಕದನ ವಿರಾಮದ ಸ್ವರೂಪ ಹೇಗಿರಬೇಕೆಂಬ ಅಂಶವು ಪರೋಕ್ಷ ಮಾತುಕತೆಗಳಲ್ಲಿ ಪ್ರಮುಖ ಅಡೆತಡೆಯ ವಿಷಯವಾಗಿದೆ. ಶಾಶ್ವತ ಕದನ ವಿರಾಮಕ್ಕೆ ಹಮಾಸ್ ಒತ್ತಾಯಿಸುತ್ತಿದ್ದರೆ, ಕದನ ವಿರಾಮ ತಾತ್ಕಾಲಿಕವಷ್ಟೇ ಎಂದು ಇಸ್ರೇಲ್ ಹೇಳುತ್ತಿದೆ.

ಅಗತ್ಯ ಬಿದ್ದರೆ ಮತ್ತೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಆಯ್ಕೆ ತನಗಿರಬೇಕೆಂದು ಇಸ್ರೇಲ್ ಷರತ್ತು ಹಾಕಿದೆ.ಸಕಾರಾತ್ಮಕ ದಿಕ್ಕಿನಲ್ಲಿ ಮಾತುಕತೆಗಳು ನಡೆಯುತ್ತಿವೆ ಹಾಗೂ ತನ್ನ ಷರತ್ತುಗಳನ್ನು ಸಡಿಲಿಸಿರುವ ಇಸ್ರೇಲ್ ಹಮಾಸ್​ನ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ಅವರು ಹೇಳಿದರು. ಎರಡೂ ಕಡೆಯವರು ಒಪ್ಪಿದರೆ, ಒಪ್ಪಂದವನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಬಹುದು ಎಂದು ಅಧಿಕಾರಿ ಹೇಳಿದರು.

ಗಾಝಾ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಕುರಿತು QATAR​ನಲ್ಲಿ ನಡೆದ ಮಾತುಕತೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಮತ್ತೊಬ್ಬ ಇಸ್ರೇಲಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಮತ್ತು ಶಿನ್ ಬೆಟ್ ದೇಶೀಯ ಭದ್ರತಾ ಏಜೆನ್ಸಿಯ ಮುಖ್ಯಸ್ಥ ರೋನೆನ್ ಬಾರ್ ನೇತೃತ್ವದ ಇಸ್ರೇಲ್ ನಿಯೋಗವು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು QATAR ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ ಅವರೊಂದಿಗೆ ಚರ್ಚಿಸಲು ಶನಿವಾರ ದೋಹಾಗೆ ಆಗಮಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಏತನ್ಮಧ್ಯೆ, QATAR ಇಸ್ರೇಲ್ ಮತ್ತು ಹಮಾಸ್ ಎರಡಕ್ಕೂ ಅಂತಿಮ ಕರಡು ಒಪ್ಪಂದದ ಪ್ರತಿಯನ್ನು ಸಲ್ಲಿಸಿದೆ ಎಂಬ ಮಾಧ್ಯಮ ವರದಿಗಳನ್ನು ಇಸ್ರೇಲ್ ಸರ್ಕಾರದ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ ಎಂದು ಇಸ್ರೇಲ್​ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ನ್ಯೂಸ್ ವರದಿ ಮಾಡಿದೆ.

ಇದನ್ನು ಓದಿರಿ : NAG MK2 TRIAL SUCCESSFUL : ಡಿಆರ್ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ನಾಗ್ ಎಂಕೆ2’

 

 

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...