Koppala News:
ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುವ ಕೊಪ್ಪಳದ ಸುಪ್ರಸಿದ್ಧ GAVISIDDESHWARA JATRE 2025 ಕ್ಷಣಗಣನೆ ಶುರುವಾಗಿದೆ. ದಕ್ಷಿಣ ಭಾರತದ ಕುಂಭ ಮೇಳ ಎಂದೇ ಹೆಸರುವಾಸಿಯಾಗಿರುವ ಕೊಪ್ಪಳದ GAVISIDDESHWARA JATRE 2025 ಜ.15 ರಂದು ಸಂಜೆ 5:30 ಗಂಟೆಗೆ ಜರುಗಲಿದ್ದು, ಇಡೀ ಕೊಪ್ಪಳ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ರಥೋತ್ಸವ ವರ್ಷದಿಂದ ವರ್ಷಕ್ಕೆ ವಿಶೇಷಗಳನ್ನೇ ಹೊತ್ತು ತರುವ ಮೂಲಕ ಹಾಗೂ ಅನ್ನ, ಅಕ್ಷರ, ಅಧ್ಯಾತ್ಮ ಎಂಬ ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡುವ ಮೂಲಕ ಜಗದ್ವಿಖ್ಯಾತಿ ಪಡೆಯುತ್ತಿದೆ.
Social Concerns:
ಜಾತ್ರೆ ಎಂದರೆ ಕೇವಲ ಭಕ್ತಿಗೆ ಸೀಮಿತವಾಗಿರದೇ ಜನರಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ, ಪರಿಸರ ಕಾಳಜಿ, ರಕ್ತದಾನ, ಅಂಗಾಂಗ ದಾನ, ಜಲದೀಕ್ಷೆ, ಸಕಲ ಚೇತನ, ಹೀಗೆ.. ಅದ್ಭುತ ಸಾಮಾಜಿಕ ಕಾಳಜಿ ಮತ್ತು ಉದ್ದೇಶಗಳ ಅಭಿಯಾನಗಳಿಂದ ವರ್ಷದಿಂದ ವರ್ಷಕ್ಕೆ ಸತ್ಕಾರ್ಯಗಳನ್ನು ಮಾಡುತ್ತಿರುವ ಗವಿಮಠದ ಜಾತ್ರೆಯ ಮತ್ತೊಂದು ವಿಶೇಷವಾಗಿದೆ.
ಸತತ 15 ದಿನಗಳ ಕಾಲ ಮಹಾ ದಾಸೋಹ ನಡೆಸಿಕೊಂಡು ಬರುತ್ತಿರುವುದು ಜಾತ್ರೆಯ ಮಗದೊಂದು ವಿಶೇಷ. ಈ ವರ್ಷದ ಜಾತ್ರೆಯಲ್ಲಿ ಮೊದಲ ದಿನದ ಪ್ರಸಾದದಲ್ಲಿ ಭಕ್ತರು ಬೆಲ್ಲದ ಜಿಲೇಬಿ ಸವಿ ಸವಿದರು. ಈ ಮಹಾ ದಾಸೋಹಕ್ಕೆ ತಿಂಗಳ ಹಿಂದಿನಿಂದಲೇ ಸುತ್ತಮುತ್ತಲ ಗ್ರಾಮದ ಜನರು ಹೋಳಿಗೆ, ತುಪ್ಪ, ರೊಟ್ಟಿ, ಚಟ್ನಿ, ಕಾಯಿಪಲ್ಯಗಳನ್ನು ತಂದು ಶ್ರೀಮಠಕ್ಕೆ ಅರ್ಪಿಸುವುದು ವಾಡಿಕೆ.
Gavishri Sports Festival:
ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಈ ಬಾರಿಯ ಜಾತ್ರೆಯಲ್ಲಿ ಮ್ಯಾರಥಾನ್ ಸೇರಿದಂತೆ ಹಲವು ದೇಶಿ ಕ್ರೀಡೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮಲ್ಲಗಂಬ, ಮುಂಗೈ ಕುಸ್ತಿ, ಕಬ್ಬಡ್ಡಿ, ಸಂಗಾಣಿ ಕಲ್ಲೆತ್ತುವುದು ಸೇರಿದಂತೆ ವಿವಿಧ ಕ್ರೀಡೆಗಳನ್ನ ಶ್ರೀಮಠದ ಆವರಣದಲ್ಲಿ ಈ ಬಾರಿ ಆಯೋಜಿಸಲಾಗಿದೆ. ಮಹಿಳೆಯರಿಗಾಗಿ ವಿಶೇಷವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಮೂರು ದಿಗಳಕಾಲ ಜಾತ್ರಾ ಮಹೋತ್ಸವದ ನಿಮಿತ್ತ ಗುಡ್ಡದ ಮೇಲೆ ನಿರ್ಮಿಸಿರುವ ಕೈಲಾಸ ಮಂಟಪದಲ್ಲಿ ಭಕ್ತ ಹಿತ ಚಿಂತನ ಸಭೆ ಕೂಡ ಜರುಗಿತು. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಸಾಧನ ಪುರುಷರು ಆಗಮಿಸಿ ಉಪದೇಶಾಮೃತ ನೀಡಿದರು. ಗವಿಮಠ ಜಾತ್ರೆ ಎಂದರೆ ಅದೊಂದು ವಿಶಿಷ್ಟ ಮತ್ತು ವಿಭಿನ್ನ. ಭಕ್ತಿ, ಪ್ರಸಾದ, ಜ್ಞಾನ ನೀಡುವುದು ಈ ಜಾತ್ರೆಯ ವಿಶೇಷ.
ಇದನ್ನು ಓದಿರಿ : DEPORTATION OF 45 ROWDY SHEETERS : ಹುಬ್ಬಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾದ ಪೊಲೀಸ್ ಕಮಿಷನರ್