Mysore News:
ಬೆನ್ನು ನೋವು ಹಿನ್ನೆಲೆ, ನಟ DARSHAN ಅವರಿಂದು ಮೈಸೂರಿನ ಡಾ.ಅಜಯ್ ಹೆಗ್ಡೆ ಅವರನ್ನು ಭೇಟಿಯಾದರು.ನಟ DARSHAN ಮಂಗಳವಾರದಂದು ತಮ್ಮ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ನಗರದ ಮಣಿಪಾಲ ಆಸ್ಪತ್ರೆಗೆ ಆಗಮಿಸಿ, ತಾವು ಹಿಂದಿನಿಂದಲೂ ಚಿಕಿತ್ಸೆ ಹಾಗೂ ಸಲಹೆ ಪಡೆಯುತ್ತಿದ್ದ ಡಾ.ಅಜಯ್ ಹೆಗ್ಡೆ ಅವರನ್ನು ಭೇಟಿಯಾದರು.
ಬಳಿಕ ಅವರಿಂದ ಕೆಲ ಸಲಹೆ ಸೂಚನೆ ಪಡೆದು ವಾಪಸ್ ಆಗಿದ್ದಾರೆ.ಬೆನ್ನು ನೋವು ಹಿನ್ನೆಲೆ ನಟ DARSHAN ವೈದ್ಯರ ಸಲಹೆ ಪಡೆಯಲು ತಮ್ಮ ತೋಟದ ಮನೆಯಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು. ತಮ್ಮ ಬೆನ್ನು ನೋವಿನ ಸಮಸ್ಯೆಗೆ ಸಲಹೆ ಕೊಡುತ್ತಿದ್ದ, ವೈದ್ಯರನ್ನು ಭೇಟಿಯಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಪುನಃ ತೋಟದ ಮನೆಗೆ ವಾಪಸ್ ಆಗಿದ್ದಾರೆ.
What did the doctor say? ಈ ಬಗ್ಗೆ ಡಾ.ಅಜಯ್ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ, DARSHAN ತಮ್ಮ ಬೆನ್ನು ನೋವಿನ ಬಗ್ಗೆ ಚರ್ಚಿಸಲು ಬಂದಿದ್ದರಷ್ಟೇ. ಮತ್ತೇನೂ ಇಲ್ಲ ಎಂದು ದೂರವಾಣಿಯಲ್ಲಿ ಈಟಿವಿ ಭಾರತ್ಗೆ ವೈದ್ಯರು ಮಾಹಿತಿ ನೀಡಿದರು
Darshan Post: ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದರು.
ಕಳೆದ ದಿನ ಭಾರತ ಮಕರ ಸಂಕ್ರಾಂತಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ. DARSHAN ಕೂಡಾ ತಮ್ಮ ತೋಟದ ಮನೆಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಕುದುರೆ ಜೊತೆಗಿನ ತಮ್ಮ ಫೋಟೋ ಹಂಚಿಕೊಂಡ ನಟ, ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11ರಂದು ದರ್ಶನ್ ಸೇರಿ ಹಲವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.
2024ರ ಡಿಸೆಂಬರ್ 13ರಂದು ಪ್ರಕರಣದ ಆರೋಪಿಗಳಾದ ನಟ DARSHAN, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿದೆ.ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ನಟ ದರ್ಶನ್ ಕೆಲ ಸಮಯದವರೆಗೆ ಜೈಲುವಾಸ ಅನುಭವಿಸಿ ಬಂದಿದ್ದಾರೆ.
ಇದನ್ನು ಓದಿರಿ : SANKRANTI HOROSCOPE 2025 : ಸಂಕ್ರಾಂತಿ ರಾಶಿ ಭವಿಷ್ಯ