Walking Rule News:
ತ್ವಚೆಯ ಸೌಂದರ್ಯದ ಜೊತೆಗೆ ಫಿಟ್‌ನೆಸ್ ಕೂಡ ನಿಮ್ಮದಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವುದರಿಂದ ನಿಮಗೆ ಉತ್ತಮ ಫಲಿತಾಂಶ ಲಭಿಸುತ್ತದೆ.ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಫಿಟ್ ಆಗಿರಲು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದಾರೆ. ಈ ರೀತಿ ಫಿಟ್ ಆಗಿರುವುದರಿಂದ ಆರೋಗ್ಯ, ಆತ್ಮವಿಶ್ವಾಸ ಹಾಗೂ ಸೌಂದರ್ಯವೂ ವರ್ಧಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈ ನಿಟ್ಟಿನಲ್ಲಿ ‘6-6-6’ ನಿಯಮ ತುಂಬಾ ಸಹಾಯಕ.
ಪ್ರತಿನಿತ್ಯ ಹೀಗೆ ಮಾಡುವುದರಿಂದ ವೈದ್ಯರನ್ನು ಆಗಾಗ ಭೇಟಿಯಾಗುವ ಅಗತ್ಯವೂ ಇರಲ್ಲ. ಬೆಳಗಿನ ನಡಿಗೆ ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸಲು ಹಾಗೂ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲೂ ಕೂಡ ಸಹಕಾರಿ ಎಂದು ತಜ್ಞರು ಹೇಳುತ್ತಾರೆ.ನೀವು ಬೆಳಿಗ್ಗೆ 6 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ WALKING ಮಾಡಬೇಕು.
ಅದಕ್ಕೂ ಮೊದಲು ಆರು ನಿಮಿಷಗಳ ಕಾಲ ವಾರ್ಮಪ್ ಮಾಡಿ ಬೆಚ್ಚಗಾಗಬೇಕು. ಒಟ್ಟು 60 ನಿಮಿಷಗಳ WALKING ಅನ್ನು ನೀವು ನಿಯಮಿತವಾಗಿ ಮಾಡಲು ಸಾಧ್ಯವಾದರೆ, ಅದ್ಭುತ ಫಲಿತಾಂಶಗಳು ಸಿಗುತ್ತವೆ. ಪರಿಣಾಮವಾಗಿ, ನೀವು ಬಯಸಿದ ಫಿಟ್ನೆಸ್ ಸಾಧಿಸುವುದಲ್ಲದೇ, ನಿಮ್ಮ ತ್ವಚೆಯ ಸೌಂದರ್ಯವನ್ನೂ ಹೆಚ್ಚಿಸಲು ಸಾಧ್ಯವಾಗುತ್ತದೆ.
What does the research say?: ನಿಯಮಿತವಾಗಿ WALKING ಮಾಡುವುದರಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಸಂಜೆಯ ನಡಿಗೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಸಂಜೆಯ ನಡಿಗೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ನಿದ್ರಾಹೀನತೆ ನಿವಾರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.2017ರಲ್ಲಿ ಜರ್ನಲ್ ಆಫ್ ಸ್ಪೋರ್ಟ್ಸ್ ಸೈನ್ಸ್ ಆ್ಯಂಡ್ ಮೆಡಿಸಿನ್‌ನಲ್ಲಿ ಪ್ರಕಟವಾದ ‘WALKING ಮತ್ತು ಹೃದಯರಕ್ತನಾಳದ ಆರೋಗ್ಯ:
ಒಂದು ವ್ಯವಸ್ಥಿತ ವಿಮರ್ಶೆ’ ಎಂಬ ಅಧ್ಯಯನದಲ್ಲಿ ಈ ವಿಷಯವು ತಿಳಿದುಬಂದಿದೆ.ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ. ಇದರ ಪರಿಣಾಮವಾಗಿ ಹೃದಯ ಸಮಸ್ಯೆಗಳ ಅಪಾಯ ತುಂಬಾ ಕಡಿಮೆಯಾಗುತ್ತದೆ.
60 minutes of walking: WALKING ಮಾಡಿದ ನಂತರ ವಿಶ್ರಾಂತಿ ಪಡೆಯುವುದರಿಂದ ದೇಹದ ಉಷ್ಣತೆ ನಿಯಂತ್ರಿಸಲು ಸಹಾಯವಾಗುತ್ತದೆ. ಇದು ಸ್ನಾಯುಗಳಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಇದು ಸ್ನಾಯುಗಳ ಆಯಾಸ ಕಡಿಮೆ ಮಾಡುತ್ತದೆ. ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮತ್ತೇಕೆ ತಡ? ಇಂದಿನಿಂದ WALKINGನ ಹೊಸ ನಿಯಮ ಟ್ರೈ ಮಾಡಿ ನೋಡಿ.ಪ್ರತಿದಿನ 60 ನಿಮಿಷಗಳ ಕಾಲ WALKING ಮಾಡುವುದರಿಂದ ಅಧಿಕ ತೂಕದಿಂದ ದೂರವಿರಲು ಸಹಾಯವಾಗುತ್ತದೆ. ನಡೆಯುವ ಮೊದಲು ಆರು ನಿಮಿಷಗಳ ವಾರ್ಮ್ಅಪ್ ಮಾಡುವ ಅಭ್ಯಾಸವು ಹೃದಯ ಬಡಿತ ಹಾಗೂ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಸ್ನಾಯುಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇವೆಲ್ಲವೂ ದೇಹವನ್ನು ನಡೆಯಲು ಸಿದ್ಧಪಡಿಸುತ್ತದೆ. ಇದರಿಂದ ವೇಗವಾಗಿ WALKING ಮಾಡಲು ಪ್ರೋತ್ಸಾಹ ಲಭಿಸುತ್ತದೆ.
ಇದನ್ನು ಓದಿರಿ : ACTRESS RAGINI CASE : ಡ್ರಗ್ಸ್ ಸರಬರಾಜು ಆರೋಪ