spot_img
spot_img

RETIRED SOLDIER SERVICE : ನಿವೃತ್ತಿ ಬಳಿಕವೂ ವಿಶ್ರಮಿಸದ ಯೋಧ!

spot_img
spot_img

Share post:

Haveri News:

61 ವರ್ಷದ ಯೋಧರೊಬ್ಬರು ನಿವೃತ್ತಿ ಬಳಿಕವೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಕೈತೋಟದ ಮೂಲಕ ಪರಿಸರ ಜಾಗೃತಿ ಜೊತೆಗೆ ಹಲವು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿ ಆಗುತ್ತಿದ್ದಾರೆ. ಆದರೆ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ RETIRED ಯೋಧರೊಬ್ಬರೊಬ್ಬರು ಪರಿಸರ ಕಾಳಜಿ, ಸಾಮಾಜಿಕ ಕೆಲಸ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.ಇಂದಿನ ಆಹಾರ ಪದ್ಧತಿ, ಒತ್ತಡದ ಜೀವನದಲ್ಲಿ 40ರ ಹರಯದಲ್ಲೇ ಶಕ್ತಿ ಕುಂದಿ ಹಲವು ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

RETIRED ವೇಳೆಗೆ ಮಧುಮೇಹ, ರಕ್ತದೋತ್ತಡ, ಸ್ನಾಯುಸೆಳೆತದಿಂದ ಬಳಲುವವರೇ ಸಂಖ್ಯೆಯೇ ಅಧಿಕ.ಇವರ ವಿಶಿಷ್ಟ ಹವ್ಯಾಸವೆಂದರೆ ಪರಿಸರ ಪ್ರೇಮ. ಇವರು ತಮ್ಮ ಮನೆಯ ಸುತ್ತ ಕೈತೋಟದಲ್ಲಿ ನೂರಾರು ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಈ ಪರಿಸರಕ್ಕೆ ನಾವು ಏನಾದರೂ ನೀಡಬೇಕು ಎನ್ನುವುದು ಇವರ ಧ್ಯೇಯ.ಇವರ ಹೆಸರು ಎಂ.ಡಿ.ಚಿಕಣ್ಣನವರ. ವಯಸ್ಸು 61. 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಳಿಕ 16 ವರ್ಷ ರಾಜ್ಯ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

Vegetable, fruit and flower plants in six acres of space: ರುದ್ರಾಕ್ಷಿ ಏಲಕ್ಕಿ, ಲವಂಗ, ದಾಲ್ಚಿನ್ನಿ, ಸೀತಾಫಲ, ರಾಮಫಲ ಥೈವಾನ್ ಮಾವು, ಅಂಜೂರು ಮತ್ತು ಅರಿಶಿನ, ಬಾಳೆ, ಸೇಬು, ಮೋಸಂಬಿ, ಕಿತ್ತಳೆಯೂ ಇಲ್ಲಿದೆ.ಆರು ಗುಂಟೆ ಜಾಗದಲ್ಲಿ ತೆಂಗು, ಮಾವು, ಬೇವು, ಹತ್ತಿ, ಸಾಗವಾನಿ, ಕರಬೇವು ಮತ್ತು ಅಡಕೆ ಗಿಡ ಹಚ್ಚಿದ್ದಾರೆ.

ಅಷ್ಟೇ ಅಲ್ಲ ಜೊತೆಗೆ ನಮ್ಮ ನೆಲದಲ್ಲಿ ಬೆಳೆಯಲಾರದ ಗಿಡಗಳನ್ನು ಕೂಡ ಚಿಕ್ಕಣ್ಣ ಬೆಳೆಸಿದ್ದಾರೆ.ಹತ್ತಾರು ಬಗೆಯ ದಾಸವಾಳ, ಗುಲಾಬಿ, ಮೇಪ್ಲವರ್ ಬ್ರಹ್ಮಕಮಲ ಸೇರಿದಂತೆ ಹಲವು ಬಗೆಯ ಹೂಗಳನ್ನು ಬೆಳೆದಿದ್ದಾರೆ. ಹಾಗೆಯೇ ತಮಗೆ ಬೇಕಾದ ತರಕಾರಿಯನ್ನೂ ಇಲ್ಲೇ ಬೆಳೆಯುವುದು ವಿಶೇಷ. ಇವರು ಯಾವುದೇ ರಾಸಾಯನಿಕ ಗೊಬ್ಬರ ಬಳಸಲ್ಲ. ಬದಲಾಗಿ ಕೃಷಿ ವಿವಿಯಲ್ಲಿ ಸಿಗುವ ಜೈವಿಕ ಗೊಬ್ಬರ ಮಾತ್ರ ಉಪಯೋಗಿಸುತ್ತಾರೆ.

Social Service: ಭ್ರಷ್ಟಾಚಾರ ವಿರೋಧಿ ಜನ ಆಂದೋಲನದಲ್ಲಿಯೂ ತೊಡಗಿಸಿಕೊಂಡಿರುವ ಇವರು ಅಣ್ಣಾ ಹಜಾರೆ ಅವರನ್ನ ಬ್ಯಾಡಗಿಗೆ ಕರೆಸಿ ಜನಸಾಮಾನ್ಯರಿಗೆ ಅರಿವು ಮೂಡಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಪ್ರಾಣಿಪಕ್ಷಿಗಳಿಗೆ ನೀರು ಆಹಾರ ಕೊರತೆಯಾಗದಂತೆ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಆಹಾರ ನೀರು ಇಡುತ್ತಾರೆ.

ಸರ್ಕಾರಿ ಇಲಾಖೆಯ ಸಹಸ್ರಾರು ಗ್ಯಾಲನ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಸ್ವಚ್ಛ, ಗ್ರಾಮಗಳಲ್ಲಿ ಜಲ ಸಂಬಂಧಿತ ರೋಗಗಳು ಕಾಣಿಸಿಕೊಂಡು ನಿಯಂತ್ರಣಕ್ಕೆ ಬರದಿದ್ದಾಗ ಜಲಾಗಾರಗಳನ್ನು ಶುದ್ಧಗೊಳಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು.ಯೋಧರಾಗುವ ಕುರಿತಂತೆ ತರಬೇತಿ ನೀಡುವ ಇವರು 200 ಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ. ಜೊತೆಗೆ ಸಮಾಜದಲ್ಲಿ ಬಡವರಿಗಾಗಿ ದನಿ, ನಿರಾಶ್ರಿತರಿಗೆ ನಿವೇಶನ ದೊರಕಿಸಲು ಹೋರಾಟ ಮಾಡುತ್ತಿದ್ದಾರೆ.

ಆ ಮರಗಳು ಈಗ ಫಲ ಕೊಡುತ್ತಿವೆ. ಇನ್ನು ಪ್ರತಿಯೊಬ್ಬರು ಭ್ರಷ್ಟಾಚಾರವನ್ನು ವಿರೋಧಿಸಬೇಕು. ಲಂಚ ಕೇಳುವುದು, ಕೊಡುವುದು ಅಪರಾಧ ಎನ್ನುತ್ತಾರೆ ಚಿಕ್ಕಣ್ಣನವರ್.ಮನುಷ್ಯನಾಗಿ ಭೂಮಿಗೆ ಬಂದಿದ್ದೇವೆ ಏನಾದರೂ ಒಳಿತು ಮಾಡಬೇಕು. ಪರಿಸರ ಬಗ್ಗೆ ಸಂದೇಶ ನೀಡುವುದಕ್ಕೆ ನಮ್ಮ 6 ಗುಂಟೆ ಜಾಗದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಬಹಳಷ್ಟು ಗಡಿ ಮರಗಳನ್ನು ಬೆಳೆಸಿದ್ದೇನೆ.

ಇದನ್ನು ಓದಿರಿ : SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...