Jerusalem/Gaza News:
ಹಮಾಸ್ – ISRAEL ನಡುವೆ ಕದನ ವಿರಾಮ ಏರ್ಪಟ್ಟಿದೆ. ಈ ಒಪ್ಪಂದದ ಭಾಗವಾಗಿ ಮೂವರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಆ ಮೂವರು ಈಗಾಗಲೇ ಇಸ್ರೇಲ್ ತಲುಪಿದ್ದಾರೆ.ISRAEL ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಒಪ್ಪಂದದ ಮೊದಲ ದಿನವೇ ಗಾಜಾದಲ್ಲಿ ಹಮಾಸ್ ಸೆರೆಯಲ್ಲಿದ್ದು, ಬಿಡುಗಡೆಯಾದ ಮೂವರು ಮಹಿಳೆಯರು ISRAELಗೆ ಆಗಮಿಸಿದ್ದಾರೆ ಎಂದು ISRAEL ಅಧಿಕಾರಿಗಳು ತಿಳಿಸಿದ್ದಾರೆ.
ನೋವಾ ಸಂಗೀತ ಉತ್ಸವದಿಂದ ಇವರೆಲ್ಲರನ್ನು ಹಮಾಸ್ ಉಗ್ರರು ಅಪಹರಿಸಿದ್ದರು. ಹಮಾಸ್ ನಿಂದ ಅಪಹರಣಕ್ಕೆ ಒಳಗಾಗಿ 471 ದಿನಗಳ ಸೆರೆಯಲ್ಲಿದ್ದ ಇವರು ಅಂತಿಮವಾಗಿ ಭಾನುವಾರ ಬಿಡುಗಡೆಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಬ್ರಿಟಿಷ್-ಇಸ್ರೇಲಿ 28 ವರ್ಷದ ಎಮಿಲಿ ದಮರಿ, 30 ವರ್ಷದ ಪಶುವೈದ್ಯಕೀಯ ನರ್ಸ್ ಡೊರೊನ್ ಸ್ಟೈನ್‌ಬ್ರೆಚರ್, 23 ವರ್ಷದ ರೋಮಿ ಗೊನೆನ್ ಬಿಡುಗಡೆಗೊಂಡ ಮಹಿಳೆಯರಾಗಿದ್ದಾರೆ.
33 more expected to be released: ಒಪ್ಪಂದದ ಪ್ರಕಾರ, ಹಮಾಸ್ ಪ್ರತಿ ವಾರ ಮೂರರಿಂದ ನಾಲ್ಕು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತಾ ಬರುತ್ತದೆ. ಇದಕ್ಕೆ ಪ್ರತಿಯಾಗಿ, ISRAEL ತನ್ನ ಜೈಲಿನಲ್ಲಿರುವ ನೂರಾರು ಪ್ಯಾಲೆಸ್ತೀನ್ ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನ 90 ಜನರನ್ನು ISRAEL ಬಿಡುಗಡೆ ಮಾಡಿದೆ. ಇ
ದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ.ಮೂರು – ಹಂತದ ಒಪ್ಪಂದದ ಅಡಿಯಲ್ಲಿ ಭಾನುವಾರ ಒತ್ತೆಯಾಳುಗಳ ಬಿಡುಗಡೆ ಆಗಿದೆ. ಆರು ವಾರಗಳ ಶಾಂತಿ ಒಪ್ಪಂದ ಈ ಮೂಲಕ ಜಾರಿಗೆ ಬಂದಿದೆ. ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ, 46,900 ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಈ ಯುದ್ಧದಲ್ಲಿ ಮೃತಪಟ್ಟಿದ್ದಾರೆ.
Red Cross-led hostage release: ಸ್ವಲ್ಪ ಸಮಯದ ಹಿಂದೆ ISRAEL ರಕ್ಷಣಾ ಪಡೆಗಳು (ಐಡಿಎಫ್) ಮತ್ತು ಶಿನ್ ಬೆಟ್ ಪಡೆಗಳೊಂದಿಗೆ ಬಿಡುಗಡೆಯಾದ ಒತ್ತೆಯಾಳುಗಳು ಗಾಜಾ ಗಡಿಯನ್ನು ದಾಟಿದರು ಎಂದು ISRAEL ರಕ್ಷಣಾ ಪಡೆಗಳು ತಿಳಿಸಿವೆ.ಗಾಜಾದಲ್ಲಿನ ರೆಡ್‌ಕ್ರಾಸ್ ಮೂಲಕ ಹಮಾಸ್ ಮೂವರು ಮಹಿಳಾ ಒತ್ತೆಯಾಳುಗಳನ್ನು ISRAEL ಪಡೆಗಳಿಗೆ ಹಸ್ತಾಂತರಿಸಿದೆ ಎಂದು ISRAEL ಮಿಲಿಟರಿ ಹೇಳಿದೆ.
ಹಮಾಸ್ ಹಿಡಿತದಿದ ಬಿಡುಗಡೆಯಾ ಮೂವರನ್ನು ದಕ್ಷಿಣ ISRAELನ ಗಾಜಾ ಗಡಿಯ ಸಮೀಪವಿರುವ ಸ್ವಾಗತ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಆರಂಭಿಕ ವೈದ್ಯಕೀಯ ಮೌಲ್ಯಮಾಪನಕ್ಕೆ ಒಳಗಾದರು ಮತ್ತು ಅವರ ತಾಯಂದಿರನ್ನು ಭೇಟಿಯಾದರು ಎಂದು ISRAEL ಮಿಲಿಟರಿ ತಿಳಿಸಿದೆ.
Netanyahu said deliverance from hell: ISRAEL ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರದರ್ಶನದ ತಮ್ಮ ಹೇಳಿಕೆಯಲ್ಲಿ ಮೂವರು ನರಕದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
We are not alone in breaking the rules: ISRAEL ಪಡೆಗಳು ಗಾಜಾದ ಹೊರವಲಯಕ್ಕೆ ಸ್ಥಳಾಂತರಗೊಂಡಿವೆ. ಹಮಾಸ್ ಒಪ್ಪಂದವನ್ನು ಉಲ್ಲಂಘಿಸಿದರೆ ನಾವು ತಕ್ಕ ಪ್ರತ್ಯುತ್ತರ ನೀಡಲು ಸನ್ನದ್ಧವಾಗಿದ್ದೇವೆ ಎಂದು ಅವರು ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಇನ್ನು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ IDF ವಕ್ತಾರ ಡೇನಿಯಲ್ ಹಗರಿ, ಮೂವರು ಒತ್ತೆಯಾಳುಗಳು ಮತ್ತು ಅವರ ಕುಟುಂಬಗಳು ಬಹಳ ಸಮಯದ ನಂತರ ಮತ್ತೆ ಒಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Adherence to the Ceasefire Agreement: ನಾವು ಇತರ ಪ್ರತಿರೋಧದ ಬಣಗಳೊಂದಿಗೆ, ಕದನ ವಿರಾಮ ಒಪ್ಪಂದಕ್ಕೆ ನಮ್ಮ ಸಂಪೂರ್ಣ ಬದ್ಧತೆಯನ್ನು ಘೋಷಿಸುತ್ತೇವೆ. ಆದರೆ, ಇದು ಶತ್ರುಗಳ ಅನುಸರಣೆಯ ಮೇಲೆ ನಿಂತಿದೆ ಎಂದು ಉಬೈದಾ ದೂರದರ್ಶನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್‌ನ ಸೇನಾ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ವಕ್ತಾರ ಅಬು ಉಬೈದಾ ಭಾನುವಾರ ಮಾತನಾಡಿ, ಅಲ್-ಕಸ್ಸಾಮ್ ಮತ್ತು ಇತರ ಪ್ಯಾಲೇಸ್ಟಿನಿಯನ್ ಬಣಗಳು ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿವೆ ಎಂದು ಹೇಳಿದ್ದಾರೆ.
ಇದನ್ನು ಓದಿರಿ : SAIF ALI KHAN ATTACK CASE : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ