Mysore News:
ಮೈಸೂರು ನಗರದ ಶ್ರೀರಾಪುರ, ವಿಜಯನಗರ, ರಾಮಕೃಷ್ಣ ನಗರ, ಆಲನಹಳ್ಳಿ, ಬೋಗಾದಿ, ದೇವನೂರು, ಹಂಚಾ ಸಾತಗಳ್ಳಿ, ಹೆಬ್ಬಾಳ್ ಸೇರಿದಂತೆ ಸುಮಾರು 631 ನಿವೇಶನಗಳ ವಿವರವನ್ನು ಕೇಳಲಾಗಿದೆ. ಮುಡಾದಲ್ಲಿ (ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ) ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವೂ ED WROTE LETTER TO MUDA COMMISSION, 631 ಸೈಟ್ಗಳ ವಿವರ ಕೇಳಿದೆ.
ಈ ನಿವೇಶನಗಳಿಗೆ ಸಂಬಂಧಿಸಿದಂತೆ ಮಾಲೀಕರು, ಅವರ ವಿಳಾಸಗಳನ್ನು ಕೂಡಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ. ಪಿಎಂಎಲ್ಎ 2002ರ ಸೆಕ್ಷನ್ 24ರ ಅಡಿ ಈ ಪತ್ರ ನೀಡಲಾಗಿದ್ದು, ಇದನ್ನು ಪರಿಗಣಿಸಬಹುದು ಎಂದು ಇಡಿ ಮಡಾ ಪತ್ರದಲ್ಲಿ ನಮೂದಿಸಿದೆ.
ಹಾಗೇ ನಿವೇಶನ ಹಂಚಿಕೆದಾರರ ವಿವರಗಳು, ಹೆಸರು, ವಿಳಾಸ, ಹಂಚಿಕೆ ದಿನಾಂಕ, ಹಂಚಿಕೆಯ ಗಾತ್ರ, ಹಂಚಿಕೆ ಮಾಡಿರುವ ಭೂಮಿಯ ವಿವರಗಳು, ಗ್ರಾಮಗಳು, ಉತ್ತೇಜಿತ ನಿವೇಶನದ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಸರ್ವೆ ಸಂಖ್ಯೆ ವಿಸ್ತೀರ್ಣವನ್ನು ಸಹ ಉಲ್ಲೇಖಿಸಬಹುದು ಎಂದು ಹೇಳಿದೆ.
ಇದನ್ನು ಓದಿರಿ : TRUMP FIRST DAY SIGNATURES PLAN : 100 ಕಾರ್ಯಾದೇಶಗಳಿಗೆ ಸಹಿ ಹಾಕಲು ಪ್ಲಾನ್