spot_img
spot_img

FOOD FESTIVAL : ಇನ್ನರ್ವ್ಹೀಲ್ ಕ್ಲಬ್ ಆಹಾರ ಮೇಳ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Haveri News:

ರೋಟರಿ ಕ್ಲಬ್ ಆವರಣದಲ್ಲಿ‌ ಇನ್ನರ್​ವ್ಹೀಲ್ ಕ್ಲಬ್ ವತಿಯಿಂದ ಶನಿವಾರ FOOD FESTIVAL ನಡೆಯಿತು. ಹಾವೇರಿ ನಗರದ ಮಹಿಳೆಯರು ತಯಾರಿಸಿದ ವಿವಿಧ ಬಗೆಯ ಖಾದ್ಯಗಳು ಹಾಗೂ ಕರಕುಶಲ ವಸ್ತುಗಳ ಮಾರಾಟ‌ ಏರ್ಪಡಿಸಲಾಗಿತ್ತು. ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಇನ್ನರ್​ವ್ಹೀಲ್ ಕ್ಲಬ್ ಪುಡ್ ಫೆಸ್ಟಿವಲ್ ಆಯೋಜಿಸಿತ್ತು.

ಮೇಳದಲ್ಲಿ 20ಕ್ಕೂ ಅಧಿಕ ಮಹಿಳೆಯರು ತಾವು ತಯಾರಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ ಮಾಡಿದರು. ಹಾವೇರಿ ನಗರದಲ್ಲಿ ಹಲವಾರು ಮಹಿಳೆಯರು ವೈವಿಧ್ಯಮಯ ಆಹಾರ ತಯಾರಿಸುತ್ತಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುವುದಿಲ್ಲ. ಗ್ರಾಹಕರಿಗೂ ಅವು ತಲುಪುವುದಿಲ್ಲ. ಇಂತಹ ಹೆಣ್ಣುಮಕ್ಕಳಿಗೆ ವೇದಿಕೆ ಒದಗಿಸಲು ಹಾಗೂ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಗ್ರಾಹಕರಿಗೆ ಉತ್ಪಾದಕರಿಂದ ಉತ್ಪನಗಳು ನೇರವಾಗಿ ಸಿಗಲು ಹಾವೇರಿ ಇನ್ನರ್​ವ್ಹೀಲ್ ಕ್ಲಬ್ FOOD FESTIVAL ಆಯೋಜಿಸಿತ್ತು.

ಉತ್ತರ ಕರ್ನಾಟಕದ ಖರಿಂಡಿ, ಶೇಂಗಾಚಟ್ನಿ, ಮಂಡಕ್ಕಿ, ಅವಲಕ್ಕಿ, ಕೊಬ್ಬರಿಕಡ್ಡಿ, ಕೋಡುಬಳೆ ಸೇರಿದಂತೆ ವಿವಿಧ ಖಾದ್ಯಗಳು ಬಾಯಲ್ಲಿ ನೀರೂರಿಸಿದವು. ರಾಗಿ ಹಲ್ವಾ, ಶಂಕರಪಳೆ, ರವಾ ಉಂಡೆ, ಬೂಂದಿ ಉಂಡೆ ಚಿಗಳಿ ಸೇರಿದಂತೆ ಉತ್ಪನಗಳ ಮಾರಾಟದ ಭರಾಟೆ ಜೋರಾಗಿತ್ತು.  FOOD FESTIVAL ಸಂಜೆಯ ಕುರುಕಲು ತಿಂಡಿಗಳಾದ ವಡಾಪಾವ್, ಮಿರ್ಚಿ ಮಂಡಕ್ಕಿ ಇತರ ಖಾದ್ಯಗಳನ್ನು ಆಹಾರ ಪ್ರಿಯರು ಸವಿದರು.

ಬಳಕದ ಮೆಣಸಿನಕಾಯಿ, ವಿವಿಧ ಉಪ್ಪಿನಕಾಯಿಗಳು, ಸಿರಿಧಾನ್ಯದಿಂದ ಮಾಡಿದ ಆಹಾರ ಪದಾರ್ಥಗಳೂ ಸಹ ಜನರ ಗಮನ ಸೆಳೆದವು. ಈ ಸಂದರ್ಭದಲ್ಲಿ ಮಾತನಾಡಿದ ಇನ್ನರ್​ವ್ಹೀಲ್ ಕ್ಲಬ್​ ಅಧ್ಯಕ್ಷೆ ಕೃಷ್ಣವೇಣಿ, ”ಮಹಿಳೆಯರು ತಯಾರಿಸುವ ವಸ್ತುಗಳಿಗೆ ವೇದಿಕೆ ಒದಗಿಸಿದ್ದಕ್ಕೆ ಸಂತಸವಾಗುತ್ತಿದೆ. ಸಾಕಷ್ಟು ಮಹಿಳೆಯರು ಉತ್ಕೃಷ್ಟಮಟ್ಟದ ಆಹಾರ ಪದಾರ್ಥ ತಯಾರಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರುಕಟ್ಟೆ ಸಿಗುವುದಿಲ್ಲ. ಇಂತಹ ಮಹಳೆಯರಿಗಾಗಿ ಕ್ಲಬ್ ಈ ಮೇಳ ಆಯೋಜಿಸಿದೆ. ಇದರ ಜೊತೆಗೆ ಸಾಮಾಜಿಕ ಕಾರ್ಯಕ್ಕಾಗಿ ಫಂಡ್ ಸಹ ಕಲೆಕ್ಟ್ ಮಾಡಲಾಗುತ್ತದೆ. ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುವುದು” ಎಂದು ತಿಳಿಸಿದರು.

ತಿಂಡಿಪ್ರಿಯರು ಈ ರೀತಿಯ FOOD FESTIVAL ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ಇನ್ನರ್​ವ್ಹೀಲ್ ಕ್ಲಬ್ ಸಾಕಷ್ಟು ಸಂಖ್ಯೆಯ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ. ಸದಾ ಮಹಿಳೆಯರ ಏಳ್ಗೆಗಾಗಿ ದುಡಿಯುವ ಕ್ಲಬ್ ಕಾರ್ಯಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನು ಓದಿರಿ : BEANT SINGH ASSASSINATION CASE : ಮರಣ ದಂಡನೆ ರದ್ದು ಕೋರಿದ ರಾಜೋನಾ ಅರ್ಜಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...