WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Tirumala (Andhra Pradesh) News:
TIRUPATI ಅನ್ನಪ್ರಸಾದದಲ್ಲಿ ಹೊಸದಾಗಿ ಮಸಾಲೆ ವಡೆ ಸೇರ್ಪಡೆ ಮಾಡಲಾಗಿದೆ. ಮೊದಲ ದಿನ 5 ಸಾವಿರ ಭಕ್ತರಿಗೆ ಸಂತರ್ಪಣೆ ಮಾಡಲಾಗಿದೆ.
ವಿಶ್ವವಿಖ್ಯಾತ TIRUPATI ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರಿಗೆ ನೀಡಲಾಗುವ ಅನ್ನದಾಸೋಹದಲ್ಲಿ ಮಸಾಲೆ ವಡೆಯನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಮೊದಲ ದಿನವಾದ ಮಂಗಳವಾರ 5 ಸಾವಿರ ಭಕ್ತರಿಗೆ ವಡೆಯನ್ನು ಉಣ ಬಡಿಸಲಾಗಿದೆ.TIRUPATI ತಿರುಮಲ ದೇವಸ್ಥಾನ (ಟಿಟಿಡಿ) ಮಂಡಳಿಯು ದಕ್ಷಿಣ ಭಾರತದ ರುಚಿಕರ ಖಾದ್ಯವಾದ ಮಸಾಲೆ ವಡೆಯನ್ನು ಭಕ್ತರಿಗೆ ಅನ್ನಪ್ರಸಾದದಲ್ಲಿ ನೀಡುವ ಬಗ್ಗೆ ಯೋಚಿಸಿತ್ತು. ಅದರಂತೆ ಇಂದು ಅನ್ನಪ್ರಸಾದದ ಜೊತೆಗೆ ಸಂತರ್ಪಣೆ ಮಾಡಲಾಗಿದೆ.
Masala Vade- TTD ahead of opinion poll: ಮೊದಲ ದಿನ ವಡೆ ಸವಿದ ಭಕ್ತರು ಅದರ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಮಸಾಲೆ ವಡೆಯ ನೀಡಿದ್ದನ್ನು ಸ್ವಾಗತಿಸಿ, ಇದು ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.ಭಕ್ತರ ದಾಸೋಹದಲ್ಲಿ ಮಸಾಲೆ ವಡೆಯನ್ನು ಮುಂದುವರಿಸಬೇಕೆ ಬೇಡವೇ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಟಿಟಿಡಿ ತಿಳಿಸಿದೆ.
Thippappa’s darshan by 6.83 lakh devotees in 10 days: ಜನವರಿ 10 ರಿಂದ 19 ರ ನಡುವೆ ವೈಕುಂಠ ದ್ವಾರದಲ್ಲಿ 6.83 ಲಕ್ಷ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ಅವಧಿಯಲ್ಲಿ ಟಿಟಿಡಿ 34.43 ಕೋಟಿ ರೂಪಾಯಿ ಹುಂಡಿ ಆದಾಯ ಪಡೆದಿದೆ. 1,13,132 ಭಕ್ತರು ತಮ್ಮ ಆಚರಣೆಯ ಭಾಗವಾಗಿ ಮುಡಿ ನೀಡಿದ್ದಾರೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
An unceasing ocean of devotees: ತಿಮ್ಮಪ್ಪನ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಸ್ಥಿರವಾಗಿದೆ. ಸರ್ವದರ್ಶನ ಟಿಕೆಟ್ಗಳಿಲ್ಲದೇ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ನಾರಾಯಣಗಿರಿಯ ಎರಡು ಪ್ರದೇಶದಲ್ಲಿ ಭಕ್ತರು ಸರದಿಯಲ್ಲಿ ನಿಂತಿದ್ದರು. ಟೋಕನ್ಗಳಿಲ್ಲದ ಭಕ್ತರು 15 ಗಂಟೆಗಳ ಒಳಗೆ ದರ್ಶನ ಪಡೆಯಲಿದ್ದಾರೆ ಎಂದು ಟಿಟಿಡಿ ಈಗಾಗಲೇ ತಿಳಿಸಿದೆ.
ಇದನ್ನು ಓದಿರಿ : JOB MARKET : ಭಾರತದ ಉದ್ಯೋಗ ನೇಮಕಾತಿ ಶೇ 31ರಷ್ಟು ಹೆಚ್ಚಳ