spot_img
spot_img

MAHAMASTAKABHISHEKA : ವರೂರಿನ 9 ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಪ್ರಾರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hubli News:

ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಏಕಕಾಲಕ್ಕೆ ಒಂಭತ್ತು ತೀರ್ಥಂಕರರಿಗೆ MAHAMASTAKABHISHEKA ಮಾಡಲಾಯಿತು. ಎತ್ತರದ ಸ್ಥಾನದಲ್ಲಿ ಕಮಲಗಳ ನಡುವೆ ಪ್ರತಿಷ್ಠಾಪಿತಗೊಂಡ ನವಗ್ರಹ ಪ್ರತಿಮೆಗಳ ಎದುರು ಸೇರಿದ್ದ ಸಾವಿರಾರು ಭಕ್ತರು 12 ವರ್ಷಗಳಿಗೊಮ್ಮೆ ಜರುಗುವ ಮಹಾಮಸ್ತಕಾಭಿಷೇಕ ವೈಭವದ ದೃಶ್ಯಗಳನ್ನು ಕಣ್ತುಂಬಿಕೊಂಡು ಹರ್ಷಪಟ್ಟರು.

ಸಮೀಪದ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ ಬುಧವಾರ ಸಂಜೆ ಒಂಭತ್ತು ತೀರ್ಥಂಕರರಿಗೆ ಏಕಕಾಲಕ್ಕೆ MAHAMASTAKABHISHEKA ನೆರವೇರಿಸಲಾಯಿತು. ಆರಂಭದಲ್ಲಿ ಇಂದ್ರ ಸಹಿತ ಅಷ್ಟದಿಕ್ಪಾಲಕರು, ಆದಿತ್ಯಾದಿ ನವಗ್ರಹಗಳನ್ನು ಆಮಂತ್ರಿಸಿ, ವಿಘ್ನನಿವಾರಣೆಗಾಗಿ ಅರ್ಘ್ಯ ನೀಡಿ ಪ್ರಾರ್ಥಿಸಲಾಯಿತು. ಆಚಾರ್ಯ ಗುಣಧರ ನಂದಿ ಮಹಾರಾಜರು ಹಸಿರು ನಿಶಾನೆ ತೋರಿದ ಮೇಲೆ ಜಲಾಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕವು ಆರಂಭಗೊಂಡಿತು.

ಮಹಿಳೆಯರ ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಚಂಡೆವಾದನ ಹಾಡುಗಳಿತ್ತು. ತೀರ್ಥಂಕರ ಗುರುದೇವ ಕುಂತುಸಾಗರ ಮಹಾರಾಜ, ಆಚಾರ್ಯ ಗುಣಧರ ನಂದಿ ಮಹಾರಾಜ ಹಾಗೂ ಇತರೆ ನಂದಿ ಆಚಾರ್ಯರು ಉಪಸ್ಥಿತರಿದ್ದರು. ಇಂದ್ರ ಇಂದ್ರಾಣಿಯರು ಮೊದಲು ಭಗವಾನ್ ಪಾರ್ಶ್ವನಾಥರು ಹಾಗೂ ಅದೇ ಕಾಲಕ್ಕೆ ಇತರ ತೀರ್ಥಂಕರರ ಮಸ್ತಕದ ಮೇಲೆ ಎಳನೀರು ಅಭಿಷೇಕ ಮಾಡಿದರು. ಹಳದಿ, ಕುಂಕುಮ, ಚಂದನ, ಕರ್ಪೂರ, ಗಿಡಮೂಲಿಕೆಗಳ ಮಿಶ್ರಿತ ಜಲಗಳಿಂದ ಮಸ್ತಕಾಭಿಷೇಕವು ನೆರವೇರಿತು. ಗುರುದೇವ ಆಚಾರ್ಯ ಕುಂತುಸಾಗರ ಮಹಾರಾಜರು, ಅನೇಕಾಂತ ಆಚಾರ್ಯರು ಮೊದಲಾದವರು ಮಾತನಾಡಿದರು.

ಇದನ್ನು ಓದಿರಿ : MLA JANARDHANA REDDY : ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...

AAMIR KHAN : ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಆ ದಿನವನ್ನು ಎಂದಿಗೂ ಮರೆಯಲಾಗದು

Hyderabad News: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಗ್ಲೆಂಡ್​ ವಿರುದ್ಧದ ರೋಚಕ 5ನೇ ಟಿ20 ಪಂದ್ಯಕ್ಕೆ ನಟ AAMIR KHAN ​ ಕೂಡಾ ಸಾಕ್ಷಿಯಾಗಿದ್ದರು....

VIRAT KOHLI RANJI TROPHY : ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್

New Delhi News: VIRAT KOHLI RANJI TROPHY​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು...