Bangalore News:
ಬ್ಯಾಂಕ್ ವಹಿವಾಟು ಖಚಿತಪಡಿಸಿಕೊಳ್ಳುವ ಸೋಗಿನಲ್ಲಿ ಕರೆ ಮಾಡಿ ಮಹಿಳೆಯೊಬ್ಬರ ಖಾತೆಯಿಂದ ಕ್ಷಣ ಮಾತ್ರದಲ್ಲೇ 2 ಲಕ್ಷ ರೂ. ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಪ್ರತಿನಿಧಿಗಳು ಎಂದು ಕರೆ ಮಾಡಿದ್ದ ವಂಚಕರು ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ವಂಚಿಸಿದ್ದಾರೆ.
ಈ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾದಾಗ ಬ್ಯಾಂಕ್‌ಗಳು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಹಕರಿಗೆ ಮೇಲ್ ಅಥವಾ ಸಂದೇಶ ಕಳುಹಿಸುವುದು ಸಾಮಾನ್ಯ.ಎಗರಿಸಿದ ಪ್ರಕರಣ ವರದಿಯಾಗಿದೆ.
ಆದರೆ ಬ್ಯಾಂಕ್‌ಗಳ ಈ ಕ್ರಮವನ್ನೂ ದುರ್ಬಳಕೆ ಮಾಡಿಕೊಂಡ CYBER ಖದೀಮರು, ನಿಮ್ಮ ವಹಿವಾಟು ಖಚಿತಪಡಿಸಿ ಎಂದು ಕರೆ ಮಾಡಿ ಮಹಿಳೆಯೊಬ್ಬರ ಖಾತೆಯಿಂದ ಕ್ಷಣ ಮಾತ್ರದಲ್ಲಿ 2 ಲಕ್ಷ ರೂ.
Complaint Details: ಈ ರೀತಿಯ ಕರೆಗಳು ಬಂದಾಗ ಸಾರ್ವಜನಿಕರು ಅವರು ಹೇಳುವುದನ್ನು ಮಾಡದೇ ನೇರವಾಗಿ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರ ಮಹಿಳೆಗೆ ಜನವರಿ 20ರಂದು ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ಕರೆ ಮಾಡಿರುವ ವಂಚಕ, ”ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ” ಎಂದಿದ್ದಾನೆ.
ಗಾಬರಿಗೊಂಡ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ ”ನಿಮ್ಮ ಬ್ಯಾಂಕ್ ಮ್ಯಾನೇಜರ್‌ನ ಸಂಪರ್ಕಿಸಿ” ಎಂದು ಕರೆ ಸ್ಥಗಿತಗೊಳಿಸಿದ್ದಾರೆ. ಅನುಮಾನದ ಮೇಲೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ತಮ್ಮ ಖಾತೆಯಲ್ಲಿನ 2 ಲಕ್ಷ ರೂ. ವಂಚಕರ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಕ್ಷಣ ರಾಷ್ಟ್ರೀಯ CYBER ಕ್ರೈಂ ಸಹಾಯವಾಣಿ (1930) ಗೆ ಪ್ರಾಥಮಿಕ ದೂರು ಸಲ್ಲಿಸಿರುವ ಮಹಿಳೆ, ನಂತರ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ.
ಇದ್ದನು ಓದಿರಿ :SAIF ALI KHAN CASE:ಆರೋಪಿಯ ಪೊಲೀಸ್ ಕಸ್ಟಡಿ ವಿಸ್ತರಣೆ.