spot_img
spot_img

LOS ANGELES RECOVER FROM WILDFIRES : ಅಗ್ನಿ ಅನಾಹುತಕ್ಕೆ ಒಳಗಾಗಿರುವ ಲಾಸ್ ಏಂಜಲೀಸ್ಗೆ ಕ್ಯಾಲಿಫೋರ್ನಿಯಾ ನೆರವು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Sacramento (USA) News:

ಬೆಂಕಿ ಅನಾಹುತಕ್ಕೆ ತುತ್ತಾಗಿರುವ LOS ANGELES​ನಲ್ಲಿ ಮರು ನಿರ್ಮಾಣ ಕಾರ್ಯಕ್ಕಾಗಿ ಕ್ಯಾಲಿಫೋರ್ನಿಯಾ, ಸ್ಥಳೀಯ ಸರ್ಕಾರಕ್ಕೆ ಪರಿಹಾರ ಹಣ ನೀಡಲು ಮುಂದಾಗಿದೆ.ಭೀಕರ ಬೆಂಕಿ ಅನಾಹುತಕ್ಕೆ ತುತ್ತಾಗಿದ್ದLOS ANGELES ​ ಪ್ರದೇಶದ ಚೇತರಿಕೆಗಾಗಿ 2.5 ಬಿಲಿಯನ್​ ನೀಡಲು ಕ್ಯಾಲಿಫೋರ್ನಿಯಾ ಸರ್ಕಾರ ಮುಂದಾಗಿದೆ. ಈ ಕುರಿತು ಪರಿಹಾರ ಪ್ಯಾಕೇಜ್​ಗೆ ಗುರುವಾರ ಡೆಮಾಕ್ರಟಿಕ್​ ಗವರ್ನರ್​ ಗವಿನ್​ ನ್ಯೂಸಮ್​ ಸಹಿ ಹಾಕಿದ್ದಾರೆ.

ಮನೆಗಳ ಪುನರ್​ನಿರ್ಮಾಣಕ್ಕೆ ಸ್ಥಳೀಯ ಸರ್ಕಾರ 4 ಮಿಲಿಯನ್​ ಡಾಲರ್​ಗೆ ಕೂಡ, ಕ್ಯಾಲಿಫೋರ್ನಿಯಾ ಶಾಸಕರು ಅನುಮತಿ ನೀಡಿದ್ದು, 1 ಮಿಲಿಯನ್​ ಡಾಲರ್​ಗಳನ್ನು ಮರು ನಿರ್ಮಾಣ ಕಾರ್ಯಕ್ಕೆ ನೀಡಲಾಗಿದೆ.ರಾಜ್ಯ ಶಾಸಕಾಂಗದ ಅನುಮತಿ ಬಳಿಕ ನ್ಯೂಸಮ್​ ಈ ಕಾನೂನಿಗೆ ಸಹಿ ಹಾಕಿದರು. ಈ 2.5ಬಿಲಿಯನ್​ ಡಾಲರ್​ ಪರಿಹಾರದಲ್ಲಿ ರಾಜ್ಯ ವಿಪತ್ತು ನಿರ್ವಹಣೆಯ ಪ್ರಕ್ರಿಯೆಯ ಪ್ರಯತ್ನವಾದ ಸ್ಥಳಾಂತರ, ಬದುಕುಳಿದವರಿಗೆ ಆಶ್ರಯ ಮತ್ತು ಅಪಾಯಕಾರಿ ತ್ಯಾಜ ನಿವಾರಣೆ ಕ್ರಮ ಕೈಗೊಳ್ಳುವ ಯತ್ನ ಮಾಡಲಿದೆ.

ಯಾವುದೇ ಫೆಡರಲ್​ ಅಗ್ನಿ ಅನಾಹುತ ಪರಿಹಾರ ಬರಬೇಕಾದರೆ, ಅದು ಷರತ್ತಿನೊಂದಿಗೆ ಬರಬೇಕು ಎಂದು ಅವರು ಸಲಹೆ ನೀಡಿದ್ದರು. ಮಾಜಿ ಅಧ್ಯಕ್ಷ ಬೈಡನ್​​ ಕೂಡ ಈ ತಿಂಗಳ ಆರಂಭದಲ್ಲಿ ವಿಪತ್ತು ಸಹಾಯಕ್ಕೆ ಅನುಮತಿ ನೀಡಿದ್ದರು.ಇದು ಭರವಸೆಯ ಭಾವವನ್ನು ನೀಡುವುದಾಗಿದೆ ಎಂದು ನ್ಯೂಸಮ್​ ಪಸಡೆನಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕ್ಯಾಲಿಫೋರ್ನಿಯಾ ಬೆಂಕಿ ಅನಾಹುತದ ಹಾನಿಯ ಪರಿಶೀಲನೆ ಮಾಡುವ ನಿರ್ಧಾರಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ.

Newsom called a special session to prepare for the legal battle: LOS ANGELES​ ಅಗ್ನಿ ಅನಾಹುತ ಹಿನ್ನಲೆ ಸರ್ಕಾರವೂ ಈ ಪರಿಹಾರ ಹಣವನ್ನು ತನ್ನ ಪ್ರಾಧಾನ್ಯತೆಯಾಗಿಸಿಕೊಂಡಿದೆ. ರಿಪಬ್ಲಿಕನ್ ರಾಜ್ಯ ಶಾಸಕರ ಒತ್ತಾಸೆಯ ಮೇಲೆ ಚೇತರಿಕೆ ನಿಧಿಗೆ ಅನುಮೋದನೆ ನೀಡಲು ವಿಶೇಷ ಅಧಿವೇಶನ ಕರೆದಿದ್ದರು.

ರಾಜ್ಯ ವಿಪತ್ತನ್ನು ಎದುರಿಸುತ್ತಿರುವಾಗ ಟ್ರಂಪ್ ಅವರ ಮೇಲೆ ಗಮನ ನೀಡುವುದು ತಪ್ಪಾಗಲಿದೆ ಎಂದಿದ್ದರು.ಟ್ರಂಪ್​ ಆಡಳಿತದ ವಿರುದ್ಧ ಕಾನೂನಾತ್ಮಕ ಹೋರಾಟದ ಸಿದ್ಧತೆಗಾಗಿ ನವೆಂಬರ್​ನಲ್ಲಿ ಗ್ಯಾವಿನ್ ನ್ಯೂಸಮ್​ ಶಾಸಕರ ವಿಶೇಷ ಅಧಿವೇಶನವನ್ನು ಕರೆದಿದ್ದರು.

Opposition also supports Governor’s decision: ಸ್ಟೇಟ್​ ಸೆನೆಟ್​​​ ಕೂಡ 25 ಮಿಲಿಯನ್​ ಡಾಲರ್​ಗೆ ಅನುಮತಿ ನೀಡಿದೆ. ಜನವರಿ 7ರಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬೆಂಕಿ ದುರಂತ ಕಾಣಿಸಿಕೊಂಡಿತ್ತು. ಭಾರಿ ಅಗ್ನಿ ಅನಾಹುತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯಕ್ಕಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವ ಭರವಸೆ ಇದೆ.

ನ್ಯೂಸಮ್​ ಸ್ವಂತವಾಗಿ ಈ ಪರಿಹಾರ ಹಣವನ್ನು ನೀಡುತಿಲ್ಲ ಎಂದು ಕೆಲ್ಲೆ ಸೆಯರ್ಟೊ ಟೀಕಿಸಿದ್ದರೂ, ಈ ಮಸೂದೆಗೆ ಅವರು ಬೆಂಬಲಿಸಿದ್ದಾರೆ. ಭವಿಷ್ಯದಲ್ಲಿ ಡೆಮಾಕ್ರಟಿಕರು ರಿಪಬ್ಲಿಕನ್ನರ ಜೊತೆಗೆ ಸೇರಿ ಮತ್ತುಷ್ಟು ಉತ್ತಮವಾದ ಕೆಲಸ ಮಾಡಬೇಕು. ಈ ರೀತಿಯ ಅನಾಹುತ ಮತ್ತೆಂದು ಆಗದಂತೆ ನಾವೆಲ್ಲಾ ಯೋಜನೆ ರೂಪಿಸಬೇಕು ಎಂದರು.

ಇದನ್ನು ಓದಿರಿ : YALLAPUR ACCIDENT CASE : ಭೀಕರ ಅಪಘಾತ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...

BOMB THREAT CALLS TO AIRLINES : 2024ರಲ್ಲಿ ವಿಮಾನಗಳಿಗೆ ಬಂದಿದ್ದು ಬರೋಬ್ಬರಿ 728 ಹುಸಿ ಬಾಂಬ್ ಕರೆ, ಇಂಡಿಗೋಗೆ ಅತಿ ಹೆಚ್ಚು

New Delhi News: 2024ರಲ್ಲಿ ಒಟ್ಟು 728 ಹುಸಿ ಬಾಂಬ್​ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ....

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...