spot_img
spot_img

BIGG BOSS GRAND FINALE : ಸುದೀಪ್ ನಿರೂಪಣೆಯ ಕೊನೆ ‘ಬಿಗ್ ಬಾಸ್’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bigg Boss News :

ಸುದೀಪ್​ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್​ ಬಾಸ್​​ ಕನ್ನಡದ BIGG BOSS GRAND FINALE ಇಂದು ಮತ್ತು ನಾಳೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ನಿಮ್ಮ ಪ್ರಕಾರ ವಿಜೇತರು ಯಾರು? ಬಿಗ್​ ಬಾಸ್​, ವ್ಯಕ್ತಿತ್ವಗಳ ಆಟ. ಒಂದೊಳ್ಳೆ ವ್ಯಕ್ತಿತ್ವದ ಗೆಲುವು ನಿರ್ಧಾರ ಮಾಡೋದು ಪ್ರೇಕ್ಷಕ ಪ್ರಭುಗಳು. ಬಿಗ್​ ಬಾಸ್​ ಅನ್ನೋದೇ ಒಂದು ಎಮೋಷನ್​​.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. BIGG BOSS GRAND FINALE ಅಭಿನಯ ಚಕ್ರವರ್ತಿ ಸುದೀಪ್​ ಈ ಶೋನ ಹೈಲೆಟ್​​. ಫೈನಲಿ, ಸೀಸನ್​ 11ರ ಗ್ರ್ಯಾಂಡ್​ ಫಿನಾಲೆ ಬಂದೇ ಬಿಡ್ತು. ವಿಜೇತರು ಯಾರೆಂಬುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಕನ್ನಡಿಗರ ಕುತೂಹಲ ಗರಿಗೆದರಿದೆ.

ಕಿಚ್ಚ ರೆಡಿ ಆಗಾಯ್ತು, ಕಿಚ್ಚೆಬ್ಬಿಸೋ ರಿಸಲ್ಟ್ ಮಾತ್ರ ಬಾಕಿ! ಬಿಗ್ ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲೆ, ಇಂದು-ನಾಳೆ ಸಂಜೆ 6ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನಡಿ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​​ಗಳಲ್ಲಿ ಪ್ರೋಮೋ ಅನಾವರಣಗೊಂಡಿದೆ. ಸುದೀಪ್​​​ ನಿರೂಪಣೆಯಲ್ಲಿ ಬರುವ ಈ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದೆ.

ಶನಿವಾರ ಮತ್ತು ಭಾನುವಾದ ಎಪಿಸೋಡ್​ ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಇವರ ನಿರೂಪಣಾ ಶೈಲಿ ಫೇಮಸ್​ ಆಗಿದೆ. ವಾರದಲ್ಲಿ ನಡೆದಿರೋ ಸರಿ ತಪ್ಪುಗಳನ್ನು ಚರ್ಚಿಸಿ, ಸ್ಪರ್ಧಿಗಳನ್ನು ತಿದ್ದಿ ತೀಡೋ ಕೆಲಸವನ್ನು ಸುದೀಪ್​ ಮಾಡ್ತಾರೆ.

ಆದ್ರೆBIGG BOSS GRAND FINALE ಸುದೀಪ್​ ಅವರ ಕೊನೆ ಸೀಸನ್​ ಅನ್ನೋದು ಮಾತ್ರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೆಚ್ಚಿನ ಸಿನಿಮಾಗಳನ್ನು ಪ್ರೇಕ್ಷಕರಿಗೆ ಪೂರೈಸುವ ಪಣ ತೊಟ್ಟಿರುವ ಸುದೀಪ್​​, ಇದು ನನ್ನ ಕೊನೆ ಸೀಸನ್​ ಎಂದುಬಿಟ್ಟಿದ್ದಾರೆ. ಅದಾಗ್ಯೂ ಸುದೀಪ್​ ನಿರ್ಧಾರ ಬದಲಿಸಿಕೊಳ್ಳಲಿದ್ದಾರಾ? ಅಭಿಮಾನಿಗಳಿಗಾಗಿ ಬಿಗ್ ಬಾಸ್​ ನಿರೂಪಣೆಯನ್ನು ಮುಂದುವರಿಸಲಿದ್ದಾರಾ ಎಂದು ಕಾದು ಕುಳಿತಿರುವವರ ಸಂಖ್ಯೆ ದೊಡ್ಡದಿದೆ.

ಅದ್ಧೂರಿ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ ಕಿಚ್ಚ. ಪ್ರೋಮೋದಲ್ಲಿ ತಮ್ಮ ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಮ್ಯಾಕ್ಸ್​ ಸಿನಿಮಾ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾದ ಸ್ಟೆಪ್ಪೇ ಈ ಸ್ಟೇಜ್​ನಲ್ಲೂ ಹಾಕಿದ್ದು, ಗ್ರ್ಯಾಂಡ್​ ಫಿನಾಲೆ ಭರ್ಜರಿಯಾಗಿ ಮೂಡಿ ಬರಲಿದೆ ಅನ್ನೋದು ಸ್ಪಷ್ಟವಾಗಿದೆ.

Bigg Boss Kannada Season 11 Finalists:

  • ಹನುಮಂತು
  • ಮೋಕ್ಷಿತಾ
  • ತ್ರಿವಿಕ್ರಮ್​
  • ಮಂಜು
  • ರಜತ್ ಕಿಶನ್​
  • ಭವ್ಯಾ

ಇದನ್ನು ಓದಿರಿ : BIGG BOSS FINALIST HANUMANTHA : ಹನುಮಂತನ ಊರಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್ಸ್

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...