Tumkur News :
ತುಮಕೂರು ನಗರದಲ್ಲಿ ಆಯೋಜನೆಗೊಂಡ FLOWER SHOW EXHIBITIONದಲ್ಲಿ ಸರ್ವ ಧರ್ಮ ಗುರುಪರಂಪರೆಯನ್ನ ನೆನಪಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ತುಮಕೂರಿನ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ನೆನಪಿಸಿಕೊಳ್ಳಲಾಗಿದೆ. ಅವರ ಭಾವಚಿತ್ರವನ್ನು ಸುಂದರವಾದ ತೆಂಗಿನ ಗರಿಗಳ ಕಲಾಕೃತಿಯೊಳಗೆ ಇರಿಸಿ ಪ್ರದರ್ಶಿಸಲಾಗಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ನಗರದಲ್ಲಿ ಆಯೋಜಿಸಲಾಗಿರುವ FLOWER SHOW EXHIBITIONದಲ್ಲಿ ಸರ್ವ ಧರ್ಮ ಗುರುಪರಂಪರೆಯನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.
FLOWER SHOW EXHIBITION ದಲ್ಲಿ ಜೈನ ಧರ್ಮದ ಶ್ರೀ ಶಾಂತಿಸಾಗರ ಮುನಿಗಳ ಗುರು ಪರಂಪರೆಯನ್ನು ಮತ್ತು ದಿವ್ಯಾಕಾಶ ಸಮವಸರಣವನ್ನು ನೆನಪಿಸುವ ಜಿಲ್ಲಾಡಳಿತದ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ. ಅದೇ ರೀತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರುಗಳ ಸಮಾಜಸೇವೆಯನ್ನು ಬಿದಿರಿನ ಸುಂದರವಾದ ಕಲಾಕೃತಿಯಲ್ಲಿ ಇರಿಸಲಾಗಿದ್ದು, ಅವರನ್ನು ನೆನಪಿಸುವ ಪ್ರಯತ್ನ ಮಾಡಲಾಗಿದೆ.
ಜಿಲ್ಲೆಯ ಮಂದರಗಿರಿ ಬೆಟ್ಟವು ಪ್ರಮುಖ ಜೈನ ಯಾತ್ರಾ ಕೇಂದ್ರವಾಗಿದ್ದು, ಜೈನ ಧರ್ಮವು ಕರ್ನಾಟಕದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. 81 ಅಡಿ ಎತ್ತರದ ಸುಂದರವಾದ ಪಿಂಚಿ ಮಂದಿರದ ಗುಮ್ಮಟದ ಸ್ವರೂಪದಲ್ಲಿಯೇ ಪ್ರತಿಕೃತಿ ನಿರ್ಮಿಸಲಾಗಿದೆ. ಮೇಲ್ಭಾಗ ಕೊಕ್ಕೆ ಆಕಾರವನ್ನು ಹೊಂದಿದ್ದು, ಮಂದರಗಿರಿ ಗುರು ಮಂದಿರವು ಇಂಡಿಗೋ ನೀಲಿ, ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣಗಳ ರೋಮಾಂಚಕ ನವಿಲು ಗರಿಗಳ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ.
ಇದೇ ಮಾದರಿಯಲ್ಲಿ ಅಪರೂಪದ ಪುಷ್ಪಗಳನ್ನು ಬಳಸಿ ನಿರ್ಮಿಸಲಾಗಿದೆ. ತುಮಕೂರಿನ ಹೊರವಲಯದಲ್ಲಿರುವ ಮಂದಾರಗಿರಿಯ ಪಿಂಚಿ ಮಂದಿರ ಮತ್ತು ದಿವ್ಯಾಕಾಶ ಸಮವಸರಣದ ಬೃಹತ್ ಪ್ರತಿಕೃತಿಗಳು ಜನರಲ್ಲಿ ಭಕ್ತಿಭಾವವನ್ನು ಇಮ್ಮಡಿಗೊಳಿಸುತ್ತಿವೆ. ಈ ಮೂಲಕ ತುಮಕೂರು ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಜೈನ ಧರ್ಮದ ಕುರುಹುಗಳನ್ನು ಪರಿಚಯಿಸಿದೆ. ಅಲ್ಲದೆ FLOWER SHOW EXHIBITIONದಲ್ಲಿ ಮುಖ್ಯ ಆಕರ್ಷಣೆಯಾಗಿವೆ.
FLOWER SHOW EXHIBITIONದ ಮುಖ್ಯ ಆಕರ್ಷಣೆಯಾಗಿ ಮಂದರಗಿರಿಯ ಪಿಂಚಿಗುರು ಮಂದಿರ ಒಂದೆಡೆಯಾದ್ರೆ, ಮತ್ತೊಂದೆಡೆ ಮಂದರಗಿರಿಯ ಬೆಟ್ಟದಲ್ಲಿ ಇರುವ ಶ್ರೀ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಸರಣದ ಪ್ರತಿಕೃತಿಯನ್ನು ಪ್ರದರ್ಶಿಸಲಾಗಿದೆ. ಮಂದರಗಿರಿ ಗುರು ಮಂದಿರವು ಮೇ-2014ರಲ್ಲಿ ಸ್ಥಾಪಿಸಲಾಗಿದೆ.ಮಹಾವೀರ ತೀಥಂಕರರ ಸಮವಸರಣದ ಮಹತ್ವವನ್ನು ಕೂಡ ಇಲ್ಲಿ ಪರಿಚಯಿಸಲಾಗಿದೆ.
ಸಮವಸರಣದ ಮಹತ್ವ ಮತ್ತು ಜಿನಧರ್ಮ ಪರಂಪರೆಯನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಈ ಮೂಲಕ FLOWER SHOW EXHIBITIONದಲ್ಲಿ ತುಮಕೂರು ಜಿಲ್ಲೆಯಲ್ಲಿ ಜೈನ ಧರ್ಮದ ಶ್ರೀಮಂತ ಪರಂಪರೆ ಅನಾವರಣಗೊಂಡಿದೆ ಎಂದೇ ಹೇಳಬಹುದಾಗಿದೆ.
20ನೇ ಶತಮಾನದ ದಿಗಂಬರ ಜೈನ ಆಚಾರ್ಯ ಶ್ರೀ ಶಾಂತಿ ಸಾಗರ ಮಹಾರಾಜ್ ಅವರಿಗೆ ಇದನ್ನ ಸಮರ್ಪಿಸಲಾಗಿದೆ. ಜೈನ ಧರ್ಮದಲ್ಲಿ ನವಿಲು ಗರಿಗಳನ್ನು ಜೈನ ಸಂತರು ಅಹಿಂಸೆಯ ಸಂಕೇತವಾಗಿ ಬಳಸುತ್ತಾರೆ ಎಂಬುದನ್ನು ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕಾ ಇಲಾಖೆ ಪ್ರಚುರಪಡಿಸುತ್ತಿದೆ.
ಇದನ್ನು ಓದಿರಿ : HANUMANTHU : ಬಿಗ್ ಬಾಸ್ ವಿಜೇತ ಹನುಮಂತು ಸ್ವಾಗತಕ್ಕೆ ಸಜ್ಜಾದ ಗ್ರಾಮಸ್ಥರು