Chamarajanagar News:
ಇಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿದ MAHAKUMBH STAMPEDEದುರ್ಘಟನೆಯಿಂದ ಚಾಮರಾಜನಗರದ ಇಬ್ಬರು ಯಾತ್ರಿಗಳು ಸುರಕ್ಷಿತವಾಗಿ ಬದುಕಿ ಬಂದಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾಕುಂಭದಲ್ಲಿ ಇಂದು ಉಂಟಾದ MAHAKUMBH STAMPEDE ಪ್ರಕರಣದಲ್ಲಿ ಚಾಮರಾಜನಗರದ ಇಬ್ಬರು ಯಾತ್ರಿಗಳು ಸುರಕ್ಷಿತವಾಗಿದ್ದು, ಅವಗಢದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಈ ಕುರಿತು ಸುರೇಶ್ ನಾಯಕ ಮಾಹಿತಿ ಹಂಚಿಕೊಂಡಿದ್ದಾರೆ. “ಮೌನಿ ಅಮಾವಾಸ್ಯೆಯ ಪುಣ್ಯ ಸ್ನಾನವನ್ನು ಕೈಗೊಳ್ಳಲು 4-5 ಕೋಟಿ ಭಕ್ತರು ಬಂದಿದ್ದಾರೆ. ಸಾಧು-ಸಂತರ ಸ್ನಾನದ ತನಕ ಕೋಟ್ಯಂತರ ಮಂದಿಯನ್ನು ತಡೆದ ಪರಿಣಾಮ ಈ ಅವಘಡ ಉಂಟಾಗಿದೆ.
ಇನ್ನೂ 10-15 ಗೇಟ್ಗಳನ್ನು ಸ್ಥಾಪಿಸಿ ಪವಿತ್ರ ಸ್ನಾನಕ್ಕೆ 24 ಗಂಟೆ ಅವಕಾಶ ಮಾಡಿಕೊಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ತಾವಿಬ್ಬರೂ ಸುರಕ್ಷಿತವಾಗಿದ್ದೇವೆ. ತಾವು ಪವಿತ್ರ ಸ್ನಾನ ಕೈಗೊಂಡು ಹಿಂತಿರುಗಿದ ಬಳಿಕ ಕಾಲ್ತುಳಿತ ಉಂಟಾಗಿದೆ. ಒಮ್ಮೆಗೇ ಕೋಟ್ಯಂತರ ಮಂದಿ ನುಗ್ಗಿದ ಪರಿಣಾಮ ಹೀಗಾಗಿದೆ” ಎಂದಿದ್ದಾರೆ.
ಚಾಮರಾಜನಗರ ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ನಗರಸಭೆ ಮಾಜಿ ಸದಸ್ಯ ಹುಲ್ಲಿನ ಶಿವಣ್ಣ ಮಹಾಕುಂಭದಲ್ಲಿ ಭಾಗಿಯಾಗಿದ್ದು ಮೌನಿ ಅಮಾವಾಸ್ಯೆಯ ದಿನವಾದ ಇಂದು ಬೆಳಗ್ಗೆ 7.30 ರ ಸುಮಾರಿಗೆ ಪವಿತ್ರ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಮಹಾಸಾಗರದಂತಿದ್ದ ಜನರ ನಡುವೆ ಹಾಗೋ ಹೀಗೋ ಹೊರಬಂದ ಬಳಿಕ ಕಾಲ್ತುಳಿತ ಉಂಟಾಗಿದ್ದು ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಇದನ್ನು ಓದಿರಿ : DELHI ELECTIONS : ಭರಪೂರ ಉಚಿತ ಕೊಡುಗೆ, ಅಭಿವೃದ್ಧಿ ಮಂತ್ರ – ಮತದಾರರ ಓಲೈಕೆಗೆ ಪಕ್ಷಗಳ ಕಸರತ್ತು