New Delhi News:
DELHI ASSEMBLY POLLS ಹಿನ್ನೆಲೆ ಕಾಂಗ್ರೆಸ್ ತನ್ನ ಪೂರ್ಣ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿತು. ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಪ್ರತಿ ಮನೆಯ ಮಹಿಳೆಗೆ ತಿಂಗಳಿಗೆ 2,500 ರೂಪಾಯಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ರಾಜಸ್ಥಾನದಲ್ಲಿ ಪರಿಚಯಿಸಲಾದ ಯೋಜನೆಯಾದ 25 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ವಿಮೆಯನ್ನು ದೆಹಲಿ ನಿವಾಸಿಗಳಿಗೆ ನೀಡುವುದಾಗಿ ಘೋಷಿಸಿದೆ. DELHI ASSEMBLY POLLS ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲಿ ತಾನು ಜಾರಿ ಮಾಡಿರುವ ಗ್ಯಾರಂಟಿ ಮಾದರಿಗಳನ್ನು ಒಂದೊಂದಾಗಿ ಘೋಷಿಸುತ್ತಾ ಬಂದಿದ್ದ ಕಾಂಗ್ರೆಸ್ ಇಂದು (ಬುಧವಾರ) ಪಂಚ ಗ್ಯಾರಂಟಿ ಸಮೇತ ತನ್ನ ಪೂರ್ಣ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.
Free electricity, ration:
DELHI ASSEMBLY POLLS ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 8,500 ಸ್ಟೈಫಂಡ್, ಅರ್ಹ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಮತ್ತು 500 ರೂಪಾಯಿಗೆ ಒಂದು ಎಲ್ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್‌ನೊಂದಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮವನ್ನು ಪಕ್ಷವು ಅಧಿಕಾರಕ್ಕೆ ಬಂದರೆ ನೀಡಲಿದೆ ಎಂದಿದೆ. ಇದಲ್ಲದೇ, 15 ಸಾವಿರ ನಾಗರಿಕ ರಕ್ಷಣಾ ಸ್ವಯಂಸೇವಕರನ್ನು ಪುನಃಸ್ಥಾಪಿಸುವುದು, ಮಹಿಳೆಯರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 33 ರಷ್ಟು ಮೀಸಲು, ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ 5 ಸಾವಿರ ರೂಪಾಯಿ ಪಿಂಚಣಿ ನೀಡುವ ಆಶ್ವಾಸನೆಯನ್ನು ಪ್ರಣಾಳಿಕೆ ಒಳಗೊಂಡಿದೆ.ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್ ಅವರ ಆಡಳಿತದಲ್ಲಿ ಜಾರಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮರುಸ್ಥಾಪಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ನಮ್ಮ ಯೋಜನೆಗಳು ಹಣದುಬ್ಬರ ಮತ್ತು ನಿರುದ್ಯೋಗ ಪರಿಹರಿಸುವ ಗುರಿ ಹೊಂದಿವೆ. ರಾಜಧಾನಿಯ ಹಿಂದುಳಿದ ವರ್ಗದ ಜನರಿಗೆ ನೇರ ಆರ್ಥಿಕ ಪರಿಹಾರವನ್ನು ಒದಗಿಸುತ್ತವೆ ಎಂದು ಪಕ್ಷ ಹೇಳಿದೆ.
Protection of People’s Rights:
DELHI ASSEMBLY POLLS ದೆಹಲಿ ಮಾಲಿನ್ಯದ ಬಗ್ಗೆ ಪ್ರಸ್ತಾಪಿಸಿದ ಅವರು, ಇಲ್ಲಿನ ನಿವಾಸಿಗಳ ಜೀವನದ ಗುಣಮಟ್ಟದ ಮೇಲೆ ಗಮನ ಹರಿಸಬೇಕು. ಇಲ್ಲಿ ವ್ಯವಹಾರ ಮಾಡುವುದು ಸುಲಭ. ಆದರೆ, ಉಸಿರಾಟ ಕಷ್ಟವಾಗಿದೆ. ಮಾಲಿನ್ಯವನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ವಿಫಲವಾದ ಆಪ್ ಸರ್ಕಾರವನ್ನು ಅವರು ಟೀಕಿಸಿದರು. ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯವನ್ನು ಕೇಂದ್ರದ ಬಿಜೆಪಿ ಮತ್ತು ಆಪ್ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು. ಇದನ್ನು ಮೊದಲು ಸುಧಾರಿಸಬೇಕಿದೆ ಎಂದರು. ಪ್ರಣಾಳಿಕೆ ಬಿಡುಗಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಸಾರ್ವಜನಿಕರ ಹಕ್ಕುಗಳು ಮತ್ತು ಮಾಲಿನ್ಯದ ಮೇಲೆ ಪಕ್ಷವು ಹೆಚ್ಚಿನ ಗಮನ ನೀಡುತ್ತದೆ. ಗ್ಯಾರಂಟಿ ಎಂದರೆ ಅದು ಸಾರ್ವಜನಿಕರ ಹಕ್ಕು. DELHI ASSEMBLY POLLS ಕಾಂಗ್ರೆಸ್ ಪಂಚ ಗ್ಯಾರಂಟಿ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ, ಭರವಸೆಗಳನ್ನು ಜಾರಿ ಮಾಡುವ ಬದ್ಧತೆ ತೋರಿಸಲಾಗುವುದು ಎಂದರು.
ಇದನ್ನು ಓದಿರಿ : CENTRAL BUDGET SESSION : ನಾಳೆಯಿಂದ ಕೇಂದ್ರ ಬಜೆಟ್ ಅಧಿವೇಶನ