Belgaum News:
ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನಕ್ಕೂ ಮುನ್ನ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ ಮೃತಪಟ್ಟ MOTHER AND DAUGHTER DEAD BODY ಕಳೆದ ರಾತ್ರಿ ಬೆಳಗಾವಿಗೆ ಬಂದಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮಧ್ಯರಾತ್ರಿ ಆಗಮಿಸಿದ ತಾಯಿ-ಮಗಳ ಪಾರ್ಥಿವ ಶರೀರಗಳಿಗೆ ಜಿಲ್ಲಾಧಿಕಾರಿ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶೇಷ ಜಿಲ್ಲಾಧಿಕಾರಿ ಹರ್ಷಾ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಉಪಸ್ಥಿತರಿದ್ದು, ಗೌರವ ಸಲ್ಲಿಸಿದರು. ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿ ವಡಗಾವಿಯ ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಅವರ ಮೃತದೇಹಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಳೆದ ರಾತ್ರಿ ಬರಮಾಡಿಕೊಂಡರು.
ದೆಹಲಿಯಿಂದ ಗೋವಾಗೆ ವಿಮಾನದಲ್ಲಿMOTHER AND DAUGHTER DEAD BODY ಪಾರ್ಥಿವ ಶರೀರಗಳನ್ನು ತರಲಾಯಿತು. ಬಳಿಕ ಗೋವಾದಿಂದ ಬೆಳಗಾವಿಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಯಿತು. ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಜಿಲ್ಲಾಡಳಿತ ಶವಗಳನ್ನು ಹಸ್ತಾಂತರಿಸಿತು.
ಇದನ್ನು ಓದಿರಿ : ISRO 100TH MISSION:ಬೆಳ್ಳಂಬೆಳಗ್ಗೆ ನಭಕ್ಕೆ ಜಿಗಿಯಲು ಸಿದ್ಧವಾಗಿದೆ ರಾಕೆಟ್.