New Delhi News:
ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು PARLIAMENTನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತದ ಆರ್ಥಿಕತೆ, ಸಬಲೀಕರಣ ಮತ್ತು ಡಿಜಿಟಲ್ ಭದ್ರತೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.ಸರ್ಕಾರ ರೈತರಿಗೆ ಬೆಂಬಲ ನೀಡಲು ಬದ್ದವಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ₹41,000 ಕೋಟಿಯನ್ನು ಲಕ್ಷಾಂತರ ರೈತರಿಗೆ ವಿತರಿಸಲಾಗಿದೆ.
ಈ ಉಪಕ್ರಮ ರೈತರಿಗೆ ಆರ್ಥಿಕವಾಗಿ ನೆರವಾಗುವ ಜೊತೆಗೆ ಕೃಷಿಯಲ್ಲಿ ಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಭರವಸೆ ನೀಡಲಿದೆ ಎಂದು ತಿಳಿಸಿದರು.ತಮ್ಮದೇ ಮನೆ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿರುವ ಮಧ್ಯಮ ವರ್ಗದವರಿಗೆ ಮನೆ ಮಾಲೀಕತ್ವವನ್ನು ಹೌಸಿಂಗ್ ಸ್ಕೀಮ್ಗಳ ಮೂಲಕ ನೀಡಲು ಸರ್ಕಾರ ಬದ್ಧ.
ವಿವಿಧ ಉಪಕ್ರಮಗಳ ಮೂಲಕ ತೀರಾ ಬಡತನದಿಂದ 25 ಕೋಟಿ ಜನರನ್ನು ಯಶಸ್ವಿಯಾಗಿ ಮೇಲೆತ್ತಲಾಗಿದೆ. ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಮೇಲೆತ್ತುವಿಕೆಯ ಮೇಲೆ ಆಡಳಿತದ ಗಮನ ಕೇಂದ್ರೀಕೃತವಾಗಿದೆ ಎಂದರು.ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮ ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು.
ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಸರ್ಕಾರ, ವೇಗವಾಗಿ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸುತ್ತಿದೆ ಎಂದರು.ಯುವ ಸಬಲೀಕರಣ ಮತ್ತು ಉದ್ಯೋಗದ ಕುರಿತು ಮಾತನಾಡಿ, ಸರ್ಕಾರವು ಶಿಕ್ಷಣದ ಅವಕಾಶವನ್ನು ವಿಸ್ತರಿಸುವ ಮತ್ತು ಉದ್ಯೋಗ ಸೃಷ್ಟಿಯ ಪ್ರಯತ್ನವನ್ನು ಮುಂದುವರೆಸಿದೆ ಎಂದು ಹೇಳಿದರು.
ಭಾಷಣದ ವೇಳೆ ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಘಟನೆಗೆ ರಾಷ್ಟ್ರಪತಿ ಸಂತಾಪ ವ್ಯಕ್ತಪಡಿಸಿದರು. ಇದೇ ವೇಳೆ ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದರು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಗಲಿಕೆಗೂ ದುಃಖ ವ್ಯಕ್ತಪಡಿಸಿದರು.
(ಐಎಎನ್ಎಸ್)ತಮ್ಮದೇ ಮನೆ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿರುವ ಮಧ್ಯಮ ವರ್ಗದವರಿಗೆ ಮನೆ ಮಾಲೀಕತ್ವವನ್ನು ಹೌಸಿಂಗ್ ಸ್ಕೀಮ್ಗಳ ಮೂಲಕ ನೀಡಲು ಸರ್ಕಾರ ಬದ್ಧ. ವಿವಿಧ ಉಪಕ್ರಮಗಳ ಮೂಲಕ ತೀರಾ ಬಡತನದಿಂದ 25 ಕೋಟಿ ಜನರನ್ನು ಯಶಸ್ವಿಯಾಗಿ ಮೇಲೆತ್ತಲಾಗಿದೆ.
ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಮೇಲೆತ್ತುವಿಕೆಯ ಮೇಲೆ ಆಡಳಿತದ ಗಮನ ಕೇಂದ್ರೀಕೃತವಾಗಿದೆ ಎಂದರು.ಡಿಜಿಟಲ್ ಡೊಮೈನ್ನಲ್ಲಿ ಭಾರತ ಪ್ರಗತಿ PARLIAMENTಸಾಧಿಸುತ್ತಿದೆ. ಹೊಸ ಹೊಸ ಅವಿಷ್ಕಾರದಲ್ಲಿ ಜಾಗತಿಕ ನಾಯಕನಾಗುವ ಆಕಾಂಕ್ಷೆ ಹೊಂದಿದೆ. ಸೈಬರ್ ಸೆಕ್ಯೂರಿಟಿಯತ್ತ ಸರ್ಕಾರ ನಿರಂತರವಾಗಿ ಸಾಮರ್ಥ್ಯದಾಯಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಡಿಜಿಟಲ್ ವಂಚನೆಗಳು ಮತ್ತು ಡೀಪ್ ಫೇಕ್‌ಗಳು ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಮುಖ ಸವಾಲಾಗಿವೆ ಎಂದರು.ಮಹಿಳೆಯರ ಆರ್ಥಿಕ ಮತ್ತು ತಾಂತ್ರಿಕ ಸಬಲೀಕರಣದ ನಿಟ್ಟಿನಲ್ಲಿ ಡ್ರೋಣ್ ದೀದಿ ಯೋಜನೆಯನ್ನು ಉಲ್ಲೇಖಿಸಿ, ಈ ಯೋಜನೆಯ ಮೂಲಕ ಮಹಿಳೆಯರಿಗೆ ಡ್ರೋಣ್ ತಂತ್ರಜ್ಞಾನವನ್ನು ನೀಡುವ ಜೊತೆಗೆ ಕೃಷಿ ಮತ್ತು ಲಾಜಿಸ್ಟಿಕ್ ವಲಯದಲ್ಲಿ ಹೊಸ ಉದ್ಯೋಗಾವಕಾಶ ಸಿಗುತ್ತಿದೆ ಎಂದು ವಿವರಿಸಿದರು.
ಇದನ್ನು ಓದಿರಿ :KANGANA RANAUT :ಮೊನಾಲಿಸಾ ಸೌಂದರ್ಯಕ್ಕೆ ಮನಸೋತ ಕಂಗನಾ ಹೇಳಿದ್ದಿಷ್ಟು