Bangalore News:
ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಆರೋಪದಡಿ ಏಳು ಮಂದಿ ಸರ್ಕಾರಿ ನೌಕರರ ನಿವಾಸ ಸೇರಿದಂತೆ ಏಕಕಾಲದಲ್ಲಿ 27 ಕಡೆಗಳಲ್ಲಿ ದಾಳಿ ನಡೆಸಿದ LOKAYUKTA OFFICIALS RAID, ಪರಿಶೀಲನೆ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚರ- ಸ್ಥಿರಾಸ್ತಿ, ಚಿನ್ನಾಭರಣ ಹಾಗೂ ನಗದನ್ನ ಪತ್ತೆ ಹಚ್ಚಿದ್ದಾರೆ.
ಬಿಬಿಎಂಪಿ ಹೆಬ್ಬಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ್ ರಾವ್ ನಿವಾಸ ಸೇರಿದಂತೆ ಐದು ಕಡೆಗಳಲ್ಲಿ LOKAYUKTA OFFICIALS RAID ನಡೆಸಿ ಒಟ್ಟು 7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು, 55 ಲಕ್ಷ ಬೆಳೆಬಾಳುವ ಚಿನ್ನಾಭರಣ, ಸೇರಿದಂತೆ ಒಟ್ಟು 8.57 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಪತ್ತೆ ಹಚ್ಚಲಾಗಿದೆ.
ನಿವೇಶನ, ಜಮೀನು, ಚಿನ್ನಾಭರಣ, ನಗದು, ಬೆಲೆಬಾಳುವ ವಾಹನಗಳನ್ನ ಪತ್ತೆ ಹಚ್ಚಲಾಗಿದ್ದು, ಇದರ ಮೌಲ್ಯ 18.45 ಕೋಟಿ ರೂಪಾಯಿಯಷ್ಟಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.LOKAYUKTA OFFICIALS RAID ಏಳು ಮಂದಿ ಭ್ರಷ್ಟ ನೌಕರರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಾಯಚೂರಿನ ಜಿಲ್ಲಾ ಪಂಚಾಯತ್ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿರುವ ನರಸಿಂಗ ರಾವ್ ಗುಜ್ಜಾರ್ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ 5 ನಿವೇಶನಗಳ ದಾಖಲಾತಿ, 2 ವಾಸದ ಮನೆಗಳು, 40.40 ಲಕ್ಷ ಮೌಲ್ಯದ ಚಿನ್ನಾಭರಣ, ಬೆಲೆಬಾಳುವ ವಾಹನ ಸೇರಿದಂತೆ ಒಟ್ಟು 1.20 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
LOKAYUKTA OFFICIALS RAID ಬೆಳಗಾವಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಎಫ್ಡಿಎ ಸಚಿನ್ ಬಸವಂತ್ ಮಂಡೆಡ್ ಮನೆ ಸೇರಿದಂತೆ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 58 ಲಕ್ಷ ಮೌಲ್ಯದ ನಿವೇಶನ ಹಾಗೂ ವಾಸದ ಮನೆ, 1.12 ಎಕರೆ ಕೃಷಿ ಜಮೀನು, 1.92 ಲಕ್ಷ ಕೋಟಿ ಮೌಲ್ಯದ ಚಿನ್ನಾಭರಣ, ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಹಾಗೂ ಮ್ಯೂಚುವಲ್ ಫಂಡ್ ಹಾಗೂ ಈಕ್ವಿಟಿ ಶೇರ್ನಲ್ಲಿದ್ದ ಹಣ ಸೇರಿ ಒಟ್ಟಾರೆ 2.50 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಚಿತ್ರದುರ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾನೇಜರ್ ಕೆ. ಸಿ ಶಶಿಧರ್ಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಶೋಧದ ವೇಳೆ 1.21 ಕೋಟಿ ಮೌಲ್ಯದ ಒಂದು ನಿವೇಶನ, ಒಂದು ವಾಸದ ಮನೆ, 9.14 ಎಕರೆ ಕೃಷಿ ಜಮೀನು ಹಾಗೂ 21.66 ಲಕ್ಷ ಮೌಲ್ಯದ ಆಭರಣ ಹಾಗೂ 34.81 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು 1.78 ಕೋಟಿ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದೆ ಎಂದು LOKAYUKTA OFFICIALS RAID ತಿಳಿಸಿದ್ದಾರೆ. ಬಾಗಲಕೋಟೆಯ ಬಾದಾಮಿ ತಾಲೂಕಿನ ಹುಲಗೇರಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿ ಕೆಲಸ ಮಾಡುತ್ತಿರುವ ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ ಮನೆ ಸೇರಿದಂತೆ 3 ಕಡೆಗಳಲ್ಲಿ ದಾಳಿ ನಡೆಸಿ ಶೋಧಿಸಿದಾಗ 1 ನಿವೇಶನ, ಒಂದು ವಾಸದ ಮನೆ, 1.97 ಲಕ್ಷ ನಗದು, 14.28 ಲಕ್ಷ ಚಿನ್ನಾಭರಣ ಹಾಗೂ 8.50 ಲಕ್ಷ ಬೆಲೆಬಾಳುವ ವಾಹನಗಳು ಸೇರಿದಂತೆ ಒಟ್ಟು 1.43 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಇರುವುದು ಅಧಿಕಾರಿಗಳು ಕಂಡುಕೊಂಡಿರುವ ಬಗ್ಗೆ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಬೆಳಗಾವಿಯ ರಾಯಬಾಗ್ ಪಶು ಆಸ್ಪತ್ರೆಯ ಪಶು ನಿರೀಕ್ಷಕ ಸಂಜಯ್ ಅಣ್ಣಪ್ಪ ದುರ್ಗಣ್ಣನವರ್ ಮನೆ ಸೇರಿ 3 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 4 ನಿವೇಶನಗಳು, 1 ವಾಸದ ಮನೆ, 1 ಎಕರೆ ಕೃಷಿ ಜಮೀನು, 4.50 ಲಕ್ಷ ವಾಹನ, 9,92,324 ಲಕ್ಷ ಮೌಲ್ಯದ ಚಿನ್ನಾಭರಣ, 8.86 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 74 ಲಕ್ಷದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.
ಇದನ್ನು ಓದಿರಿ : SITHARAMAN MADHUBANI ART SAREE : 8 ಬಜೆಟ್ಗಳಲ್ಲಿ 8 ಸಾಂಪ್ರದಾಯಿಕ ಸೀರೆಗಳ ಸಿಂಗಾರ