Jerusalem News:
GAZA CEASEFIRE ಶನಿವಾರದಂದು ಹಮಾಸ್ ಮತ್ತೆ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಬೀಬಾಸ್ ಅವರ ಅವರ ಪತ್ನಿ ಶಿರಿ ಮತ್ತು ಇಬ್ಬರು ಪುತ್ರರಾದ ಐದು ವರ್ಷದ ಏರಿಯಲ್ ಮತ್ತು ಎರಡು ವರ್ಷದ ಕಾಫಿರ್ ಅವರನ್ನು ಕೂಡ ಅಕ್ಟೋಬರ್ 7, 2023 ರ ದಾಳಿಯಲ್ಲಿ ಹಮಾಸ್ ಒತ್ತೆಯಾಳಾಗಿ ಗಾಜಾಗೆ ಅಪಹರಿಸಿಕೊಂಡು ಹೋಗಿತ್ತು. GAZA CEASEFIRE ಆದರೆ ಇವರು ಇನ್ನೂ ಬದುಕಿದ್ದಾರಾ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದಿಲ್ಲ.
ಹಮಾಸ್ ಶನಿವಾರ ಬಿಡುಗಡೆ ಮಾಡಲಿರುವ ಮೂವರು ಇಸ್ರೇಲಿ ನಾಗರಿಕ ಒತ್ತೆಯಾಳುಗಳ ಪಟ್ಟಿಯು ಇಸ್ರೇಲ್ಗೆ ತಲುಪಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಶುಕ್ರವಾರ ತಿಳಿಸಿದೆ. ಈ ಪಟ್ಟಿಯಲ್ಲಿ ಇಸ್ರೇಲಿ-ಫ್ರೆಂಚ್ ಪ್ರಜೆ ಒಫರ್ ಕಾಲ್ಡೆರಾನ್ (54), ಇಸ್ರೇಲಿ-ಅಮೆರಿಕನ್ ಪ್ರಜೆ ಕೀತ್ ಸೀಗಲ್ (65) ಮತ್ತು ಇಸ್ರೇಲಿ ನಾಗರಿಕ ಯಾರ್ಡೆನ್ ಬಿಬಾಸ್ (35) ಸೇರಿದ್ದಾರೆ.
ಆರು ವಾರಗಳ GAZA CEASEFIRE ಒಪ್ಪಂದದ ಮೊದಲ ಹಂತ ಪ್ರಾರಂಭವಾದಾಗಿನಿಂದ, ಐವರು ಇಸ್ರೇಲಿ ನಾಗರಿಕರು, ಐವರು ಮಹಿಳಾ ಇಸ್ರೇಲಿ ಸೈನಿಕರು ಮತ್ತು ಐವರು ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಗಾಜಾದಲ್ಲಿರುವ ಒಟ್ಟು 33 ಇಸ್ರೇಲಿ ಒತ್ತೆಯಾಳುಗಳು ಮತ್ತು ಇಸ್ರೇಲಿ ಜೈಲುಗಳಿಂದ ಸುಮಾರು 2,000 ಪ್ಯಾಲೆಸ್ಟೈನಿಯರನ್ನು ಬಿಡುಗಡೆ ಮಾಡುವ ಪ್ರಸ್ತಾಪವಿದೆ.
ಜನವರಿ 19 ರಿಂದ ಜಾರಿಗೆ ಬಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳುಗಳ ಬಿಡುಗಡೆಯ GAZA CEASEFIRE ಒಪ್ಪಂದದ ಪ್ರಕಾರ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಜನವರಿ 21 ರಿಂದ ಐಡಿಎಫ್, ಐಎಸ್ಎ ಮತ್ತು ಇಸ್ರೇಲ್ ಬಾರ್ಡರ್ ಪೊಲೀಸರು ಆಕ್ರಮಿತ ಪ್ರದೇಶದಲ್ಲಿನ ಭಯೋತ್ಪಾದಕರ ಗುಂಪುಗಳನ್ನು ನಿರ್ಮೂಲನೆ ಮಾಡಲು ವೆಸ್ಟ್ ಬ್ಯಾಂಕ್ನ ಜೆನಿನ್ ಮತ್ತು ತುಲ್ಕರ್ಮ್ನಲ್ಲಿ ‘ಐರನ್ ವಾಲ್’ ಹೆಸರಿನ ಮಿಲಿಟರಿ ಅಭಿಯಾನವನ್ನು ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಡಜನ್ಗಟ್ಟಲೆ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಕೊಲ್ಲಲ್ಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ಅಲ್ಲದೆ ಹಲವಾರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಐಡಿಎಫ್ ಸೈನಿಕರು ಇಬ್ಬರು ಉಗ್ರರನ್ನು ಕೊಲ್ಲುವ ಮೊದಲು ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ಹೋರಾಟದಲ್ಲಿ ಓರ್ವ ಇಸ್ರೇಲಿ ಸೈನಿಕ ಸಾವನ್ನಪ್ಪಿದ್ದು, ಇತರ ಐದು ಜನ ಗಾಯಗೊಂಡಿದ್ದಾರೆ.
ಏತನ್ಮಧ್ಯೆ, ವೆಸ್ಟ್ ಬ್ಯಾಂಕ್ನ ಉತ್ತರ ದಿಕ್ಕಿನಲ್ಲಿರುವ ಜೆನಿನ್ನಲ್ಲಿ ಇಬ್ಬರು ಪ್ಯಾಲೆಸ್ಟೈನ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಮತ್ತು ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್ಎ) ಶುಕ್ರವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಗುರುವಾರ ಐಎಸ್ಎ ಜೊತೆಗೆ ಜಂಟಿ ಕಾರ್ಯಾಚರಣೆ ನಡೆಸಿದ ಐಡಿಎಫ್ ಮತ್ತು ಹೆಚ್ಚುವರಿ ಪಡೆಗಳು ಕಟ್ಟಡವನ್ನು ಸುತ್ತುವರಿದು ಒಳಗಿದ್ದ ಇಬ್ಬರು ಉಗ್ರರನ್ನು ಕೊಂದು ಹಾಕಿವೆ.
ಇದನ್ನು ಓದಿರಿ: INDIA ISRAEL MAITRI PROJECT : ಭಾರತದ ಪ್ರಭಾವಿಗಳ ಭೇಟಿಯೊಂದಿಗೆ ಆರಂಭ