spot_img
spot_img

CONCUSSION SUBSTITUTE:’ಕನ್ಕ್ಯುಶನ್ ಸಬ್’ ಆಗಿ ಬೌಲ್ ಮಾಡಿದ ಹರ್ಷಿತ್ ರಾಣಾ:

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Ind Was Eng T20y News:

ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಆದರೆ ಪಂದ್ಯದ ನಡುವೆ ಹರ್ಷಿತ್​ ರಾಣಾ ತಂಡ ಸೇರಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಭಾರತ ಭರ್ಜರಿ ಪ್ರದರ್ಶನ ನೀಡಿತು. ಆರಂಭದಲ್ಲಿ 79ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಹಾರ್ದಿಕ್​ ಪಾಂಡ್ಯ ಮತ್ತು ಶಿವಂ ದುಬೆ ಆಸರೆಯಾದರು. ಈ ಇಬ್ಬರು 87 ರನ್​ಗಳ ಜೊತೆಯಾಟ ಆಡಿದರು.

ಹಾರ್ದಿಕ್​ (53) ಮತ್ತು ದುಬೆ (53) ಇಬ್ಬರು ಅರ್ಧಶತಕ ಪೂರ್ಣಗೊಳಿಸಿದರು. ಇದರಿಂದಾಗಿ ಭಾರತ 9 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 181 ರನ್​ ಕಲೆಹಾಕಿತು.ಆದರೆ, ಹರ್ಷಿತ್​ ರಾಣಾ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಪಂದ್ಯದ ನಡುವೆ ತಂಡ ಸೇರಿಕೊಂಡು ಬೌಲಿಂಗ್ ಮಾಡಿ ಮೂರು ವಿಕೆಟ್​ ಕಬಳಿಸಿದರು. ಇದರ ಬೆನ್ನಲ್ಲೆ ಭಾರತದ ವಿರುದ್ಧ ಅಪಸ್ವರ ಕೇಳಿ ಬಂದಿದ್ದವು. ತಂಡದಲ್ಲಿ ಇರದ ಪ್ಲೇಯರ್​ಗೆ ಕರೆತಂದು ಬೌಲಿಂಗ್​​ ಮಾಡಿಸಿ ಮೋಸದಾಟ ಆಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.

ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಸರಣಿ ಭಾಗವಾಗಿ ಶುಕ್ರವಾರ ನಡೆದ 4ನೇ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೆ 3-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಈ ಗುರಿಯನ್ನು ಬೆನ್ನಟ್ಟಿದ ಆಂಗ್ಲ ಪಡೆಯನ್ನು 166 ರನ್​ಗಳಿಗೆ ಕಟ್ಟಿ ಹಾಕಿಕುವಲ್ಲಿ ಭಾರತೀಯ ಬೌಲರ್​ಗಳು ಯಶಸ್ವಿಯಾದರು. ಬಿಷ್ಣೋಯಿ ಮತ್ತು ಹರ್ಷಿತ್​ ರಾಣಾ ತಲಾ 3 ವಿಕೆಟ್​ ಪಡೆದು ಮಿಂಚಿದರು.ಆದರೆ, ಆದರೆ ಐಸಿಸಿ ನಿಯಮಗಳ ಪ್ರಕಾರ CONCUSSION ಸಬ್​ಸ್ಟಿಟ್ಯೂಟ್​ ಆಟಗಾರನಾಗಿ ತಂಡಕ್ಕೆ ಕರೆತರಲಾಗಿತ್ತು. ಕಾರಣ ಮೊದಲ ಇನ್ನಿಂಗ್ಸ್​ನ ಕೊನೆಯ ಓವರ್‌ನಲ್ಲಿ ಚೆಂಡು ದುಬೆ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿದಿತ್ತು. ಈ ಹಿನ್ನೆಲೆ ಮ್ಯಾನೆಜ್ಮೆಂಟ್​ ಕನ್ಕ್ಯುಶನ್ ಸಬ್​ಸ್ಟಿಟ್ಯೂಟ್ ಮೂಲಕ ಹರ್ಷಿತ್​ ರಾಣಾಗೆ ತಂಡಕ್ಕೆ ಕರೆತರಲಾಯಿತು.

What is Concussion Sub?:ಐಸಿಸಿ ನಿಯಮಗಳ ಪ್ರಕಾರ ಶಿವಂ ದುಬೆ ಬದಲಿಗೆ ಬೌಲರ್​ ಅವರನ್ನು CONCUSSION ಬದಲಿ ಆಟಗಾರನಾಗಿ ಹೇಗೆ ಕರೆತರಲಾಯಿತು ಎಂದು ಬಟ್ಲರ್​ ಪ್ರಶ್ನಿಸಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ. ನಾವು ಇದನ್ನು ಒಪ್ಪಲ್ಲ.

ಕನಿಷ್ಠ ಈ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮೊಂದಿಗೆ ಸಮಾಲೋಚನೆಯೂ ನಡೆಸಲಿಲ್ಲ. ಆದರೆ, ದುಬೆ ಮತ್ತು ರಾಣಾ ಅವರ ವಿಷಯದಲ್ಲಿ ಇದು ಸ್ಪಷ್ಟವಾಗಿಲ್ಲ. ಏಕೆಂದರೆ CONCUSSION​ ಸಬ್​ ಆಗಿದ್ದರೆ, ಆಲ್​ರೌಂಡರ್​ ಸ್ಥಾನಕ್ಕೆ ಆಲ್​ರೌಂಡರ್​ ಅನ್ನೆ ಕರೆತರಬೇಕು. ಬೌಲರ್​ ಆಗಿದ್ದರೇ ಬೌಲರ್ ಅನ್ನೆ ತಂಡಕ್ಕೆ​ ಕರೆತರಬೇಕು.

ಈ ಹಿನ್ನೆಲೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಸಮಾಧಾನ ಹೊರಹಾಕಿದ್ದಾರೆ.ನಾನು ಬ್ಯಾಟಿಂಗ್‌ಗೆ ಬಂದಾಗ ಹರ್ಷಿತ್ ಏಕೆ ಫೀಲ್ಡಿಂಗ್ ಮಾಡುತ್ತಿದ್ದೀರಿ ಎಂದು ಕೇಳಿದೆ. ಅವರು CONCUSSION ಸಬ್ ಎಂದು ಉತ್ತರಿಸಿದರು. ಮ್ಯಾಚ್ ರೆಫರಿ ಜಾವಗಲ್​ ಶ್ರೀನಾಥ್‌ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ, ಕನ್ಕ್ಯುಶನ್ ಸಬ್​ ಎಂದರೆ ಬ್ಯಾಟರ್​ ತಲೆಗೆ ಅಥವಾ ಹೆಲ್ಮೇಟ್​ಗೆ ಚೆಂಡು ಬಲವಾಗಿ ಬಡಿದರೆ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಇನ್ನೊಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

 

ಇದನ್ನು ಓದಿರಿ :KARNATAKA WON MOST MEDALS:ರಾಷ್ಟ್ರೀಯ ಕ್ರೀಡಾಕೂಟ;

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...