New Delhi News:
UNION BUDGET 2025 ರಲ್ಲಿ ಮಹತ್ವದ ಜನಗಣತಿ ನಡೆಯುವ ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರವೂ ಇದರ ಸೂಚನೆ ನೀಡಿತ್ತು. ಆದರೆ, ಬಜೆಟ್ನಲ್ಲಿ ಇಟ್ಟಿರುವ ಅನುದಾನ ಗಮನಿಸಿದರೆ, ಈ ವರ್ಷವೂ ಅಭಿಯಾನ ನಡೆಯುವ ಸಾಧ್ಯತೆ ಕಡಿಮೆ ಇದೆ.
UNION BUDGET 2025 ಜನಗಣತಿ ಮತ್ತು ಎನ್ಪಿಆರ್ ನಡೆಸಲು 2020 ರ ಏಪ್ರಿಲ್ 1 ರಿಂದ ಸೆಪ್ಟೆಂಬರ್ 30 ರವರೆಗೆ ದೇಶಾದ್ಯಂತ ನಡೆಸಲು ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಡಿಸೆಂಬರ್ 24, 2019 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯೂ ಸಿಕ್ಕಿತ್ತು. 2021 ರ ಜನಗಣತಿಗಾಗಿ 8,754.23 ಕೋಟಿ ರೂಪಾಯಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ 3,941.35 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಎಲ್ಲವನ್ನೂ ರದ್ದು ಮಾಡಲಾಗಿತ್ತು.
2011 ರ ಬಳಿಕ ನೆನೆಗುದಿಗೆ ಬಿದ್ದಿರುವ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು (ಎನ್ಪಿಆರ್) ಈ ವರ್ಷವೂ ನಡೆಯುವ ಅನುಮಾನವಿದೆ. ಇದಕ್ಕೆ ಕಾರಣ ಇಂದು ಮಂಡನೆಯಾದ ಬಜೆಟ್ನಲ್ಲಿ ಈ ಅಭಿಯಾನಕ್ಕಾಗಿ ಕೇವಲ 574.80 ಕೋಟಿ ರೂಪಾಯಿ ಮಾತ್ರ ಹಂಚಿಕೆ ಮಾಡಲಾಗಿದೆ.
How much does the census cost?
ಅಧಿಕಾರಿಗಳ ಮಾಹಿತಿಯ ಪ್ರಕಾರ, ಸಂಪೂರ್ಣ ಜನಗಣತಿ ಮತ್ತು ಎನ್ಪಿಆರ್ ಅಭಿಯಾನಕ್ಕಾಗಿ 12 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ UNION BUDGET 2025 ಇದಕ್ಕಾಗಿ ಕೇವಲ 574.80 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದಾರೆ. 2024-25ರಲ್ಲೂ 572 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
Digital Census:
UNION BUDGET 2025 ಸ್ವಯಂ ಗಣತಿಯಲ್ಲಿ ಆಧಾರ್ ಅಥವಾ ಮೊಬೈಲ್ ಸಂಖ್ಯೆ ಕಡ್ಡಾಯವಾಗಿರುತ್ತದೆ. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ಸುಮಾರು 35ಕ್ಕೂ ಅಧಿಕ ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಅದರಲ್ಲಿ ಕುಟುಂಬದ ದೂರವಾಣಿ, ಇಂಟರ್ನೆಟ್ ಸಂಪರ್ಕ, ಮೊಬೈಲ್ ಅಥವಾ ಸ್ಮಾರ್ಟ್ಫೋನ್, ಬೈಸಿಕಲ್, ಸ್ಕೂಟರ್ ಅಥವಾ ಮೋಟಾರ್ಸೈಕಲ್ ಅಥವಾ ಮೊಪೆಡ್ ಅನ್ನು ಹೊಂದಿದೆಯೇ ಮತ್ತು ಕಾರು, ಜೀಪ್ ಅಥವಾ ವ್ಯಾನ್ ಅನ್ನು ಹೊಂದಿದ್ದಾರೆಯೇ ಎಂಬುದೂ ಇದೆ.
ನಾಗರಿಕರು ಮನೆಯಲ್ಲಿ ಬಳಸುವ ಧಾನ್ಯಗಳು, ಕುಡಿಯುವ ನೀರಿನ ಮೂಲ, ಬೆಳಕಿನ ಮೂಲ, ಶೌಚಾಲಯ, ಸ್ನಾನದ ಮನೆಯ ಸೌಲಭ್ಯ, ಅಡುಗೆಮನೆ ಮತ್ತು LPG/PNG ಸಂಪರ್ಕದ ಲಭ್ಯತೆ, ಅಡುಗೆಗೆ ಬಳಸುವ ಇಂಧನ ಮತ್ತು ರೇಡಿಯೋ, ಟ್ರಾನ್ಸಿಸ್ಟರ್ ಮತ್ತು ದೂರದರ್ಶನದ ಪ್ರಶ್ನೆಗಳೂ ಇರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ UNION BUDGET 2025 ನಡೆಯುವ ಜನಗಣತಿ ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ನಾಗರಿಕರೇ ಸ್ವಯಂ ತಮ್ಮ ಮಾಹಿತಿಯನ್ನು ತುಂಬಬೇಕಿದೆ. ಸರ್ಕಾರಿ ಎಣಿಕೆದಾರರ ಮೂಲಕ ಜನಗಣತಿ ಫಾರ್ಮ್ ಅನ್ನು ಭರ್ತಿ ಮಾಡುವ ಮೊದಲು ಜನರು ಎನ್ಪಿಆರ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಇದಕ್ಕಾಗಿ ಜನಗಣತಿ ಪ್ರಾಧಿಕಾರವು ಸ್ವಯಂ ಗಣತಿ ಪೋರ್ಟಲ್ ಅನ್ನು ವಿನ್ಯಾಸಗೊಳಿಸಿದೆ.
ಇದನ್ನು ಓದಿರಿ : CM SIDDARAMAIAH : ಸಂವಿಧಾನ ಬದಲಾಯಿಸಿ ಮನುಸ್ಮೃತಿ ತರುವ ಹುನ್ನಾರ