spot_img
spot_img

WOMENS UNDER 19 WORLD CUP:ತ್ರಿಷಾ ಆಲ್ರೌಂಡರ್ ಆಟಕ್ಕೆ ದಕ್ಷಿಣ ಆಫ್ರಿಕಾ ಧೂಳಿಪಟ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Women’s Under-19 World Cup News:

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂಡರ್​ 19 ಫೈನಲ್​ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳಿಂದ ಜಯಭೇರಿ ಬಾರಿಸಿದೆ.ಮಲೇಷ್ಯಾದ ಕೌಲಾಲಂಪುರ್​ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 82 ರನ್​ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಭಾರತೀಯ ವನಿತೆಯರು 11.2 ಓವರ್​ಗಳಲ್ಲೇ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾದರು.

ಗೊಂಗಡಿ ತ್ರಿಷಾ (44) ಮತ್ತು ಸನಿಕಾ ಚಾಲ್ಕೆ (26) ಅಜೇಯವಾಗಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹಿಳಾ ಅಂಡರ್​ 19 WORLD CUP ಫೈನಲ್​ ಪಂದ್ಯದಲ್ಲಿ ಭಾರತೀಯ ವನಿತೆಯರು 9 ವಿಕೆಟ್​ಗಳಿಂದ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಸತತ ಎರಡನೇ ಬಾರಿಗೆ WORLD CUP​ ಮುಡಿಗೇರಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 2023ರಲ್ಲಿ ನಡೆದಿದ್ದ WORLD CUP​ನಲ್ಲೂ ಭಾರತ ಗೆಲುವು ಸಾಧಿಸಿತ್ತು.ಇದಕ್ಕೂ ಮುನ್ನ ಭಾರತಕ್ಕೆ ಬೃಹತ್​ ಗುರಿ ನೀಡುವ ಉದ್ದೇಶದಿಂದಾಗಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಭಾರತೀಯರ ಸ್ಪಿನ್​ ದಾಳಿಗೆ ಸಿಲುಕಿ ಅಲ್ಪ ಮೊತ್ತಕ್ಕೆ ಪತನ ಕಂಡಿತು.

ತಂಡದ ಪರ ವ್ಯಾನ್​ ವೂರ್​ಸ್ಟ್​ (23), ಕೌಲಿಂಗ್​ (15), ಕರ್ಬು ಮೆಸೊ (10) ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಎರಡಂಕಿ ಸ್ಕೋರ್​​ ಗಳಿಸಲು ಸಹ ಸಾಧ್ಯವಾಗಲಿಲ್ಲ. ಉಳಿದಂತೆ ವೈಷ್ವಿ ಶರ್ಮಾ, ಆಯುಷಿ ಶುಕ್ಲಾ, ಪಾರುಣಿಕ ಸಿಸೊಡಿಯಾ ತಲಾ 2 ವಿಕೆಟ್​ ಕಬಳಿಸಿದರೆ, ಶಭನಮ್​ ಶಕಿಲ್​ 1 ವಿಕೆಟ್​ ಉರುಳಿಸಿದರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಸೋಲಿಲ್ಲದೆ WORLD CUP ಎತ್ತಿ ಹಿಡಿದು ದಾಖಲೆ ಬರೆದಿದೆ.ಭಾರತದ ಪರ ಗೊಂಗಡಿ ತ್ರಿಷಾ 3 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು 4 ಓವರ್​ಗಳಲ್ಲಿ 15 ರನ್​ ಮಾತ್ರ ನೀಡಿ ವಿಕೆಟ್​ ಪಡೆದರು.

Trisha’s all-round performance:ಇತ್ತೀಚೆಗೆ ನಡೆದ ಏಷ್ಯಾ ಕಪ್‌ನಲ್ಲಿ ತ್ರಿಶಾ ಪ್ಲೇಯರ್​ ಆಫ್​ದಿ ಟೂರ್ನಿ ಪ್ರಶಸ್ತಿಗೂ ಪಾತ್ರರಾಗಿದ್ದರು. ಉಳಿದಂತೆ ವೈಷ್ಣವಿ ಶರ್ಮಾ WORLD CUP​ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 5 ರನ್​ಗೆ 5 ವಿಕೆಟ್​ ಪಡೆದಿದ್ದು ಇವರ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

WORLD CUP​ ಟೂರ್ನಿಯಲ್ಲಿ ಆಲ್​ರೌಂಡರ್ ಗೊಂಗಡಿ ತ್ರಿಷಾ​ ಉತ್ತಮ ಪ್ರದರ್ಶನ ತೋರಿ ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ (309) ಎನಿಸಿಕೊಂಡಿದ್ದಾರೆ.

ತ್ರಿಶಾ ಬ್ಯಾಟಿಂಗ್ ಜೊತೆಗೆ ಟೂರ್ನಿಯಲ್ಲಿ ಬೌಲಿಂಗ್​ ಮೂಲಕವೂ 7 ವಿಕೆಟ್‌ ಕಬಳಿಸಿದ್ದಾರೆ. ಫೈನಲ್‌ನಲ್ಲಿ ಸರ್ವತೋಮುಖ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಪ್ಲೇಯರ್​ ಆಫ್​ ದಿ ಟೂರ್ನಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು.

 

ಇದನ್ನು ಓದಿರಿ :ROHIT SHARMA:’ನನ್ನ ಪತ್ನಿ ನೋಡುತ್ತಿದ್ದಾಳೆ, ದಯವಿಟ್ಟು ಬಿಟ್ಟು ಬಿಡಿ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...

BOMB THREAT CALLS TO AIRLINES : 2024ರಲ್ಲಿ ವಿಮಾನಗಳಿಗೆ ಬಂದಿದ್ದು ಬರೋಬ್ಬರಿ 728 ಹುಸಿ ಬಾಂಬ್ ಕರೆ, ಇಂಡಿಗೋಗೆ ಅತಿ ಹೆಚ್ಚು

New Delhi News: 2024ರಲ್ಲಿ ಒಟ್ಟು 728 ಹುಸಿ ಬಾಂಬ್​ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ....

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...