Abhishek Sharma News:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಿಂದಲೇ ಅಬ್ಬರಿಸುತ್ತಿದೆ. ಅದರಲ್ಲೂ ABHISHEK ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಭಾರತದ ಪರವಾಗಿ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ABHISHEK ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿದ್ದಾರೆ.ಇದಕ್ಕೂ ಮೊದಲು ಅತ್ಯಂತ ವೇಗವಾಗಿ ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಲ್ಲಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲಿ ಹಿಟ್ಮ್ಯಾನ್ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ಈ ದಾಖಲೆ ಮುರಿಯಲು ABHISHEK ಸಾತಧ್ಯವಾಗಲಿಲ್ಲ.
5 boundaries 10 sixes 86 runs :ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದ ABHISHEK ಶರ್ಮಾ 37 ಎಸೆಗಳಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್ ಬಾರಿಸಿದರು. ಈ ವೇಳೆಗೆ ಬೌಂಡರಿಯಿಂದಲೇ 86 ರನ್ಗಳನ್ನು ಕಲೆ ಹಾಕಿದ್ದರು.
Fastest Half Century: ಆದರೆ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ವಿಶ್ವದ ಬ್ಯಾಟರ್ಗಳ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಈವರೆಗೆ ಈ ದಾಖಲೆ ಮುರಿಯಲು ವಿಶ್ವದ ಯಾವ ಬ್ಯಾಟರ್ಗೂ ಸಾಧ್ಯವಾಗಿಲ್ಲ. ಭಾರತ ನೆಲದಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ABHISHEK ಬರೆದಿದ್ದಾರೆ. ಇವರು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.
247 runs for the loss of 9 wickets; ಶಿವಂ ದುಬೆ – 30 ರನ್ ಗಳಿಸಿ ಈ ಪಂದ್ಯದಲ್ಲಿ ಎರಡನೇ ಹೆಚ್ಚು ಸ್ಕೋರರ ಆದರು. ಒಟ್ಟಾರೆ 9 ವಿಕೆಟ್ ನಷ್ಟಕ್ಕೆ ಭಾರತ ತಂಡ 247 ರನ್ ಪೇರಿಸಿತು.ಬ್ಯಾಟಿಂಗ್ ಬಂದಾಗಿನಿಂದಲೇ ಅಬ್ಬರಿಸಿರುವ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ಗೆ 248 ರನ್ಗಳ ಟಾರ್ಗೆಟ್ ನೀಡಿದ್ದಾರೆ. ABHISHEK ಶರ್ಮಾ 54 ಬೌಲ್ಸ್ಗೆ 135 ರನ್ ಚಚ್ಚುವ ಮೂಲಕ ಇಂಗ್ಲೆಂಡ್ ಬೌಲರ್ಗಳಿಗೆ ಬೆವರಿಳಿಸಿದರು.
Highest Run:ಅಂತರಾಷ್ಟ್ರೀಯ ಟಿ20 ಯಲ್ಲಿ ಭಾರತದ ಪರ ಅತ್ಯಧಿಕ ಸ್ಕೋರ್ ದಾಖಲಿಸಿದ ಮೊದಲ ಬ್ಯಾಟರ್ ಎಂಬ ದಾಖೆಯನ್ನು ABHISHEK ಶರ್ಮಾ ಬರೆದಿದ್ದಾರೆ.
ಇದನ್ನು ಓದಿರಿ :SUGAR PRODUCTION:2025ರಲ್ಲಿ ಸಕ್ಕರೆ ಉತ್ಪಾದನೆ ಶೇ 12ರಷ್ಟು ಕುಸಿತ ಸಾಧ್ಯತೆ.