ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರಿದ ಮಲ್ಲೇಶ್ವರಂನ ರಾಜಶೇಖರ್ ಆಟದ ಮೈದಾನದಲ್ಲಿ ನಿನ್ನೆ ಭಾನುವಾರ ಸಾಯಂಕಾಲ 4:30 ರ ವೇಳೆಗೆ ಕಬ್ಬಿಣದ ಗೇಟ್ ಮುರಿದು ಬಿದ್ದು ಮೃತಪಟ್ಟ 10 ವರ್ಷದ ಬಾಲಕ ನಿರಂಜನ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ :ರೇಣುಕಾಸ್ವಾಮಿ ಕೇಸ್‌ನಲ್ಲಿ A16 ಪಾತ್ರವೇನು ; ಮೊದಲ ಜಾಮೀನು ಭಾಗ್ಯ ಯಾರಿಗೆ.!
ಪತ್ರಗಾರರ ಜೊತೆ ಮಾತಾಡಿದ್ದೇನು ? ಮೃತ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ, ಬಿಬಿಎಂಪಿಯಿಂದ 5 ಲಕ್ಷ ರೂಪಾಯಿ ಮತ್ತು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ 5 ಲಕ್ಷ ರೂಪಾಯಿ ಸೇರಿ ಒಟ್ಟು 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
ಸಾವಿನ ತನಿಖೆಗೆ ಸಮಿತಿ ರಚನೆ: ಘಟನೆ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಟದ ಮೈದಾನದ ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುತ್ತಿದ್ದು, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಕೇಳಲಾಗುವುದು ಎಂದರು.
ಸಮಿತಿಯಲ್ಲಿ ಮುಖ್ಯ ಅಭಿಯಂತರರು ಹಾಗೂ ಪಶ್ಚಿಮ ವಲಯದ ಅಧಿಕಾರಿಗಳೂ ಇರಲಿದ್ದು, ವರದಿ ಆಧರಿಸಿ ವಾರ್ಡ್ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಗುತ್ತಿಗೆದಾರರು ಅಥವಾ ಏಜೆನ್ಸಿಗಳು ಆಟದ ಮೈದಾನಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಶ್ರೀ ವೆಂಕಟೇಶ್ವರ ದೇವಸ್ಥಾನದ ಚಂಡಮಾರುತ ; ಶ್ರೀ ಕೃಷ್ಣನ ದೇವಾಲಯಕ್ಕೆ ತಲುಪಿದೆಯಾ ?
ಮೃತ ಬಾಲಕನ ಕುಟುಂಬಕ್ಕೆ ಪರಿಹಾರದ ಕುರಿತು ಕೇಳಿದಾಗ, ಪರಿಹಾರದ ನಿರ್ಧಾರವನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದರು.
ಘಟನೆಯ ನಂತರ, ಬಿಬಿಎಂಪಿಯು ವಲಯದಾದ್ಯಂತ ಎಚ್ಚರಿಕೆ ವಹಿಸಿದೆ. ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಹಳೆಯ ಮತ್ತು ಹಾನಿಗೊಳಗಾದ ಕಬ್ಬಿಣದ ಗೇಟ್‌ಗಳನ್ನು ತೆಗೆದುಹಾಕಲು, ಮುರಿದ ಬೇಲಿಯನ್ನು ಸರಿಪಡಿಸಲು, ತೂಗಾಡುತ್ತಿರುವ ಅಪಾಯಕಾರಿ ಕೇಬಲ್‌ಗಳು ಯಾವುದಾದರೂ ಇದ್ದರೆ ತೆಗೆದುಹಾಕಿ ಭದ್ರತೆಯನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಇದನ್ನೂ ಓದಿ : ಭಾರತ, ಬೋಸ್ಟನ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ನಿರ್ಧರಿಸಿದ ಪ್ರಧಾನಿ ಮೋದಿ .!
ಇತ್ತೀಚೆಗಷ್ಟೇ ಧಾರ್ಮಿಕ ಧ್ವಜ ಕಟ್ಟುವಾಗ ಮೊದಲ ಮಹಡಿಯಿಂದ ಬಿದ್ದು 16 ವರ್ಷದ ಬಾಲಕ ಮೃತಪಟ್ಟಿದ್ದ. ಬಿದ್ದ ರಭಸಕ್ಕೆ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದವು. ಚರಂಡಿಗೆ ಸ್ಲ್ಯಾಬ್ ಹಾಕಿ ಮುಚ್ಚಿಲ್ಲ ಎಂದು ಸಂಬಂಧಿಕರು ಹಾಗೂ ಕಾರ್ಯಕರ್ತರು ಬಿಬಿಎಂಪಿಯನ್ನು ದೂರಿದ್ದರು.
ಆದರೆ, ಗೋವಿಂದಪುರದಲ್ಲಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಚರಂಡಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದು, ಅಪಘಾತ ಮತ್ತು ಸಾವಿಗೆ ಪಾಲಿಕೆ ಹೊಣೆಯಲ್ಲ ಎಂದು ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ.