Transfer or Retirement Fix! News
ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ಬಿ.ಆರ್ ನಾಯ್ಡು ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
TTD ಅಧ್ಯಕ್ಷ ಬಿ.ಆರ್ ನಾಯ್ಡು ಅವರ ಪ್ರಕಾರ ತಿರುಮಲದಲ್ಲಿ ಹಿಂದೂಯೇತರರಿಗೆ 2 ಆಯ್ಕೆಗಳಿವೆ. ತಿರುಪತಿಯಿಂದ ವರ್ಗಾವಣೆ ಆಗಬೇಕು. ಇಲ್ಲವೇ ಸ್ವಯಂ ನಿವೃತ್ತಿ ಹೊಂದಬೇಕು. ಹಿಂದೂ ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರು ಟಿಟಿಡಿ ಉದ್ಯೋಗಿಗಳಾಗಿ ಇರಬಾರದು. ಈ ಹಿನ್ನೆಲೆಯಲ್ಲಿ ಹಿಂದೂಯೇತರರಿಗೆ ಟಿಟಿಡಿ ಸ್ವಯಂ ನಿವೃತ್ತಿ ನೀಡಿ ಗೇಟ್ ಪಾಸ್ ಕೊಟ್ಟಿದೆ.ಬಿ.ಆರ್ ನಾಯ್ಡು ಅವರು TTD ಅಧ್ಯಕ್ಷರಾದ ಬಳಿಕ ತಿರುಮಲವನ್ನು ಸ್ವಚ್ಛಗೊಳಿಸುವ ಮಾತನಾಡಿದ್ದರು.
ಕೊಟ್ಟ ಮಾತಿನಂತೆ ಈಗ ಬಿ.ಆರ್ ನಾಯ್ಡು ಅವರು ತಿರುಮಲದಲ್ಲಿ ಹಿಂದೂಯೇತರ 18 ಉದ್ಯೋಗಿಗಳಿಗೆ VRS ನೀಡಿದ್ದಾರೆ. Laddu ವಿವಾದದ ಬಳಿಕ ಮೊದಲ ಬಾರಿಗೆ 18 ಹಿಂದೂಯೇತರರಿಗೆ VRS ನೀಡಲಾಗಿದೆ. ಇನ್ನೂ ಉಳಿದ ಹಿಂದೂಯೇತರ ಉದ್ಯೋಗಿಗಳಿಗೆ ವಿಆರ್‌ಎಸ್ ನೀಡಿಕೆಗೆ ಟಿಟಿಡಿ ಅಧ್ಯಕ್ಷರು ತೀರ್ಮಾನ ಮಾಡಿದ್ದಾರೆ.
ಇದನ್ನು ಓದಿರಿ :SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!