spot_img
spot_img

ರೈತ ಬೆಳೆದ ರೈತ ಫುಲ್‌ ಖುಷ್‌! ಕಲಬುರಗಿಯಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ 12 ಹತ್ತಿ ಖರೀದಿ ಕೇಂದ್ರ ತೆರೆಯಲಾಗಿದೆ. ನ. 8 ರಿಂದ ಹತ್ತಿ ಖರೀದಿ ಆರಂಭ ಮಾಡಲಾಗಿದ್ದು, ನವೆಂಬರ್ 19 ರ ವರೆಗೆ 1,111 ರೈತರಿಂದ 18.42 ಕೋಟಿ ರೂ.

ಮೌಲ್ಯದ ಹತ್ತಿ ಖರೀದಿ ಮಾಡಲಾಗಿದೆ. ಕ್ವಿಂಟಾಲ್‌ ಹತ್ತಿಗೆ ಸರಕಾರದಿಂದ 7,521 ರೂ. ಬೆಲೆ ನಿಗದಿ ಮಾಡಲಾಗಿದ್ದು, ಎಕರೆಗೆ 12 ಕ್ವಿಂಟಲ್‌ ಹತ್ತಿ ಖರೀದಿ ಮಾಡಲಾಗುತ್ತಿದೆ. ರೈತರು ಹತ್ತಿಗಳನ್ನು ತುಂಬಿಕೊಂಡ ವಾಹನದೊಂದಿಗೆ ಖರೀದಿ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು, ಖರೀದಿ ಕೇಂದ್ರ ಹೆಚ್ಚಿಸಲು ಆಗ್ರಹಿಸಲಾಗಿದೆ.
ಬಿಳಿ ಬಂಗಾರವೆಂದೇ ಕರೆಯುವ ಹತ್ತಿಗೆ ಭರಪೂರ ಬೆಲೆ ಸಿಗುತ್ತಿದ್ದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.ಹತ್ತಿ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಹತ್ತಿ ಬೆಲೆ ಕ್ವಿಂಟಾಲ್‌ಗೆ 6,200-6500ರೂ.ಗಳಿಗೆ ಇಳಿಕೆಯಾಗಿ ರೈತರಿಗೆ ಸಂಕಷ್ಟ ತಂದಿಟ್ಟಿತ್ತು. ಆದರೆ, ಕೇಂದ್ರ ಸರಕಾರ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ನಡೆಯುತ್ತಿರುವುದು ಹತ್ತಿ ಬೆಳೆದ ರೈತರಿಗೆ ತುಸು ನೆಮ್ಮದಿ ನೀಡಿದೆ.

ಜಿಲ್ಲೆಯಲ್ಲಿ ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕದಿಂದ ಹತ್ತಿ ಹೆಚ್ಚಾಗಿ ಬೆಳಯುವ ಪ್ರದೇಶಗಳಾದ ಅಫಜಲಪುರ ತಾಲೂಕಿನಲ್ಲಿ 4, ಕಲಬುರಗಿ ತಾಲೂಕಿನಲ್ಲಿ 3 ಹಾಗೂ ಜೇವರ್ಗಿ ತಾಲೂಕಿನಲ್ಲಿ 5 ಸೇರಿ ಒಟ್ಟು 12 ಖರೀದಿ ಕೇಂದ್ರ ತೆರೆಯಲಾಗಿದೆ.

ನ.8 ರಿಂದ ಹತ್ತಿ ಖರೀದಿ ಆರಂಭ ಮಾಡಲಾಗಿದ್ದು, ಮ.19ರ ವರೆಗೆ 1,111 ರೈತರಿಂದ 18.42 ಕೋಟಿ ರೂ. ಮೌಲ್ಯದ ಹತ್ತಿ ಖರೀದಿ ಮಾಡಲಾಗಿದೆ. ಕ್ವಿಂಟಾಲ್‌ ಹತ್ತಿಗೆ ಸರಕಾರದಿಂದ 7,521 ರೂ.ಬೆಲೆ ನಿಗದಿ ಮಾಡಲಾಗಿದ್ದು, ಎಕರೆಗೆ 12 ಕ್ವಿಂಟಲ್‌ ಹತ್ತಿ ಖರೀದಿ ಮಾಡಲಾಗುತ್ತಿದೆ.

ಖರೀದಿಸಿ ಒಂದು ವಾರದೊಳಗೆ ಪೂರ್ಣ ಹಣ ಅಕೌಂಟ್‌ಗೆ ಜಮಾ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹತ್ತಿ ಬೆಳೆದ ರೈತರಿಗೆ ಕೇಂದ್ರ ಸರಕಾರ ಅನುಕೂಲ ಕಲ್ಪಿಸಿದೆ. ಆದರೆ, ಕೆಲವು ನಿಯಮ ಹಾಗೂ ಸಾಗಣೆ ಹೆಚ್ಚಿನ ತೊಂದರೆ ಉಂಟು ಮಾಡಿವೆ. ಪಹಣಿಯಲ್ಲಿ ಮುಂಗಾರು ಬೆಳೆಯಲ್ಲಿ ಹತ್ತಿ ನೋಂದಣೆ ಆಗಿರಬೇಕು ಎಂಬ ನಿಯಮವಿದೆ.

ಹಲವು ರೈತರು ಇನ್ನೊಬ್ಬರ ಜಮೀನುಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಬೆಳೆ ಬೆಳೆಯುತ್ತಿದ್ದಾರೆ. ಇದೀಗ ಮಾಲೀಕರ ಪಹಣಿ, ಬ್ಯಾಂಕ್‌ ಅಕೌಂಟ್‌ ನಂಬರ್‌ ನೀಡಿ ಎನ್ನಲಾಗುತ್ತಿದೆ. ಇದರಿಂದ ಜಮೀನಿನ ಮಾಲೀಕರು ಹಣ ವಾಪಸ್‌ ಪೂರ್ಣ ಪ್ರಮಾಣದಲ್ಲಿ ನೀಡುತ್ತಾರೆಯೇ ಎಂದು ಚಿಂತೆ ಮಾಡುವಂತಾಗಿದೆ. ಇದರು ಕೂಡ ಬೆಂಬಲ ಬೆಲೆ ಹೊರತು ಪಡಿಸಿ ಬೇರೆಡೆ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಳ ಮಾಡಿದೆ.

ಅಫಜಲಪುರದಲ್ಲಿ ನಾಲ್ಕು ಖರೀದಿ ಕೇಂದ್ರ ತೆರೆಯಲಾಗಿದೆ. ಎಲ್ಲ ಖರೀದಿ ಕೇಂದ್ರಗಳ ಬಳಿ ರೈತರು ಹತ್ತಾರು ವಾಹನಗಳಲ್ಲಿ ಹತ್ತಿ ಹೇರಿಕೊಂಡು ಬರುತ್ತಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ಖರೀದಿ ಸಾಧ್ಯವಾಗುತ್ತಿಲ್ಲ ಎಂದು ಕೆಲವು ರೈತರು ದೂರುವಂತಾಗಿದೆ. ಇರಿಂದ ಮತ್ತೆ ಮಧ್ಯವರ್ತಿಗಳ ಹಾವಳಿ ತಲೆದೂರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಕೇವಲ ಮೂರು ತಾಲೂಕುಗಳಲ್ಲಿ ಮಾತ್ರ ಒಟ್ಟು 12 ಬೆಂಬಲ ಬೆಲೆ ಹತ್ತಿ ಖರೀದಿ ಕೇಂದ್ರ ಆರಂಭ ಮಾಡಲಾಗಿದೆ. ಜಿಲ್ಲಾದ್ಯಂದ 90 ಸಾವಿರ ಹೇಕ್ಟೆರ್‌ಗೂ ಹೆಚ್ಚಿನ ಜಮೀನಿನಲ್ಲಿ ಹತ್ತಿ ಬೆಳೆಯಲಾಗಿದೆ.

ಚಿತ್ತಾಪುರ ಹತ್ತು ಸಾವಿರ, ಸೇಡಂನಲ್ಲಿ 1700ಕ್ಕೂ ಹೆಚ್ಚಿ ಹೇಕ್ಟೆರ್‌ಗಳಲ್ಲಿ ಈ ಬಾರಿ ಹತ್ತಿ ಬೆಳೆ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಆದ್ದರಿಂದ ಈ ತಾಲೂಕುಗಳಲ್ಲಿ ಹೊಸ ಖರೀದಿ ಕೇಂದ್ರ ಹಾಗೂ ಜೇವರ್ಗಿ, ಅಫಜಲಪುರ ತಾಲೂಕುಗಳಲ್ಲಿ ಹೆಚ್ಚಿನ ಖರೀದಿ ಕೇಂದ್ರ ತೆರೆಯುವಂತೆ ರೈತರ ಒತ್ತಡವಾಗಿದೆ.

ತೇವಾಂಶ ಕಡಿಮೆ ಇರಬೇಕು ಎಂಬ ನಿಯಮ ಹಲವು ರೈತರಿಗೆ ತೊಂದರೆ ಉಂಟು ಮಾಡುತ್ತಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ ಹತ್ತಿಗೆ ಸರಕಾರದಿಂದ 7,521 ರೂ.ಬೆಲೆ ನಿಗದಿ ಮಾಡಲಾಗಿದೆ. ಆದರೆ, ಈ ಹತ್ತಿ ಖರೀದಿ ಕೇಂದ್ರಗಳಲ್ಲೂ ಹತ್ತಿ ತೇವಾಂಶದ ಮಾನದಂಡ ಹಲವು ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಚಳಿಗಾಲ ಇದ್ದಿದ್ದರಿಂದ ನಸುಕಿನ ಮಂಜು ಹತ್ತಿಯಲ್ಲಿ ತೇವಾಂಶ ಹೆಚ್ಚಿಸುತ್ತಿದೆ. ಆದರೆ, ಕಳೆದೊಂದು ವಾರದಿಂದ ಬಿಸಿಲು ಬೀಳುತ್ತಿರುವುದು ತುಸಿ ನೆಮ್ಮದಿ ತಂದಿದೆ.

ಚಿತ್ತಾಪುರ ಹಾಗೂ ಸೇಡಂ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಬೆಳೆಯಲಾಗಿದೆ. ಇಲ್ಲಂದ ಕಲಬುರಗಿಗೆ ಸಾಗಣೆ ಮಾಡುವುದು ತೊಂದರೆ ಉಂಟು ಮಾಡುತ್ತಿದೆ. ಆದ್ದರಿಂದ ಚಿತ್ತಾಪುರ ತಾಲೂಕಿನಲ್ಲಿಯೂ ಬೆಂಬಲ ಬೆಲೆಯ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಚನ್ನಮಲ್ಲಪ್ಪ, ಹತ್ತಿ ಬೆಳೆದ ರೈತ, ಚಿತ್ತಾಪುರ ಹೇಳಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...