ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಹಾಗೂ ಇನ್ನಿತರ ತಾಲೂಕುಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಐದಾರು ಪೊಲೀಸ್ ಸಿಬ್ಬಂದಿಗಳು ಸೇರಿ ದುಡ್ಡಿನ ಮಾಮೂಲು ಕಾರ್ಯಕ್ಕೆ ಮುಂದಾಗಿದ್ದಾರೆ.
ಅನೇಕ ವರ್ಷಗಳಿಂದ ಈ ದಸರಾ ದೀಪಾವಳಿ ಮಾಮೂಲಿ ಹಣ ವಸೂಲಿ ಮಾಡುವ ಕಾರ್ಯ ಇರಲಿಲ್ಲ. ಮತ್ತೆ 2024 ರಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಠಾಣೆಯ ಪರವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಖಾಸಗಿ ಸಂಘದ ಅಧ್ಯಕ್ಷರೊಬ್ಬರು ತಿಳಿಸಿದರು.
ದೇಶ ಹಾಗೂ ರಾಜ್ಯ ರಕ್ಷಣೆಗೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ. ಸಾರ್ವಜನಿಕರ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಹಾಗೂ ರೆಸ್ಟೋರೆಂಟ್, ಸಂಘ ಸಂಸ್ಥೆಗಳು ಅಧ್ಯಕ್ಷರ ಬಳಿ ಹಾಗೂ ಇನ್ನಿತರ ವ್ಯಾಪಾರ ಮಾಡುವವರ ಹತ್ತಿರ ಹಾಗೂ ಅವರ ಮಾಲೀಕರ ಬಳಿ ಹೋಗಿ ನಾವು ಪೋಲಿಸರು ದಸರ ಮತ್ತು ದೀಪಾವಳಿ ಹಬ್ಬಕ್ಕೆ ಮಾಮೂಲಿ ಕೊಡಿ ಎಂದು ದೌರ್ಜನ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಪೋಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಲಕ್ಷಗಟ್ಟಲೆ ಹಣವನ್ನು ಸಾರ್ವಜನಿಕರಿಂದ ಅಂಗಡಿ ಮಾಲೀಕರಿಂದ ಪಡೆದು ನಂತರ ಠಾಣೆಯಲ್ಲಿ ಇರುವ ಪೋಲೀಸ್ ಅಧಿಕಾರಿಗಳಿಗೆ, ಎಸ್.ಐ ಮತ್ತು ಎ.ಎಸ್.ಐ ಹಾಗೂ ಮುಖ್ಯಪೇದೆ, ಪೇದೆಗಳಿಗೆ ಹಣವನ್ನು ಭಾಗ ಮಾಡಿ ಹಂಚಿಕೊಳ್ಳುತ್ತಾರೆ. ಸವಾಲು ಯಾರು ಮಾಡಿರುತ್ತಾರೋ ಅವರಿಗೆ ಲಕ್ಷಗಟ್ಟಲೆ ಹಣ ಬರುತ್ತದೆ. ಇವರುಗಳು ಬಹಳ ವರ್ಷಗಳಿಂದ ಇದ್ದ ಠಾಣೆಯಲ್ಲಿ ಉಳಿದುಕೊಂಡಿದ್ದಾರೆ.
ಸವಾಲು ಹಾಕಿದ ಪೋಲೀಸ್ ಪೇದೆಗಳು ಒಂದು ಠಾಣೆಯಿಂದ ಐದಾರು ಸಿಬ್ಬಂದಿಗಳು ಸೇರಿ, ಅವರ ಠಾಣೆಯ ವ್ಯಾಪ್ತಿಗೆ ಬರುವ ಪ್ರತಿ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಿ ಬುಕ್ ಕೊಟ್ಟು ನಿಮ್ಮ ಹೆಸರು ಬರೆದು 5 ಸಾವಿರ, 10 ಸಾವಿರ ಹಣ ಕೊಡಿ ದಸರಾ-ದೀಪಾವಳಿ ಮಾಮೂಲು ಎಂದು ಹಣವನ್ನು ವಸೂಲಿ ಮಾಡುತ್ತಿದ್ದಾರೆ.
ಪ್ರತಿಯೊಂದು ಠಾಣೆಯಲ್ಲಿ ಐದಾರು ಸಿಬ್ಬಂದಿಗಳು ಈ ಮಾಮೂಲು ತರುವ ಕೆಲಸ ಮಾಡುತ್ತಾರೆ.
ನಗರದ ಶಾನ್ ಭೋಗ ಹೋಟೆಲ್ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ನಿಂತುಕೊಂಡು ಐವರು ಪೊಲೀಸರು ಸಿವಿಲ್ ಡ್ರಸ್ ನಲ್ಲಿ ಇಳಿದು ಹಣ ವಸೂಲಿ ಮಾಡುತ್ತಿರುವ ದುರ್ಘಟನೆ ನಡೆದಿದೆ.
‘ಮಾಮೂಲು’ ವಿರುದ್ಧ ವಿಜಯನಗರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಹರಿಬಾಬು ಅವರು ಕ್ರಮತೆಗೆದು ಕೊಳ್ಳಬೇಕು ಎಂದು ಆಗ್ರಹ.
ಸರ್ಕಾರ ಈಗ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಒಳಗೊಂಡಂತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಂತೆ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ಅಲ್ಲಿಯವರೆಗೆ ರಾಜ್ಯದಲ್ಲಿ ನಡೆಯುವ ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕು. ಹಣಕಾಸಿನ ಮತ್ತು ಇತರೆ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎ.ಡಿ. ಈಶ್ವರಪ್ಪ, ಹೊನ್ನಾಳಿ, ಕೆ.ಎಸ್ ಗೋವಿಂದರಾಜ್, ಬಿ.ಎಸ್. ಪುರುಷೋತ್ತಮ್, ಎಚ್. ಮಲ್ಲೇಶ್, ಬಿ.ಎಚ್. ಉದಯ್ ಕುಮಾರ್, ಎಂ. ಹಾಲೇಶ್, ಎಲ್.ಎಚ್. ಸಾಗರ್, ಆಲೂರು ನಿಂಗರಾಜ್, ಬಿ.ಎಂ. ನಿರಂಜನ್, ಹೆಗ್ಗೆರೆ ರಂಗಪ್ಪ, ಕೆ.ಎಸ್. ಗೋವಿಂದರಾಜ್, ಎಸ್. ಮಲ್ಲಿಕಾರ್ಜುನ್, ಎಚ್.ಕೆ. ಬಸವರಾಜ್, ಕೆ. ಏಕಾಂತಪ್ಪ, ಕುಂದುವಾಡ ಮಂಜುನಾಥ್, ನಾಗಭೂಷಣ್, ಓಂಕಾರಪ್ಪ, ಸೋಮಲಾಪುರ ಹನುಮಂತಪ್ಪ ಹಾಗೂ ಮುಖಂಡರುಗಳು ಭಾಗವಹಿಸಿದ್ದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now