spot_img
spot_img

ಮಾರುತಿ ಸುಜುಕಿ ಕಾರು ಒಂದು ಬಾರಿ ಚಾರ್ಜ್ ಮಾಡಿದ್ರೆ 500km ಚಲಿಸುತ್ತೆ .! ಹೊಸ ಎಲೆಕ್ಟ್ರಿ ವಾಹನ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಪೆಟ್ರೋಲ್ ಡೀಸೆಲ್ ಸಿಗದ ಕಾರಣ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ಸಲುವಾಗಿ ಮಾರುತಿ ಸುಜುಕಿ ಕಾರನ್ನು ಪ್ರಸ್ತುತ ಎಲೆಕ್ಟ್ರಿಕ್​ ವಾಹನಗಳ ಬಳಕೆ ಮತ್ತು ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ನಾನಾ ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಂತೆಯೇ ಇದೀಗ ಜನಪ್ರಿಯ ಮಾರುತಿ ಸುಜುಕಿ ಕಂಪನಿಯು ಮುಂದಿನ ವರ್ಷ ಹೊಸ ಎಲೆಕ್ಟ್ರಿಕ್​ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಕುರಿತಾಗಿ ಕಂಪನಿ ವರದಿ ಮಾಡಿದೆ.

ಇದನ್ನೂ ಓದಿ

ಮಾರುತಿ ಸುಜುಕಿ ಭಾರತದ ಮ್ಯಾನೇಜಿಂಗ್​​ ಡೈರೆಕ್ಟರ್​ ಮತ್ತು ಸಿಇಒ ಹಿಸಾಶಿ ಟಕೆಯುಚಿ ಈ ಕುರಿತಾಗಿ ಮಾತನಾಡಿದ್ದು, ‘ಕಂಪನಿಯು ಪರಿಚಯಿಸುತ್ತಿರುವ ಎಲೆಕ್ಟ್ರಿಕ್​ ವಾಹನವು 500 ಕಿಲೋ ಮೀಟರ್​​ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 60 ಕಿಲೋವ್ಯಾಟ್​​ ಗಂಟೆಗಳ ಬ್ಯಾಟರಿಯಿಂದ ಚಾಲಿತವಾಗುವ ಸಾಮರ್ಥ್ಯ ಇದಕ್ಕಿದೆ’ ಎಂದು ಹೇಳಿದ್ದಾರೆ.

ಮಾರುತಿ ಸುಜುಕಿಯು ಮುಂದಿನ ವರ್ಷ ಮಧ್ಯಮ ಗಾತ್ರದ ಎಸ್​​ಯುವಿ ಮತ್ತು ಇವಿಎಕ್ಸ್​​ ಎಲೆಕ್ಟ್ರಿಕ್ ವಾಹನ ಪರಿಚಯಿಸುವ ನಿರೀಕ್ಷೆ ಇದೆ. ಸದ್ಯ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಎಲೆಕ್ಟ್ರಿಕ್​ ವಾಹನಗಳ ಬೆಲೆ 15 ಲಕ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ತಿಂಗಳು ಮಾರುತಿ ಸುಜುಕಿ ಭಾರತ ಕಂಪನಿ 2047ರಲ್ಲಿ ಭಾರತವು ‘‘ವೀಕ್ಷತ್​ ಭಾರತ್​​’’ ಆಗಲು ಆಕಾಂಕ್ಷೆಯನ್ನು ಹೊಂದಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಸುಸ್ಥಿರ ಚಲನಶೀಲ ಭವಿಷ್ಯದ ಕಡೆಗೆ ಎಲೆಕ್ಟ್ರಿಕ್​ ಕಾರು ಪರಿಚಯಿಸುವುದಾಗಿ ಹೇಳಿತ್ತು. ಅದರಂತೆಯೇ ಇದೀಗ ಮುಂದಿನ ವರ್ಷ ಪರಿಚಯಿಸಲು ಸಿದ್ಧತೆ ಮಾಡುತ್ತಿದೆ.​

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...