ಒಂದೇ ವೇದಿಕೆಯಲ್ಲಿ ರಾಜ್ಯದ ಖ್ಯಾತ ಆರ್ಯುವೇದ, ಯೋಗ, ನ್ಯಾಚುರೋಪತಿ ಪರಿಣಿತರು ಭಾಗಿಯಾಗಿದ್ದಾರೆ. ಮಾತ್ರವಲ್ಲದೇ ಆರ್ಯುವೇದ, ಆರ್ಗ್ಯಾನಿಕ್ ಪ್ರಾಡೆಕ್ಟ್, ಸಿರಿಧಾನ್ಯ, ಫಿಟ್ ನೆಸ್ ಸ್ಟಾಲ್ ಗಳು ಹಾಗೂ ಕರ್ನಾಟಕದ ವಿವಿಧ ಭಾಗದ ರುಚಿಕರ ಊಟ ವೈವಿದ್ಯತೆಯು ಇದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಆರೋಗ್ಯ ಹಬ್ಬವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ಬಹುತೇಕ ಜನರಿಗೆ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಖ್ಯಾತ ಆಯುರ್ವೇದ ತಜ್ಞರು ಸಲಹೆ, ಸೂಚನೆಗಳನ್ನ ನೀಡುತ್ತಿದ್ದಾರೆ.
ಆರೋಗ್ಯ ಹಬ್ಬದ ವಿಶೇಷತೆ ಅಂದ್ರೆ ಅರೋಗ್ಯದಿಂದ ಇರುವವರು ಹೇಗೆ ತಮ್ಮ ಮುಂದಿನ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನ ಸುಲಭವಾಗಿ ತಿಳಿಯುವುದು. ಇದನ್ನು ಇಲ್ಲಿ ತಿಳಿಸಿಕೊಡಲಾಗುತ್ತಿದೆ. ಸಣ್ಣ ಶಿಸ್ತು, ಸಣ್ಣ ಬದಲಾವಣೆಯಿಂದ ಹೆಲ್ದಿ ಲೈಫ್ ಹೇಗೆ ನಡೆಸಬಹುದು ಎಂದು ತಜ್ಞ ವೈದ್ಯರು ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕಾಸೆಲ್ನಲ್ಲಿ ನಡೆಯುತ್ತಿರುವ ಆರೋಗ್ಯ ಹಬ್ಬದಲ್ಲಿ ಸಾಕಷ್ಟು ಜನರು ಈಗಾಗಲೇ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಆಗುತ್ತಿದ್ದಂತೆ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳ ಕುರಿತು ವೈದ್ಯರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಈ ಆರೋಗ್ಯ ಹಬ್ಬವು ಇಂದು ಮತ್ತು ನಾಳೆ ಇರಲಿದ್ದು ನಗರದ ವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ವಾಸ ಸಂಸ್ಥೆಯ ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ, ಪ್ರಶಾಂತಿ ಆಯುರ್ವೇದ ಸಂಸ್ಥಾಪಕರು ಡಾ.ಗಿರಿಧರ ಕಜೆ ಸೇರಿ ಗಣ್ಯರು ಹಾಜರಿದ್ದರು.