spot_img
spot_img

ಸಿಎಂ ಕೂತಿದ್ದ ವೇದಿಕೆಗೆ ನುಗ್ಗಿದ ಯುವಕ ; ವಿಧಾನಸೌಧದ ಆವರಣದಲ್ಲೇ ನಡೆದ್ದಿದ ಘಟನೆ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ವಿಧಾನಸೌಧ (Vidhana Soudha) ಮುಂದೆಯೇ ಭದ್ರತಾ ವೈಫಲ್ಯ ನಡೆದಿರುವ ಘಟನೆ ಇಂದು ನಡೆದಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಎದುರಾಗಿದ್ದು, ಏಕಾಏಕಿ ಯುವಕನೋರ್ವ ಸಿಎಂ ಬಳಿ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.

ಸಚಿವ ಮಹದೇವಪ್ಪ (Minister Mahadevappa) ಮಾತನಾಡುತ್ತಿದ್ದ ವೇಳೆ ಯುವನೋರ್ವ ಏಕಾಏಕಿ ವೇದಿಕೆ ಮುಂಭಾಗದಿಂದ ಹಾರಿ ವೇದಿಕೆ ಮೇಲೆ ಬರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ (Security Personnel) ಯುವಕನನ್ನು ವಶಕ್ಕೆ ಪಡೆದುಕೊಂಡು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ : ಸಂತೋಷದ ಸುದ್ದಿ ಸುಮಲತಾ ಅಂಬರೀಶ್ ಅವರಿಗೆ, ಅಜ್ಜಿ ಆಗುವರಿದ್ದಾರೆ; ಸೊಸೆ ಗರ್ಭಿಣಿ ಸುದ್ದಿ.!

ಇವತ್ತು ವಿಧಾನಸೌಧದ ಎದುರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಏಕಾಏಕಿ ಯುವ ಜಂಪ್‌ ಮಾಡಿ ವೇದಿಕೆಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿ ವೇದಿಕೆ ಮೇಲಿದ್ದ ಗಣ್ಯರು ತಬ್ಬಿಬ್ಬಾಗಿದ್ದರು.

ಕೂಡಲೇ ಸಿಎಂ ಅಂಗರಕ್ಷಕರು ಯುವಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯುವಕನನ್ನು ವಶಕ್ಕೆ ಪಡೆದರೂ ಆತನ ಸಿಎಂ ಕಡೆಗೆ ಶಾಲು ಎಸೆದು ಅಲ್ಲಿಂದ ಹೋಗಿದ್ದಾನೆ. ವಿಧಾನಸೌಧದ ಆವರಣದಲ್ಲೇ ಘಟನೆ ನಡೆದಿದ್ದು, ಸಿಎಂ ಕಾರ್ಯಕ್ರಮದಲ್ಲೇ ಭದ್ರತಾ ಲೋಪ ಘಟನೆ ನಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ವೇದಿಕೆ ಆಗಮಿಸಿದ ಯುವಕ ಯಾರು? ಯಾಕೆ ವೇದಿಕೆ ಬಂದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕ ಕರ್ನಾಟಕದ ಬಾವುಟದ ಬಣ್ಣ ಇರುವ ಟಾವೆಲ್​ ಹೆಗಲ ಮೇಲೆ ಹಾಕಿಕೊಂಡಿರುವುದು ದೃಶ್ಯಗಳಲ್ಲಿ ಕಂಡು ಬರುತ್ತದೆ.

ಇದೇ ಮೊದಲೇನು ಅಲ್ಲ? ಸಿಎಂ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ಲೋಪ ಆಗಿಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿ ರೋಡ್​ ಶೋ ಮಾಡುವ ವೇಳೆ ತೆರೆದ ವಾಹನದ ಮೇಲೆ ಹತ್ತಿ ಸಿಎಂ ಅವರಿಗೆ ಹೂವಿನ ಹಾರ ಯತ್ನಿಸಿದ್ದರು. ಆದರೆ ಈ ವೇಳೆ ಆತನ ಸೊಂಟದಲ್ಲಿ ಗನ್ ಕಂಡು ಬಂದಿತ್ತು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.

ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು..

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಅವರು, ಕರ್ನಾಟಕದಲ್ಲಿ ಪೊಲೀಸ್ ಇಲಾಖೆಗೆ ಜೀವ ಇದೆಯೋ ಇಲ್ಲವೋ ಎಂದು ಸಂದೇಹಿಸಿದ್ದಾರೆ. ವಿಧಾನಸೌಧದಲ್ಲಿ ಓರ್ವ ವೇದಿಕೆಗೆ ನುಗ್ಗಿ ಬರ್ತಾನೆ ಎಂದರೆ ಹಲವು ಪ್ರಶ್ನೆಗಳು ಎದುರಾಗುತ್ತಿದೆ. ಸಿಎಂ ಅಂಗರಕ್ಷಕರು ಏನು ಮಾಡುತ್ತಿದ್ದಾರೆ, ಪೊಲೀಸರು ಏನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೆಲವೇ ದಿನಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿತ್ತು, ಬಿಜೆಪಿ ಕಚೇರಿ ಬ್ಲಾಸ್ಟ್​ ಮಾಡಲು ಸಂಚು ಮಾಡಿದ್ದರು.

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...