Hyderabad News:
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ರೋಚಕ 5ನೇ ಟಿ20 ಪಂದ್ಯಕ್ಕೆ ನಟ AAMIR KHAN ಕೂಡಾ ಸಾಕ್ಷಿಯಾಗಿದ್ದರು. ಈ ಪಂದ್ಯದ ಕುರಿತು ಅವರು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
“ಟೀಮ್ ಇಂಡಿಯಾ ಮೈದಾನಕ್ಕೆ ಕಾಲಿಟ್ಟಾಗ ನನ್ನ ಮನದಲ್ಲಿ ಗೊತ್ತಿಲ್ಲದೆ ಖುಷಿ ಹುಟ್ಟಿಕೊಳ್ಳುತ್ತದೆ. ನಾನೂ ಕೂಡಾ ತಂಡದ ಸದಸ್ಯನೆಂದೇ ಪರಿಗಣಿಸುತ್ತೇನೆ. ಅದು ನನಗೆ ಹೆಮ್ಮೆ. ಆದರೆ ನನ್ನ ಜೀವಮಾನದಲ್ಲಿ ಮರೆಯಲಾರದ ದಿವೊಂದಿದೆ. ಅದು 2011ರ ವಿಶ್ವಕಪ್ ಫೈನಲ್. ಅದನ್ನೆಂದಿಗೂ ಮರೆಯಲಾರೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದ ಆ ದಿನ ತುಂಬಾ ವಿಶೇಷವಾಗಿತ್ತು” ಎಂದರು.
ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯ ನೋಡಲು ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಗಣ್ಯರು ಆಗಮಿಸಿದ್ದರು. ಈ ಪೈಕಿ ಬಾಲಿವುಡ್ ನಟ AAMIR KHAN ಕೂಡಾ ಒಬ್ಬರು.
ಬಳಿಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕುರಿತು ಮಾತನಾಡುತ್ತಾ, “ಸಚಿನ್ ಕ್ರಿಕೆಟ್‌ನಿಂದ ನಿವೃತ್ತರಾಗುವ ಮೊದಲು ಅವರ ಕೊನೆಯ ಪಂದ್ಯವನ್ನು ನಾನೂ ನೋಡಿದ್ದೆ. ಅವರ ಆಟ ಅದ್ಭುತ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರೆಂದಿಗೂ ನನ್ನ ನೆಚ್ಚಿನ ಕ್ರಿಕೆಟಿಗ” ಎಂದು ಹೇಳಿದರು.
Match Highlights:
ಭಾರತ ನೀಡಿದ್ದ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 97 ರನ್ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಭಾರತೀಯರು, ಬೌಲಿಂಗ್ನಲ್ಲೂ ಆರ್ಭಟಿಸಿದರು. ಮೊಹಮ್ಮದ್ ಶಮಿ 3 ವಿಕೆಟ್ ಉರುಳಿಸಿದರೆ, ವರುಣ್ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಹಾಗು ರವಿ ಬಿಷ್ಣೋಯಿ 1 ವಿಕೆಟ್ ಸಾಧನೆ ಮಾಡಿದರು.
ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಜಯಿಸಿ 4-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿತು. AAMIR KHAN ಈ ಪಂದ್ಯದಲ್ಲಿ ಭಾರತದ ಬ್ಯಾಟರ್ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.
ಕೇವಲ 37 ಎಸೆತಗಳಲ್ಲೆ ಶತಕ ಸಿಡಿಸಿ ದಾಖಲೆ ಬರೆದರು. ಅಭಿಷೇಕ್ ಬ್ಯಾಟಿಂಗ್ ಬಲದಿಂದ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ಇದನ್ನು ಓದಿರಿ : Maa Tujhe Salaam: Chhattisgarh Labourer Visits Meenakshi Amman Temple To Unite People