spot_img
spot_img

ನಕಲಿ ಕಟ್ಟಡ ಕಾರ್ಮಿಕ ಕಾರ್ಡ್ ರದ್ದು: ಸಚಿವ ಲಾಡ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ: ಮುಂದಿನ ನಾಲ್ಕೈದು ತಿಂಗಳಲ್ಲಿ ಶೇ.70ರಿಂದ 80ರಷ್ಟು ನಕಲಿ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು ರದ್ದು ಮಾಡುತ್ತೇವೆ ಎಂದು ಸಚಿವ ಸಂತೋಷ್​ ಲಾಡ್ ತಿಳಿಸಿದರು.

“ಕಾರ್ಮಿಕ ಇಲಾಖೆಯಿಂದ ‘ಅಂಬೇಡ್ಕರ್ ಸೇವಾ ಕೇಂದ್ರ’ ಎಂಬ ನೂತನ ಕಾರ್ಯಕ್ರಮಕ್ಕೆ ಜನವರಿ ಅಥವಾ ಫೆಬ್ರವರಿಯಲ್ಲಿ ಚಾಲನೆ ಸಿಗಲಿದೆ. ಈಗಾಗಲೇ 58 ಲಕ್ಷ ಇದ್ದ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು 38 ಲಕ್ಷಕ್ಕೆ ತಂದಿದ್ದೇವೆ” ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್​ ಲಾಡ್​ ತಿಳಿಸಿದ್ದಾರೆ. ನಗರದಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

“ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡುತ್ತದೆ. ಬಿಜೆಪಿಯವರಿಗೆ ನಾವು ಸದನದಲ್ಲಿ ಮಾತನಾಡಲು ಹೆಚ್ಚು ಅವಕಾಶ ನೀಡಿದ್ದೇವೆ. ಬಿಜೆಪಿ ನಾಯಕರು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಆಸಕ್ತಿ ತೋರಿಸಲಿ. ಅಭಿವೃದ್ಧಿ ಬಿಟ್ಟು ಬಿಜೆಪಿಯವರು ಕೇವಲ ವಿವಾದಾತ್ಮಕ ಹಾಗೂ ರಾಜಕೀಯ ವಿಷಯಗಳ ಕುರಿತು ಚರ್ಚೆಗೆ ಹೋಗ್ತಾರೆ” ಎಂದು ಹೇಳಿದರು.

“43 ವಿಭಾಗಗಳಲ್ಲಿ 43 ವಾಹನಗಳು ಸಂಚರಿಸಲಿವೆ. ಇಲಾಖೆಯ ಪ್ರತಿನಿಧಿಗಳು ನಮ್ಮ ಇಲಾಖೆಯಿಂದ ಲಾಭ ಪಡೆದ ಫಲಾನುಭವಿಗಳನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಲಿದ್ದಾರೆ. ಜೊತೆಗೆ, ನಕಲಿ ಕಾರ್ಮಿಕ ಕಾರ್ಡ್​ಗಳನ್ನು ಪತ್ತೆ ಹಚ್ಚಿ ಅವುಗಳನ್ನು ರದ್ದು ಮಾಡುತ್ತೇವೆ. ನಾಲ್ಕೈದು ತಿಂಗಳಲ್ಲಿ ಶೇ.70 ರಿಂದ 80ರಷ್ಟು ನಕಲಿ ಕಟ್ಟಡ ಕಾರ್ಮಿಕ ಕಾರ್ಡ್​ಗಳನ್ನು ರದ್ದು ಮಾಡುತ್ತೇವೆ” ಎಂದರು.

“ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಸೇರಿದಂತೆ ಯಾವುದೇ ಹೋರಾಟಕ್ಕೆ ಅಡ್ಡಿಪಡಿಸುತ್ತಿಲ್ಲ. ಯಾರೇ ಆಗಲಿ ಅಧಿಕಾರದಲ್ಲಿ ಇದ್ದಾಗ ಪ್ರತಿಭಟನೆಗಳು ನಡೆಯುವುದು ಸಹಜ ಪ್ರಕ್ರಿಯೆ. ಆ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತವೆ” ಎಂದು ತಿಳಿಸಿದರು.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

COLD WEATHER – ಚಾಮುಂಡಿಬೆಟ್ಟದ ಮಂಜಿನಲೋಕದಲ್ಲಿ ಮಿಂದೇಳಲು ಇದು ಸಕಾಲ

Mysore News: ವಾಸಿಗರು ಇಲ್ಲಿಗೆ ಬರುವುದು ಸೂರ್ಯ ಉದಯಿಸಿದ ಬಳಿಕ. ಹೀಗಾಗಿ ಅವರಿಗೆ ಚಾಮುಂಡಿ ಬೆಟ್ಟದ ಈ ಸೊಬಗಿನ ಪರಿಚಯವಿಲ್ಲ. ಸ್ವತಃ ಮೈಸೂರಿನ ಅನೇಕರಿಗೇ ಇದರ...

BAGALKOTE HORTICULTURE FAIR – ಬಾಗಲಕೋಟೆಯಲ್ಲಿ 13ನೇ ತೋಟಗಾರಿಕಾ ಮೇಳ

Bagalkote News: ಬಾಗಲಕೋಟೆಯಲ್ಲಿ ಮೂರು ದಿನಗಳ ತೋಟಗಾರಿಕಾ ಮೇಳ ಆರಂಭವಾಗಿದೆ. ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಲ್ಲಿನ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 13ನೇ ತೋಟಗಾರಿಕಾ ಮೇಳಕ್ಕೆ...

MEDICAL WASTE CASE – ತಮಿಳುನಾಡಿನಲ್ಲಿ ಎಸೆದ ವೈದ್ಯಕೀಯ ತ್ಯಾಜ್ಯ ತೆರವುಗೊಳಿಸಿದ ಕೇರಳ ಸರ್ಕಾರ

Chennai News: ತಮಿಳುನಾಡಿನಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದಕ್ಕಾಗಿ ಎನ್​ಜಿಟಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ದಕ್ಷಿಣ ಪೀಠದ ಕಟ್ಟುನಿಟ್ಟಿನ...

BOMB THREAT TO SCHOOLS – ದೆಹಲಿ ಶಾಲೆಗಳಿಗೆ ವಿದ್ಯಾರ್ಥಿಗಳಿಂದಲೇ ಬಾಂಬ್ ಬೆದರಿಕೆ

New Delhi News: ದೆಹಲಿಯ ಶಾಲೆಗಳಿಗೆ ಬಂದ್​ ನಕಲಿ ಬಾಂಬ್ ಬೆದರಿಕೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪತ್ತೆಯಾದ ಆರೋಪಿಗಳ ಕಂಡು ಪೊಲೀಸರೇ ಶಾಕ್​ ಆಗಿದ್ದಾರೆ. ಇಲ್ಲಿನ...