ಕಾಲ್ತುಳಿತ ಪ್ರಕರಣದಲ್ಲಿ ತಮಿಳು ನಟ ಅಲ್ಲು ಅರ್ಜುನ್ ಬಂಧನವಾಗಿದ್ದರ ಬಗ್ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನಟ ಅಲ್ಲು ಅರ್ಜುನ್ ಬೆನ್ನಿಗೆ ನಿಂತ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್ ಅವರು, ‘ಯಾವ ಸ್ಟಾರ್ ಕೂಡ ಫ್ಯಾನ್ಸ್‌ಗೆ ಹೀಗೆ ಮಾಡಿ ಅಂತ ಹೇಳಲ್ಲ. ಅಭಿಮಾನಿಗಳು ಏನೇ ಮಾಡಿದರೂ ಕೂಡ ಅವರು ಅದನ್ನು ಪ್ರೀತಿಯಿಂದ ಮಾಡುತ್ತಾರೆ.
ನನ್ನ ಸಿನಿಮಾ ರಿಲೀಸ್ ವೇಳೆ ಕೂಡ ಕಟೌಟ್‌ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿ ಹೋಗಿದ್ದರು. ಇವೆಲ್ಲಾ ಕೈ ಮೀರಿ ನಡೆಯುವಂತಹ ಸಂದರ್ಭಗಳು. ನಮ್ಮ ಕೈಯಲ್ಲಿ ಏನೂ ಕೂಡ ಇರುವುದಿಲ್ಲ.
ಏನೂ ಕೂಡ ಇರುವುದಿಲ್ಲ. ಇದರಲ್ಲಿ ಯಾರ ತಪ್ಪೂ ಕೂಡ ಇರಲ್ಲ. ಸಂದರ್ಭ ರಾಂಗ್ ಆಗಿರುತ್ತೆ’ ಎಂದು ಘಟನೆ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದರು. ನಾವು ಫ್ಯಾನ್ಸ್‌ಗೆ ಹುಷಾರ್ ಆಗಿ ಇರಿ ಎಂದು ಪದೇ ಪದೇ ಹೇಳುತ್ತಲೇ ಇರುತ್ತೇವೆ.
ಡಿಸೆಂಬರ್ 5ರಂದು ಪುಷ್ಪಾ-2 ಸಿನಿಮಾ ವಿಶ್ವದಾದ್ಯಂತ ಭರ್ಜರಿಯಾಗಿ ತೆರೆಕಂಡಿದೆ. ಈ ದಿನ ಹೈದ್ರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಪುಷ್ಪಾ-2 ಸಿನಿಮಾ ನೋಡಲು ಆಗಮಿಸಿದ್ದ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದರು. ಸಂಧ್ಯಾ ಥಿಯೇಟರ್‌ಗೆ ಅಂದು ನಟ ಅಲ್ಲು ಅರ್ಜುನ್ ಏಕಾಏಕಿ ಭೇಟಿ ನೀಡಿದ್ದಕ್ಕೆ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದೆ. ಇದರಿಂದಾಗಿ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದರು.
ಸಂಧ್ಯಾ ಥಿಯೇಟರ್‌ಗೆ ಅಂದು ನಟ ಅಲ್ಲು ಅರ್ಜುನ್ ಏಕಾಏಕಿ ಭೇಟಿ ನೀಡಿದ್ದಕ್ಕೆ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದೆ. ಯಾವುದೇ ಮುಂಜಾಗ್ರತೆ ಕ್ರಮ ಇಲ್ಲದೆ ನಟ ಅರ್ಜುನ್ ಥಿಯೇಟರ್‌ಗೆ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಬಳಿಕ ಪೊಲೀಸರು ನಟನಿಗೆ ನೋಟೀಸ್ ಕಳುಹಿಸಿದ್ದರು. ಆದರೆ ಈ ನೋಟೀಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಿದ್ದರಿಂದ ನಟನ ಮನೆಗೆ ಪೊಲೀಸರು ಕಳೆದ ದಿನ (ಡಿಸೆಂಬರ್ 13) ಅರ್ಜುನ್ ಅವರನ್ನು ಬಂದಿಸಿದ್ದರು. ಹೈದರಾಬಾದ್ ನ್ಯಾಯಾಲಯವು ಅಲ್ಲು ಅರ್ಜುನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಆದೇಶಿಸಿತ್ತು.
ಕಳೆದ ದಿನ ರಾತ್ರಿ ಜೈಲಿನಲ್ಲಿದ್ದ ನಟ ಬಂಧನವಾಗಿ 24 ಗಂಟೆಗಳಲ್ಲಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ.
ಅಲ್ಲು ಅರ್ಜುನ್ ಅವರನ್ನು ಕರೆದೊಯ್ಯಲು ಅವರ ತಂದೆ ಮತ್ತು ಮಾವ ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ತಲುಪಿದ್ದರು.
ನಿನ್ನೆಯೇ ಈ ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ಜಾಮೀನು ಸಿಕ್ಕಿತ್ತು. ಆದರೆ ಇದಾದ ನಂತರವೂ ರಾತ್ರಿ ಜೈಲಿನಲ್ಲೇ ಕಳೆಯಬೇಕಾಯಿತು. ತಮ್ಮ ನೆಚ್ಚಿನ ನಟ ಜೈಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.